
ನಮ್ಮ ಮಾತೃಭಾಷೆಯಲ್ಲಿ ಸಂಸ್ಕೃತಿ ಸಂಸ್ಕಾರವಿದೆ : ರಾಧಾಕೃಷ್ಣ ಶೆಟ್ಟಿ
ಗುಜರಾತ್ ನ 5. ಕರ್ನಾಟಕ ಸಮಾಜ ಸೂರತ್ ಇದರ ಆಶ್ರಯದಲ್ಲಿ ನವೆಂಬರ್ 26ರ ರವಿವಾರ ಜೀವನ್ ಭಾರತಿ ಸಭಾಂಗಣ ನಾನುಪುರ ಸೂರತ್ ಇಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಧಾಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ಕನ್ನಡ ರಾಜ್ಯೋತ್ಸವ, ಕನ್ನಡ ಭಾಷಾಭಿಮಾನ ಮತ್ತು ಒಗ್ಗಟ್ಟಿನ ನಮ್ಮೆಲ್ಲರ ಒಗ್ಗಟ್ಟು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ ನಮ್ಮ ಭಾಷೆಯಲ್ಲಿ ಸಂಸ್ಕೃತಿ ಇದೆ ಸಂಸ್ಕಾರವಿದೆ ಇದನ್ನು ಮುಂದಿನ ಯುವ ಜನಾಂಗ ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದು ನುಡಿದರು

ಸಂಘದ ಅಧ್ಯಕ್ಷರಾದ ಮನೋಜ್ ಪೂಜಾರಿಗಳು ಆಗಮಿಸಿದ ಅತಿಥಿಗಳಿಗೆ ಮತ್ತು ಸಂಘಟಣೆ ಮತ್ತು ಕಾರ್ಯಕ್ರಮಕ್ಕೆ ಸಹಕರಿಸುವವರಿಗೆಲ್ಲಾ ವಂದಿಸುತ್ತಾ, ಸಂಘಟಣೆಯ ಔಚಿತ್ಯ, ಸಹಕಾರದ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿ ಐ ಐ ಟಿ ಸೂರತ್ ಇದರ ನಿರ್ದೇಶಕ . ಪ್ರೊ. ಜೆ ಯಸ್ ಭಟ್ ಮಾತನಾಡುತ್ತಾ ಸಂವಿಧಾನ ದಿನ ಪ್ರಾಮುಖ್ಯತೆ ವಿವರಿಸಿ,ಕರ್ನಾಟಕ ರಾಜ್ಯೋತ್ಸವದ ಹಿನ್ನಲೆ,ಕನ್ನಡ ನಾಡಿ ಭಾಷೆ ಸಂಸ್ಕೃತಿಯ ಸೊಗಡಿನ ಬಗ್ಗೆ ಮಾತನಾಡಿ, ಕವನ ವಾಚಿಸಿದರು

ವೇದಿಕೆಯಲ್ಲಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷರು ತುಳು ಐಸಿರಿ ವಾಪಿ, ರವಿನಾಥ್ ಶೆಟ್ಟಿ ಗೌ.ಅಧ್ಯಕ್ಷರು ತುಳು ಸಂಘ ಅಂಕಲೇಶ್ವರ, ರಾಮಚಂದ್ರ ಶೆಟ್ಟಿ ಗೌ.ಅಧ್ಯಕ್ಷರು ಕರ್ನಾಟಕ ಸಮಾಜ ಸೂರತ್, ಮನೋಜ್ ಪೂಜಾರಿ ಅಧ್ಯಕ್ಷರು ಕರ್ನಾಟಕ ಸಮಾಜ ಸೂರತ್, ಶಂಕರ್ ಶೆಟ್ಟಿ ಅಧ್ಯಕ್ಷರು ತುಳು ಸಂಘ ಅಂಕಲೇಶ್ವರ, ಉದಯ್ ಶೆಟ್ಟಿ, ಗೌ.ಪ್ರ.ಕಾರ್ಯದರ್ಶಿ ತುಳು ಐಸಿರಿ ವಾಪಿ,ಶ್ರೀ ಶಿವರಾಂ ಶೆಟ್ಟಿ, ಶ್ರೀ ಜಯಂತ್ ಶೆಟ್ಟಿ,ಶ್ರೀ ಶ್ರೀನಿವಾಸ್ ಶೆಟ್ಟಿಗಾರ್, ಪ್ರಭಾಕರ ಶೆಟ್ಟಿ, ಸಾಧು ಪೂಜಾರಿ, ಸಾಧನಾ ರಾವ್ ಸುನಿತಾ ಆರ್ ಶೆಟ್ಟಿ, ನರೇಶ್ ಕುಲಾಲ್ , ಹರೀಶ್ ಶೆಟ್ಟಿ, ದಿನೇನ್ ಶೆಟ್ಟಿ, ರಾಧಾಕೃಷ್ಣ ಮೂಲ್ಯ ಉಪಸ್ಥಿತರಿದ್ದರು
ಕಾರ್ಯಕ್ರಮ ರಂಜನಿ ಪಿ ಶೆಟ್ಟಿ ಮತ್ತು ಸೌಮ್ಯ ಪಿ ಪೂಜಾರಿ ನಿರೂಪಿಸಿದರು.
ಕ್ರೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಾಂತಿ ಡಿ ಶೆಟ್ಟಿಯವರು ಸಂಯೋಜಿಸಿದರು. ಕೊನೆಯಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಧನ್ಯವಾದ ನೀಡಿದರು.
