
ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ (ರಿ) ಇದರ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಸ್ಥೆಯ 21ನೇ ವಾರ್ಷಿಕೋತ್ಸವ ರವಿವಾರ 19 – 11 – 2023 ರ ಅಪರಾಹ್ನ 3.30 ರಿಂದ ರಾತ್ರಿ 8.30ರ ತನಕ ಮಾತೋಶ್ರೀ (ಹವಾನಿಯಂತ್ರಿತ) ಹಾಲ್, ಮ್ಯಾಕ್ಸಿ ಗೌಂಡ್ ಎದುರುಗಡೆ, ಪಟೇಲ್ ಆರ್. ಮಾರ್ಟ್ ಮೇಲ್ಗಡೆ, ಸಂತೋಷಿ ಮಾತಾ ರೋಡ್, ಕಲ್ಯಾಣ್ (ಪ.) ಇಲ್ಲಿ ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ್ ನ ಅಧ್ಯಕ್ಷರಾದ ಜ್ಯೋತಿ ಪಿ. ಹೆಗ್ಡೆ, ಕುಂಠಿನಿ ಯವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಮುಖ್ಯ ಅತಿಥಿಯಾಗಿ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್, ಮುಂಬಯಿಯ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಸಿ. ರಾವ್, ಗೌರವ ಅತಿಥಿಗಳಾಗಿ ಥಾಣೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕುಶಲಾ ಎನ್. ಶೆಟ್ಟಿ, ಕನ್ನಡ ಸೇವಾ ಸಂಘ, ಪೊವಾಯಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಶಾಂತಿ ಡಿ. ಶೆಟ್ಟಿ ಉಪಸ್ಥಿತರಿರುವರು.
ಈ ಬಾರಿ ಕಲ್ಯಾಣ ಕಸ್ತೂರಿ ಸಾಹಿತ್ಯ ಪ್ರಶಸ್ತಿ – 2023 ನ್ನು ಧಾರವಾಡದ
ಖ್ಯಾತ ಹಿರಿಯ ಸಾಹಿತಿ ಶ್ರೀ ವಿದ್ಯಾಧರ ಮುತಾಲಿಕ್ ದೇಸಾಯಿ ಯವರಿಗೆ ನೀಡಿ ಗೌರವಿಸಲಾಗುವುದು. ಕಲ್ಯಾಣ್ ನ ಹೋಟೆಲು ಉದ್ಯಮಿ ಶ್ರೀ ಜಯ ಕೆ. ಶೆಟ್ಟಿ ಗೆ ಹಿರಿಯ ಸದಸ್ಯರ ಸನ್ಮಾನ ನೀಡಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಸಂಘ ಸಂಸ್ಥೆಗಳಿಂದ ಸಮೂಹ ಕನ್ನಡ ಭಕ್ತಿಗೀತೆ ಗಾಯನ ಸ್ಪರ್ಧೆ, ನೃತ್ಯ ವೈವಿಧ್ಯ, ಮಿಮಿಕ್ರಿ ಮತ್ತಿತರ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.
ಸಂಸ್ಥೆಯ ವಾರ್ಷಿಕೋತ್ಸವಕ್ಕೆ , ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಪ್ರಕಾಶ್ ಹೆಗ್ಡೆ, ಗೌ. ಅಧ್ಯಕ್ಷರಾದ ಮಂಜುನಾಥ್ ಎನ್. ರೈ., ಗೌ.ಪ್ರ. ಕಾರ್ಯದರ್ಶಿ ಕುಂಠಿನಿ ಪ್ರಕಾಶ್ ಹೆಗ್ಡೆ, ಗೌ. ಕೋಶಾಧಿಕಾರಿ ಪ್ರಕಾಶ್ ಎಸ್. ನಾಯ್ಕ್, ಜೊತೆ ಕಾರ್ಯದರ್ಶಿ ಶ್ರೀಮತಿ ಕುಮುದಾ ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಚೆನ್ನವೀರಪ್ಪ ಅಡಿಗಣ್ಣವರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ಬಿ. ಶೆಟ್ಟಿ, ಸಾಂಸ್ಕೃತಿಕ -ಸಾಹಿತ್ಯ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸರೋಜಾ ಎಸ್. ಅಮಾತಿ, ಮಾಜಿ ಅಧ್ಯಕ್ಷರು, ಸಲಹೆಗಾರರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಮಹಿಳಾ ವಿಭಾಗದ ವತಿಯಿಂದ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.