
ತೆಂಕ ಎರ್ಮಾಳು ನಿವಾಸಿ ವೆಂಕಟೇಶ್ ಕೃಷ್ಣಪ್ಪ ಕೋಟ್ಯಾನ್ (63 ) ಅವರು ಶನಿವಾರ ಡಿಸೆಂಬರ್, 3 ರ, ಶನಿವಾರದಂದು ದೊಂಬಿವಲಿ ಪೂರ್ವ , ತಮ್ಮ ನಿವಾಸದಲ್ಲಿ, ಹೃದಯಾಘಾತ ದಿಂದ ನಿಧನ ಹೊಂದಿದರು.
ವೆಂಕಟೇಶ್ ಕೋಟ್ಯಾನ್ ಇವರು, ಕನ್ನಡ ಕಲಾ ಸಮಾಜ ಕೋಟೆ ಮುಂಬೈ ಸಕ್ರಿಯ ಸದಸ್ಯ ಹಾಗೂ ಸಮಾಜ ಸೇವಕ ,ಉತ್ತಮ ಸಂಘಟಕರಾಗಿದ್ದು, ಪತ್ನಿ , ಇಬ್ಬರು ಪುತ್ರರು, 4 ಮಂದಿ ತಂಗಿಯಂದಿಯರು, 3 ಮಂದಿ ತಮ್ಮಂದಿರನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವೆಂಕಟೇಶ್ ಕೋಟ್ಯಾನ್ ಇವರ ನಿಧನಕ್ಕೆ ಕನ್ನಡ ಕಲಾ ಸಮಾಜದ ಹಿರಿಯ ಕಾರ್ಯಕಾರಿ ಸದಸ್ಯರು ಹಾಗೂ ಸರ್ವ ಸದಸ್ಯ ವರ್ಗದವರು ಸಂತಾಪ ಸೂಚಿಸಿದ್ದಾರೆ.