



12-12-2023ನೇ ಮಂಗಳವಾರ ಮೊದಲ್ಗೊಂಡು ತಾರೀಕು 23-12-2023ನೇ ಶನಿವಾರದ ವರೆಗೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವ ಜರಗಲಿರುವುದು.
ತತ್ಸಂಬಂಧವಾಗಿ ತಾರೀಕು 18-12-2023ನೇ ಸೋಮವಾರ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಹಾಗೂ ತಾರೀಕು 21-12-2023ನೇ ಗುರುವಾರ ಮಹಾರಥೋತ್ಸವ ಜರಗಲಿರುವುದು.
ಆ ಪ್ರಯುಕ್ತ ತಾವು ತಮ್ಮ ಇಷ್ಟಮಿತ್ರರೊಂದಿಗೆ ಬಂದು, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಸುಬ್ರಹ್ಮಣ್ಯ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀ ವೇ। ಮೂ |ಹಯವದನ ತಂತ್ರಿಗಳು, ಶ್ರೀ ವೇ। ಮೂ। ವಿಷ್ಣುಮೂರ್ತಿ ಭಟ್, ಶಿರ್ವ ಕೋಡು ಶ್ರೀ ಜಯಶೀಲ ಹೆಗ್ಡೆ ಅನುವಂಶೀಯ ಆಡಳಿತ ಮೊಕ್ತಸರರು ಮತ್ತು ಗ್ರಾಮಸ್ಥರು, ಅರ್ಚಕರು ಅಪೇಕ್ಷಿಸಿದ್ದಾರೆ.
ತಾ. 12-12-2023ನೇ ಮಂಗಳವಾರ: ಶ್ರೀ ದೇವರ ಗರ್ಭಗುಡಿಯ ಸುತ್ತು ಪೌಳಿಯ ನೂತನ ಕಾಷ್ಠವೃತದ ಸಮರ್ಪಣೆ, ಬೆಳಿಗ್ಗೆ 8-00: ಪುಣ್ಯಾಹ ವಾಚನ, ಗಣಯಾಗ, ಸಾನ್ನಿಧ್ಯ ಕಲಶ (ಪಂಚವಿಂಶತಿ ಕಲಶ), ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ.
ಧಾರ್ಮಿಕ ಕಾರ್ಯಕ್ರಮಗಳು :
ತಾ. 12-12-2023ನೇ ಮಂಗಳವಾರ: ಬೆಳಿಗ್ಗೆ ಘಂಟೆ 7-00ಕ್ಕೆ ಉಷಃಕಾಲ ಪೂಜೆ, 9-00ಕ್ಕೆ ಪಂಚಾಮೃತಾಭಿಷೇಕ, ಪ್ರಧಾನ ಹೋಮ, ಕಲಾಶಾಭಿಷೇಕ, ಮಧ್ಯಾಹ್ನ 12-00ಕ್ಕೆ ಮಹಾಪೂಜೆ,
ಸಂತರ್ಪಣೆ, ರಾತ್ರಿ 8-00ಕ್ಕೆ ಉತ್ಸವಮೂರ್ತಿ ಹೊರಡುವುದು, 11-00ಕ್ಕೆ ರಂಗಪೂಜೆ, 12-00ಕ್ಕೆ ದೀಪೋತ್ಸವ, ಬಲಿ.
ತಾ. 13-12-2023ನೇ ಬುಧವಾರದಿಂದ 15-12-2023ನೇ ಶುಕ್ರವಾರದವರೆಗೆ: ಪ್ರತಿದಿನ ಬೆಳಿಗ್ಗೆ ಘಂಟೆ 7-00ಕ್ಕೆ ಉಷಃಕಾಲ ಪೂಜೆ, 9-00ಕ್ಕೆ ಪಂಚಾಮೃತಾಭಿಷೇಕ, ಪ್ರಧಾನ ಹೋಮ, ಕಲಶಾಭಿಷೇಕ, 11-00ಕ್ಕೆ ಮಹಾಪೂಜೆ, ರಾತ್ರಿ 8-00ಕ್ಕೆ ನಿತ್ಯಬಲಿ.
ತಾ. 16-12-2023ನೇ ಶನಿವಾರ: ಬೆಳಿಗ್ಗೆ ಘಂಟೆ 7-00ಕ್ಕೆ ಉಷಃಕಾಲ ಪೂಜೆ, ಘಂಟೆ 9-00ಕ್ಕೆ ಪಂಚಾಮೃತಾಭಿಷೇಕ, ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ರಾತ್ರಿ 8-00ಕ್ಕೆ ನಿತ್ಯಬಲಿ, 9-00ಕ್ಕೆ ಅಂಕುರ ಬಲಿ, 9-30ಕ್ಕೆ ಅಂಕುರಾರೋಪಣ.
ತಾ. 17-12-2023ನೇ ರವಿವಾರ: ಬೆಳಿಗ್ಗೆ ಧ್ವಜಾರೋಹಣ, ಬಲಿ, ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ರಾತ್ರಿ ಘಂಟೆ 7-00ಕ್ಕೆ ವಿಶೇಷ ಬಲಿ, 9-00ಕ್ಕೆ ಮಹಾರಂಗಪೂಜೆ, ಭೂತಬಲಿ.
