30.9 C
Mumbai
June 8, 2026
Mumbai News Kannada
ಪ್ರಕಟಣೆ

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್. ಡಿ.27 ರಂದು 15 ನೆಯ ವಾರ್ಷಿಕ ಪ್ರತಿಷ್ಟಾಪನೋತ್ಸವ.





ಸುದ್ದಿ ವಿವರ : ಪಿ.ಆರ್.ರವಿಶಂಕರ್

ಬೊಯಿಸರ್ :   

ಇದೇ ಡಿಸೆಂಬರ್ ತಾ. 27 ನೆಯ ಶನಿವಾರದಂದು  ಪಾಲ್ಘರ್ ಜಿಲ್ಲೆಯ ಬೊಯಿಸರ್ ನಲ್ಲಿಯ  ಸಂತಶ್ರೇಷ್ಟ ಗುರು ನಿತ್ಯಾನಂದ ಸ್ವಾಮಿ ಮಂದಿರದಲ್ಲಿ  14 ನೆಯ ವರ್ಷದ ಪ್ರತಿಷ್ಟಾಪನಾ ಉತ್ಸವವು ಜರಗಲಿದೆ.

ಪ್ರಾತಃ ಕಾಲದ 6 ಗಂಟೆಗೆ ಸಂಕಲ್ಪ ಪೂಜೆ ಹಾಗೂ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗುವುದು. 7. ಗಂಟೆಗೆ  ನಿತ್ಯಾನಂದ ಬಾಬಾ ಪಂಚಾಮೃತ ಅಭಿಷೇಕ ಮತ್ತು ಪ್ರಾತಃ ಆರತಿಯು ಸರ್ವ ಭಕ್ತಾಭಿಮಾನಿಗಳ ಭಾಗವಹಿಸುವಿಕೆಯಲ್ಲಿ ಜರಗಲಿದೆ.

ಬೆಳಿಗ್ಗೆ 9 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಸದ್ಗುರು ನಿತ್ಯಾನಂದ ಭಜನಾ ಮಂಡಳಿಯವರಿಂದ ಭಕ್ತಿ ಗೀತೆ ಹಾಗೂ ಭಜನಾ ಕಾರ್ಯಕ್ರಮವಿರುತ್ತದೆ. 12 ಗಂಟೆಗೆ ಮದ್ಯಾಹ್ನದ ಆರತಿಯ ಬಳಿಕ ಅನ್ನಸಂತರ್ಪಣೆ ಜರಗಲಿದೆ.

ಸಂಜೆ 6 ಗಂಟೆಗೆ ನಿತ್ಯಾನಂದ ಬಾಬಾ ಇವರ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆ ಇದ್ದು ಸಂಜೆ 8 ಗಂಟೆಯ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ.

ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವ ಈ ಪೂರ್ಣ ದಿನದ ಪ್ರತಿಷ್ಟಾಪನೋತ್ಸವಕ್ಕೆ ಭಕ್ತಾಭಿಮಾನಿಗಳೆಲ್ಲರೂ ಸಹ ಕುಟುಂಬ ಆಗಮಿಸಿ ಭಾಗವಹಿಸಬೇಕಾಗಿ ಶ್ರೀಮತಿ ಸುಹಾಸಿನಿ ದಾಮೋದರ್ ನಾಯ್ಕ್ ಹಾಗೂ ಸದ್ಗುರು ನಿತ್ಯಾನಂದ ಸೇವಾ ಟ್ರಸ್ಟ್ ವಿಶ್ವಸ್ಥ ಮಂಡಳಿಯವರು ಸಮಸ್ಥ ಭಕ್ತಮಂಡಳಿಯ ಪರವಾಗಿ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

ಸುದ್ದಿ ವಿವರ : ಪಿ.ಆರ್.ರವಿಶಂಕರ್

            8483980035



Related posts

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿ, ಮಾ 16 ರಂದು ವಿದ್ಯಾರ್ಥಿ ವೇತನ, ವಿಕಲಚೇತನ ಹಾಗೂ ವಿಧವಾ ವೇತನಗಳಿಗೆ ಅರ್ಜಿಗಳ ಆಹ್ವಾನ,

Mumbai News Desk

ಫೆ. 08 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ನಾಲ್ಕನೇ ವರ್ಷದ ರಕ್ತದಾನ ಶಿಬಿರ.

Mumbai News Desk

 ಪೆ 25,: ಮುಂಬಯಿಯ  ಕುಲಾಲ ಸಂಘದ ಯುವ ವಿಭಾಗದವತಿಯಿಂದ ಕ್ರೀಡೋತ್ಸವ  

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಜ1 ರಂದು, ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ.

Mumbai News Desk

ತುಳುಕೂಟ ಫೌಂಡೇಶನ್  ಮಹಿಳಾ ವಿಭಾಗ, ಜೂನ್ 21 ರಂದು ಯೋಗ ದಿನಾಚರಣೆ ,

Mumbai News Desk

ಕುಲಾಲ ಪ್ರತಿಷ್ಠಾನ ಮಂಗಳೂರು- ಏಪ್ರಿಲ್ 13 ರಂದು ಕುಲಾಲ ಪರ್ಬ

Mumbai News Desk