
ಡೊಂಬಿ ವಲಿ ಪಶ್ಚಿಮ, ಟೇಲ್ಕಸ್ ವಾಡಿ ಯ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 10ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ ಇದೇ ಬರುವ ದಿನಾಂಕ 10-12-2023 ಆದಿತ್ಯವಾರದಂದು ಶ್ರೀ ಶರತ್ ಗುರುಸ್ವಾಮಿ ಕುಡ್ಗಿಹಿತ್ಲು ಇವರ 17ನೇ ವರ್ಷದ ಶಬರಿಮಲೆ ಯಾತ್ರೆ ಹಾಗೂ ಇವರ ಮಾರ್ಗದರ್ಶನದಲ್ಲಿ
ನಡೆಯಲಿರುವುದು.
ಬೆಳಿಗ್ಗೆ ಗಂಟೆ 6:00 ಕ್ಕೆ ಗಣಹೋಮ, 8:00 ಕ್ಕೆ ಭಜನೆ, ಮಧ್ಯಾಹ್ನ ಗಂಟೆ 12:00 ಕ್ಕೆ ಪಡಿಪೂಜೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಲಿದೆ.


ಶ್ರೀ ಸ್ವಾಮಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಈ ವರ್ಷದ ಮಾಲಾಧಾರರಾದ ಶ್ರೀ ಶರತ್ ಗುರುಸ್ವಾಮಿ, ಶ್ರೀ ದಿನೇಶ್ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಹರೀಶ್ ಸ್ವಾಮಿ, ಶ್ರೀ ಸುಧಾಕರ್ ಸ್ವಾಮಿ, ಶ್ರೀ ಸುರೇಶ್ ಸ್ವಾಮಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ವಿಶೇಷ ಸೂಚನೆ :
ಶ್ರೀ ಶಬರಿ ಆಯ್ಯಪ್ಪ ಭಜನಾಮಂಡಳಿ, ಡೊಂಬಿವಲಿ (ಪಶ್ಚಿಮ) ಇವರ ದಶಮಾನೋತ್ಸವದ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರವಿವಾರ ದಿನಾಂಕ 17/12/2023 ರಂದು ಅಪರಾಹ್ನ 3.30 ಕ್ಕೆ ಸರಿಯಾಗಿ ಲೇವಾಭವನ, ದತ್ತ ನಗರ, ಡೊಂಬಿವಲಿ (ಪೂರ್ವ) ಇಲ್ಲಿ ಸಿರಿಕಲಾ ಮೇಳ ಬೆಂಗಳೂರು ಹಾಗೂ ಅತಿಥಿ ಕಲಾವಿದರಿಂದ “ಕಂಸ ದಿಗ್ವಿಜಯ-ಕಂಸ ವಧೆ” ಎಂಬ ಕನ್ನಡ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಕಲಾಭಿಮಾನಿಗಳಾದ ತಾವೆಲ್ಲರು ಆಗಮಿಸಿ ಈ ಕಾರ್ಯಕ್ರಮವನ್ನು ಚಂದಗಾಣಿಸಿ ಕೋಡಬೇಕಾಗಿ ವಿನಂತಿ.
.
.
.