ಹಿರಿಯ ಕಲಾವಿದರಾದ ಸುರೇಶ್ ಶೆಟ್ಟಿ ಮತ್ತು ಸಂಘದ ಹಿರಿಯ ಸದಸ್ಯರಾದ ಸುಂದರ್ ಕೋಟ್ಯಾನರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕ್ರೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಹಿರಿಯರ ನೂರು ಮೀಟರ್ ಓಟ . ಕೂಟದಲ್ಲಿ ಭಾಗವಹಿಸಿ ಪದಕ ವೀಜೇತರಾದ ರಾಧಾಕೃಷ್ಣ ಶೆಟ್ಟಿ ಮತ್ತು ರಾಮಚಂದ್ರ ವಿ ಶೆಟ್ಟಿ ಇವರನ್ನು ಅವರವರ ಧರ್ಮ ಪತ್ನಿಯರು ಶಾಲು ಹೊದಿಸಿ, ಪದಕ ತೊಡಿಸಿ, ಪುಷ್ಪ ಗುಚ್ಚ ನೀಡಿ ಸಂನ್ಮಾನಿಸಿದರು.
ಉಪಾಧ್ಯಕ್ಷರುಗಳಾದ ರಮೇಶ್ ಭಂಡಾರಿ ಬಾರ್ಡೋಲಿ, ಉಮೇಶ್ ಸಪಲಿಗ, ಅಜಿತ್ ಶೆಟ್ಟಿ ಅಂಕೇಶ್ವರ, ಪ್ರಭಾಕರ್ ಶೆಟ್ಟಿ ಕೊಸಂಬಾ, ಸಂತೋಷ್ ವಿ. ಶೆಟ್ಟಿ, ನಾಗರಾಜ್ ಶೆಟ್ಟಿ, ರಾಧಾಕೃಷ್ಣ ಮೂಲ್ಯ ಕೆ. (ಗೌ. ಪ್ರ ಕಾರ್ಯದರ್ಶಿ )ಚಂದ್ರಹಾಸ್ ಬಿ. ಸಪಲಿಗ (ಖಜಾಂಚಿ)ಶಾಂತಿ ಡಿ. ಶೆಟ್ಟಿ (ಸಹ ಕಾರ್ಯದರ್ಶಿ ) ಪ್ರಶಾಂತ್ ಶೆಟ್ಟಿಗಾರ್ (ಸಹ ಖಜಾಂಚಿ) ಗಣೇಶ್ ಶೆಟ್ಟಿ (ಸಂಘಟನಾ ಕಾರ್ಯದರ್ಶಿ)
ಸಲಹಾ ಸಮಿತಿಯಸದಸ್ಯರದ ವಸಂತ್ ಎಸ್. ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಶಿವರಾಮ್ ಶೆಟ್ಟಿ ರಘುಪತಿ ಆಚಾರ್ಯ, ಜಯಂತ್ ಸಿ. ಶೆಟ್ಟಿ, ದಿವಾಕರ್ ಬಂಜನ್ ಮಹಿಳಾ ವಿಭಾಗ ಕಾರ್ಯಧ್ಯಕ್ಷೇ ಸೌಮ್ಯ ಪಿ. ಪೂಜಾರಿ. ಕಾರ್ಯದರ್ಶಿ ಶ್ರೇಯ ಪಿ. ಶೆಟ್ಟಿ.ಉಮಾ ಆರ್. ಮೂಲ್ಯ (ಸಹ ಕಾರ್ಯದರ್ಶಿ)ಆಡಳಿತ ಮಂಡಳಿ ಸದಸ್ಯರ ದಿನೇಶ್ ಬಿ. ಶೆಟ್ಟಿ, ವಿಶ್ವನಾಥ್ ಪೂಜಾರಿ, ಸಾಧು ಪೂಜಾರಿ, ಭೋಜ ಸಫಲಿಗ, ಸುನಿತಾ ಆರ್. ಶೆಟ್ಟಿ, ಕಸ್ತೂರಿ ಎಲ್. ಶೆಟ್ಟಿ, ಅಮಿತಾ ಯು, ಸಪಲಿಗ ವನಿತಾ ಜೆ. ಶೆಟ್ಟಿ, ರಂಜನಿ ಪಿ. ಶೆಟ್ಟಿ, ಅಮಿತಾ ಜೆ. ಶೆಟ್ಟಿ, ಗಂಗಾಧರ್ ಶೆಟ್ಟಿಗಾರ್, ಸತೀಶ್ ದೇವಾಡಿಗ ಮತ್ತಿತರ ಸದಸ್ಯರು ಸಹಕರಿಸಿದರು.
ಕ್ರೀಡಾಕೂಟದ ಯಶಸ್ವಿಗಾಗಿ ಗೀತಾ ಯಚ್ ಶೆಟ್ಟಿ ಮತ್ತು ತಂಡದವರು ಶ್ರಮಿಸಿದರೆ,
ಮನೋರಂಜನಾ ಕಾರ್ಯಕ್ರಮದ ಯಶಸ್ಸಿಗಾಗಿ ಪದ್ಮಾವತಿ ಯಸ್ ಪೂಜಾರಿ ಮತ್ತು ತಂಡದವರು ಶ್ರಮಿಸಿದರು.
ಮಧ್ಯಾಹ್ನ ನಂತರ ಶ್ರೀ ಗೀತಾಂಬಿಕ ಕೃಪಾಪೋಷಿತ ಯಕ್ಷಗಾನ ಮಂಡಳಿ ಅಸಲ್ಪ ಘಾಟ್ಕೊಪ್ಪ ಇವರಿಂದ’ ಗದಾಯುದ್ಧ ‘ಯಕ್ಷಗಾನ ಪ್ರದರ್ಶನ ನಡೆಯಿತು..