ತಾ. 18-12-2023ನೇ ಸೋಮವಾರ: ಬೆಳಿಗ್ಗೆ ಪಂಚಾಮೃತಾಭಿಷೇಕ, ಕಲಾಶಾಭಿಷೇಕ, ಮಹಾಪೂಜೆ, ಬಲಿ, ಷಷ್ಠಿ ಮಹೋತ್ಸವ, ರಥೋತ್ಸವ, ಮಹಾ ಅನ್ನಸಂತರ್ಪಣೆ, ರಾತ್ರಿ 8-00ಕ್ಕೆ ಬಲಿ, ರಥೋತ್ಸವ, ಭೂತ ಬಲಿ.
ತಾ. 19-12-2023ನೇ ಮಂಗಳವಾರ: ಬೆಳಿಗ್ಗೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಹೋಮ, ಮಹಾಪೂಜೆ, ರಾತ್ರಿ ಘಂಟೆ 8-00ಕ್ಕೆ ಊರಾಯಣ ಬಲಿ, ಪೂಜೆ, ಭೂತ ಬಲಿ.
ತಾ. 20-12-2023ನೇ ಬುಧವಾರ: ಬೆಳಿಗ್ಗೆ ಪಂಚಾಮೃತಾಭಿಷೇಕ, ಆಶ್ಲೇಷಾ ಬಲಿ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಘಂಟೆ 8-00ಕ್ಕೆ ಬಲಿ, ಕಟ್ಟೆಪೂಜೆ, ಭೂತ ಬಲಿ.
ತಾ. 21-12-2023ನೇ ಗುರುವಾರ: ಬೆಳಿಗ್ಗೆ ಪಂಚಾಮೃತಾಭಿಷೇಕ, ಅಷ್ಟಕುಲ ನಾಗಪೂಜಾ, ಹೋಮ ಕಲಶಾಭಿಷೇಕ, ಮಹಾಪೂಜೆ, ರಥಶುದ್ದಿ ಬಲಿ, ರಥಾರೋಹಣ, ಸಂತರ್ಪಣೆ. ರಾತ್ರಿ 8-30ಕ್ಕೆ ಮಹಾರಥೋತ್ಸವ, ಬಲಿ, ಪೂಜೆ, ಭೂತ ತಂಬಿಲ, ಭೂತಬಲಿ, ಕವಾಟ ಬಂಧನ.
ತಾ. 22-12-2023ನೇ ಶುಕ್ರವಾರ: ಬೆಳಿಗ್ಗೆ ಕವಾಟೋದ್ಘಾಟನೆ, ಅಭಿಷೇಕ ಪೂಜೆ, ನಿತ್ಯಬಲಿ, ಕಲಾಶಾಭಿಷೇಕ, ಮಹಾಪೂಜೆ, ತುಲಾಭಾರ, ನಾಗದರ್ಶನ, ರಾತ್ರಿ ಘಂಟೆ 8-00ಕ್ಕೆ ಸವಾರಿ ಬಲಿ, ಓಕುಳಿ, ಕೆರೆ ದೀಪೋತ್ಸವ, ಕಟ್ಟೆಪೂಜೆ, ಅವಕೃತ ಸ್ನಾನ, ಪೂರ್ಣಾಹುತಿ, ಮಹಾಮಂತ್ರಾಕ್ಷತೆ, ಧ್ವಜ ಅವರೋಹಣ, ರಾತ್ರಿ ಪೂಜೆ.
ತಾ. 23-12-2023ನೇ ಶನಿವಾರ: ಬೆಳಿಗ್ಗೆ ಗಣಯಾಗ, ಮಹಾ ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ
ವಿತರಣೆ.
ಸಾಂಸ್ಕೃತಿಕ ಕಾರ್ಯಕ್ರಮಗಳು :
ತಾ. 12-12-2023 ಮಂಗಳವಾರ : ಪೂರ್ವಾಹ್ನ 10-00ರಿಂದ ‘ಯಕ್ಷಗಾನ ತಾಳಮದ್ದಲೆ- ವಿದುರ ಭಕ್ತಿ – ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯ, ನಂದಳಿಕೆ ಮತ್ತು ಬಳಗ.
ಸಂಜೆ 6-00ರಿಂದ: ‘ಭಜನೆ’ – ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ಸೂಡ
ತಾ. 13-12-2023 ಬುಧವಾರ : ಸಂಜೆ 6-00ರಿಂದ: ‘ಭಜನೆ’ – ಶ್ರೀ ದುರ್ಗಾದೇವಿ ಭಜನಾ ಮಂಡಳಿ, ಪಾಲುಮನೆ, ಸೂಡ
ತಾ. 14-12-2023 ಗುರುವಾರ: ಸಂಜೆ 6-00ರಿಂದ: ‘ಭಜನೆ’ – ಶ್ರೀ ಶಾಸ್ತಾವು ಭಜನಾ ಮಂಡಳಿ, ಶಾಸ್ತಾವು, ಪುನಾರು
ತಾ. 15-12-2023 ಶುಕ್ರವಾರ: ಸಂಜೆ 6-30ರಿಂದ: ‘ರಾಮನಾಮ ಸಂಕೀರ್ತನೆ ಮತ್ತು ಭಜನೆ’ – ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ಸೂಡ
ತಾ. 16-12-2023 ಶನಿವಾರ: ಸಂಜೆ 6-30ರಿಂದ ಭಜನೆ – ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ಕೋಡು ಪಂಜಿಮಾರು.
