32 C
Mumbai
April 24, 2026
Mumbai News Kannada
ಪ್ರಕಟಣೆ

ಡೊಂಬಿವಲಿ: “ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಆಶ್ರಯದಲ್ಲಿ ಜ. 3ರಂದು ಶ್ರೀ ಶನೀಶ್ವರ ಮಹಾಪೂಜೆ ಹಾಗೂ ಸತ್ಯನಾರಾಯಣ ಪೂಜೆ





ಡೊಂಬಿವಲಿ, ಡಿ. 31: ಇಲ್ಲಿನ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಅಂಗ ಸಂಸ್ಥೆಯಾದ ಶ್ರೀ ಶನೀಶ್ವರ ಪೂಜಾ ಸಮಿತಿ ವತಿಯಿಂದ 34ನೇ ವರ್ಷದ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನೀಶ್ವರ ಮಹಾಪೂಜೆಯು ಜನವರಿ 3ರ ಶನಿವಾರದಂದು ಅದ್ದೂರಿಯಾಗಿ ಜರುಗಲಿದೆ.

​ಡೊಂಬಿವಲಿ ರೈಲ್ವೆ ನಿಲ್ದಾಣದ ಸಮೀಪವಿರುವ ರೇತಿ ಭವನದ ಭರತ್ ಭೋಯಿರ್ ಸಭಾಗೃಹದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಂಡಳಿಯ ಧರ್ಮದರ್ಶಿ ಹಾಗೂ ಶನೀಶ್ವರ ಮಹಾಪೂಜೆಯ ಅರ್ಚಕರಾದ ಅಶೋಕ ದಾಸು ಶೆಟ್ಟಿ ಅವರ ಘನ ಉಪಸ್ಥಿತಿಯಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿವೆ.

​ಕಾರ್ಯಕ್ರಮದ ವಿವರ:

ಜನವರಿ 2ರ ಶುಕ್ರವಾರ ಭಜನಾ ಮಂದಿರದಲ್ಲಿ ಭಜನಾ ಸೇವೆ ನಡೆಯಲಿದೆ.

ಜ. 3ರ ಶನಿವಾರ:

  • ಬೆಳಿಗ್ಗೆ 9:00: ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ.
  • ಮಧ್ಯಾಹ್ನ 12:00: ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ.
  • ಮಧ್ಯಾಹ್ನ 12:30: ಸಾರ್ವಜನಿಕ ಅನ್ನ ಸಂತರ್ಪಣೆ.
  • ಮಧ್ಯಾಹ್ನ 2:00: ಶ್ರೀ ಶನೀಶ್ವರ ದೇವರ ಕಲಶ ಪ್ರತಿಷ್ಠೆ ಹಾಗೂ ಸುರೇಶ್ ಅಂಚನ್ ಮತ್ತು ತಂಡದವರಿಂದ ಗ್ರಂಥ ಪಾರಾಯಣ.
  • ರಾತ್ರಿ 7:30: ಮಂಡಳಿಯ ಸದಸ್ಯರಿಂದ ಭಜನಾ ಸೇವೆ.
  • ರಾತ್ರಿ 8:00: ಮಹಾಪೂಜೆ, ಆರತಿ ಹಾಗೂ ತೀರ್ಥ ಪ್ರಸಾದ ವಿತರಣೆ.

​ಈ ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಮಂಡಳಿಯ ಧರ್ಮದರ್ಶಿ ಅಶೋಕ್ ಡಿ. ಶೆಟ್ಟಿ, ಪೂಜಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಜತ್ತನ್, ಉಪಾಧ್ಯಕ್ಷ ಬ್ರಹ್ಮಾನಂದ ಶೆಟ್ಟಿಗಾರ್, ಕಾರ್ಯದರ್ಶಿ ಸುನೀಲ್ ಎಸ್‌. ಶೆಟ್ಟಿ, ಕೋಶಾಧಿಕಾರಿ ತಾರಾನಾಥ ಅಮಿನ್, ಜೊತೆ ಕಾರ್ಯದರ್ಶಿ ನಾರಾಯಣ ಮೈಂದನ್, ಜೊತೆ ಕೋಶಾಧಿಕಾರಿ ನಾರಾಯಣ ಭಂಡಾರಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ವಿಲಾಸಿನಿ ಎಸ್. ಶೆಟ್ಟಿ ಅವರು ಸಮಸ್ತ ಸದ್ಭಕ್ತರನ್ನು ಆಮಂತ್ರಿಸಿದ್ದಾರೆ.



Related posts

ಫೆ. 19 ರಂದು ಡೊಂಬಿವಲಿ ಶ್ರೀಮಹಾವಿಷ್ಣು ಮಂದಿರದಲ್ಲಿ “ದಶಾವತಾರ “ಹರಿನಾಮವಳಿ – ಶುಭ ಚಿಂತನ

Mumbai News Desk

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ೧೫ನೆಯ ವಾರ್ಷಿಕ ಸಮಾವೇಶ, “ಹೊರನಾಡಿನಲ್ಲಿ ತುಳುವರು” ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ನೃತ್ಯ ವೈಭವ ಹಾಗೂ ನಾಟಕ ಪ್ರದರ್ಶನ

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಫೆ. 15ರಂದು ಮಹಾಶಿವರಾತ್ರಿ ಮಹೋತ್ಸವ; ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೋತ್ಸವ

Mumbai News Desk

ಎ. 11, ವಿದ್ಯಾದಾಯಿನಿ ಸಭಾ ಮುಂಬಯಿ ಮತ್ತು ತುಳು ಧಾರ್ಮಿಕ ಸಂಶೋಧನಾ ಕೇಂದ್ರ ಪೇರೂರು ಇದರ ಜಂಟಿ ಆಯೋಜಕತ್ವದಲ್ಲಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲಾ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ.

Mumbai News Desk

ಜ. 24/25/26 : ಬಿಲ್ಲವರ ಎಸೋಸಿಯೇಷನ್ ಮುಂಬಯಿ ಇದರ ಸಾಂಸ್ಕೃತಿಕ ಉಪ ಸಮಿತಿಯ ಆಶ್ರಯದಲ್ಲಿ ‘ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ ‘

Mumbai News Desk

ನ. 8-9, ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ ಡೊಂಬಿವಲಿ66ನೇ ವಾರ್ಷಿಕ ಮಂಗಳೋತ್ಸವ

Mumbai News Desk