
ಮುಂಬಯಿ : ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ವತಿಯಿಂದ ಸಮಾಜ ಬಾಂಧವರಿಗೆ ಡಿ. 24ರಂದು ಬೆಳಿಗ್ಗೆ 10 ರಿಂದ ಘಾಟ್ ಕೋಪರ್ ಪೂರ್ವ ರೈಲು ನಿಲ್ಧಾಣದ ಸಮೀಪ, ಜವೆರಿ ಬೆಹನ್ ಪೋಪಟ್ ಲಾಲ್ ಸಭಾಗೃಹ, ಉಪಾಶ್ರಯ ಲೇನ್ ಇಲ್ಲಿ ನಡೆಯಲಿರುವುದು.
ಅಂದು ಬೆಳಿಗ್ಗೆ 10 ಗಂಟೆಗೆ ಭಜನೆ, 11 ಗಂಟೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ೧೧ ರಿಂದ ೧೨ ರ ತನಕ ಶ್ರೀ ರಾಮಾಯಣ ದರ್ಶನಂ ನೃತ್ಯ ರೂಪಕ, ನಂತರ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಭಂಡಾರಿ ಸೇವಾ ಸಮಿತಿ ಮುಂಬಯಿಯ ಅಧ್ಯಕ್ಷರಾದ ಪ್ರಭಾಕರ ಪಿ ಭಂಡಾರಿ ವಹಿಸಲಿರುವರು.
ಮುಖ್ಯ ಅತಿಥಿಯಾಗಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ, ಗೌರವ ಅತಿಥಿಗಳಾಗಿ ಕಚೂರು ಶ್ರೀ ನಾಗೇಶ್ವರ ಟೆಂಪಲ್ ಇದರ ವ್ಯವಸ್ಥಾಪಕ ಟ್ರಸ್ಟಿ ಸುರೇಶ್ ಎಸ್ ಭಂಡಾರಿ ಕಡಂದಲೆ, ಮಲಾಡ್ ಕನ್ನಡ ಸಂಘದ ಅಧ್ಯಕ್ಷರಾದ ನ್ಯಾ. ಜಗದೀಶ್ ಹೆಗ್ಡೆ .ಭಂಡಾರಿ ಮಹಾಮಂಡಲದ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಭಂಡಾರಿ ಸೇವಾ ಸಮಿತಿ ಮುಂಬಯಿಯ ಮಾಜಿ ಅಧ್ಯಕ್ಷ ನ್ಯಾ. ಶೇಖರ್ ಭಂಡಾರಿ ಆಗಮಿಸಲಿದ್ದಾರೆ.
. ಮಧ್ಯಾಹ್ನದ ನಂತರ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಷ್ಟ್ ಇದರ ಬಾಲ ಕಲಾವಿದರಿಂದ ಸದಾನಂದ ಶೆಟ್ಟಿಯವರ ನಿರ್ದೇಶನದಲ್ಲಿ ಸುದರ್ಶನ ವಿಜಯ ತುಳು ಯಕ್ಷಗಾನ ಪ್ರದರ್ಶನವು ನಡೆಯಲಿದೆ. ಕಲಾ ಸೌರಭ ಇವರಿಂದ ವಿವಿಧ ವಿನೋದಾವಳಿ ನಂತರ ಶೀನ ಬಂಡಾರಿ ಮತ್ತು ಸದಸ್ಯರಿಂದ ತುಳು ತುಳು ನಾಟಕ ಬಿಕ್ರ ಮೆಳಂತಾ ಪ್ರದರ್ಶನವಿದೆ.
. ಈ ಸಮಾರಂಭಕ್ಕೆ ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಅಧಿಕ ಸಂಖ್ಯಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಭಂಡಾರಿ ಸೇವಾ ಸಮಿತಿಯ ಪರವಾಗಿ ಅಧ್ಯಕ್ಷರಾದ ಪ್ರಭಾಕರ್ ಪಿ ಭಂಡಾರಿ. ಗೌರವ ಪ್ರಧಾನ ಕಾರ್ಯದರ್ಶಿ ರಮೇಶ್ ವಿ. ಭಂಡಾರಿ, ಗೌರವ ಕೋಶಾಧಿಕಾರಿ ಕೆ. ಶೀನ ಭಂಡಾರಿ,
ಉಪಾಧ್ಯಕ್ಷರುಗಳಾದ ಶಶಿಧರ್ ಎಸ್ ಭಂಡಾರಿ ಮತ್ತು ರಮಾನಂದ ವಿ ಭಂಡಾರಿ, ಜೊತೆ ಕಾರ್ಯದರ್ಶಿ ರಂಜಿತ್ ಭಂಡಾರಿ, ಜೊತೆ ಕೋಶಾಧಿಕಾರಿ ರಾಕೇಶ್ ಭಂಡಾರಿ, ಸಲಹಾ ಸಮಿತಿಯ ಕಾರ್ಯದರ್ಶಿ ನ್ಯಾ. ಆರ್ ಎಂ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಆರ್ ಭಂಡಾರಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಜಯಸುಧ ಟಿ ಬಂಡಾರಿ, ಕಾರ್ಯದರ್ಶಿ ಲತಾ ವೈ ಭಂಡಾರಿ ಹಾಗೂ ಸದಸ್ಯರು ವಿನಂತಿಸಿದ್ದಾರೆ.