ತಾ. 17-12-2023 ರವಿವಾರ: ಸಂಜೆ 7-00ರಿಂದ: ‘ಭರತನಾಟ್ಯ ನೃತ್ಯನೂಪುರ’ -ನೃತ್ಯಗುರುಗಳಾದ ವಿದುಷಿ ಶ್ರೀಮತಿ ಕವಿತಾ ಉಪಾಧ್ಯಾಯ ಇವರ ನಿರ್ದೇಶನದಲ್ಲಿ ನೃತ್ಯ ದೀಕ್ಷಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯಕಾರ್ಯಕ್ರಮ.
ತಾ. 18-12-2023 ಸೋಮವಾರ: ರಾತ್ರಿ 10-30ರಿಂದ: ‘ಯಕ್ಷಗಾನ ಬಯಲಾಟ – ಕೋಟಿ ಚೆನ್ನಯ’ –ಶ್ರೀ ಮಯೂರ ವಾಹನ ಯಕ್ಷಗಾನ ನಾಟಕ ಸಭಾ, ಸೂಡ.
ತಾ. 19-12-2023 ಮಂಗಳವಾರ: ಸಂಜೆ 6-00ರಿಂದ: ‘ಭಜನೆ’ – ಶ್ರೀ ವಿಶ್ವಕರ್ಮ ಭಜನಾ ಮಂಡಳಿ, ಹಳೆಯಂಗಡಿ.
ತಾ. 20-12-2023 ಬುಧವಾರ: ಸಂಜೆ 6-00ರಿಂದ: ‘ಭಜನೆ’ – ಶ್ರೀ ಮಹಾಕಾಳಿ ಭಜನಾ ಮಂಡಳಿ, ಮಂಗಲ್ದಿ ಮಠ, ಪಳ್ಳಿ.
ತಾ. 21-12-2023 ಗುರುವಾರ: ಬೆಳಿಗ್ಗೆ 10-00ರಿಂದ ‘ಭಜನೆ’ -ಶ್ರೀ ಮಹಾಲಸಾ ನಾರಾಯಣೀ ಭಜನಾ ಮಂಡಳಿ, ಶಿರ್ವ ರಾತ್ರಿ 10-30ರಿಂದ ‘ತುಳುನಾಟಕ – ತೊಟ್ಟಿಲ್ – ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ
ತಾ. 22-12-2023 ಶುಕ್ರವಾರ: ಬೆಳಿಗ್ಗೆ 10-00ರಿಂದ ‘ಭಜನೆ’ – ಶ್ರೀ ಲಕ್ಷ್ಮೀಜನಾರ್ಧನ ಭಜನಾ ಮಂಡಳಿ, ಕಾಪು ಸಂಜೆ 5ರಿಂದ 7-30: ‘ಯಕ್ಷಗಾನ ತಾಳಮದ್ದಲೆ’ -ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ, ಸುರತ್ಕಲ್.
ವಿಶೇಷ ಸೂಚನೆ :
ತಾ. 18-12-2023ನೇ ಸೋಮವಾರ ಷಷ್ಠಿ ಮಹೋತ್ಸವದಂದು
ಮಧ್ಯಾಹ್ನ ಘಂಟೆ 1-00ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ
ತಾ. 22-12-2023ನೇ ಶುಕ್ರವಾರ ರಾತ್ರಿ ಜುಮಾದಿ ದೈವದ ನೇಮೋತ್ಸವ
ತಾ. 16-01-2024ನೇ ಮಂಗಳವಾರ ಕಿರುಷಷ್ಠಿ ಉತ್ಸವ
ಮಧ್ಯಾಹ್ನ ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿರುವುದು.
ಹರಕೆ, ಕಾಣಿಕೆ, ಧನಸಹಾಯ ಕಳುಹಿಸುವವರು “ಶಿರ್ವ ಕೋಡು ಜಯಶೀಲ ಹೆಗ್ಡೆ, ಆಡಳಿತ ಮೊತ್ತೇಸರರು, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸೂಡ – 574116” ಅಥವಾ ಬ್ಯಾಂಕ್ ಆಫ್ ಬರೋಡಾ, ಸೂಡ ಶಾಖೆಯ ಈ ಕೆಳಗಿನ ಖಾತೆಗೆ ಕಳುಹಿಸಿ ಕೊಟ್ಟಲ್ಲಿ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು. ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗುವುದು.
S.B. A/c No.: 81750100001166 IFSC Code: BARBOVJSOOD Bank of Baroda, Sooda Branch