April 2, 2025
ಪ್ರಕಟಣೆ

ಡಿ.25 ರಂದು ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ ಕಲ್ಯಾಲು, ಇನ್ನಂಜೆ – ನೇಮೋತ್ಸವ.

ಉಡುಪಿ ಜಿಲ್ಲೆ ಕಾಪು ತಾಲೂಕಿನ ಇನ್ನಂಜೆ ಗ್ರಾಮದ
ಕಲ್ಯಾಲು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನ
ಕಲ್ಯಾಲು, ಇದರ ವಾರ್ಷಿಕ ನೇಮೋತ್ಸವವು ಡಿಸೆಂಬರ್ 25 ರ ಸೋಮವಾರ ಜರುಗಲಿರುವುದು.

ಕಾರ್ಯಕ್ರಮಗಳು :


ತಾ. 21-12-2023ನೇ ಗುರುವಾರ ಬೆಳಗ್ಗೆ ಗಂಟೆ 8.00ಕ್ಕೆ ಮರ್ಕೋಡಿ ಬ್ರಹ್ಮಸ್ಥಾನದಲ್ಲಿ ನಾಗತಂಬಿಲ ನಡೆಯಲಿರುವುದು

ತಾ. 24-12-2023ನೇ ಅದಿತ್ಯವಾರ ಸಂಜೆ ಗಂಟೆ 4.00ಕ್ಕೆ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇನ್ನಂಜೆ ಯಿಂದ ನೂತನ ಬೆಳ್ಳಿ ಯ ಅಭರಣಗಳನ್ನು ಮೆರವಣಿಗೆ ಮೂಲಕ ದೈವಸ್ಥಾನಕ್ಕೆ ತರುವುದು.

ತಾ. 25-12-2023ನೇ ಸೋಮವಾರ ಬೆಳಗ್ಗೆ ಗಂಟೆ 10.00ಕ್ಕೆ
ನವಕಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ನಾಗತಂಬಿಲ
ಮಧ್ಯಾಹ್ನ ಗಂಟೆ 11-15ಕ್ಕೆ ತೋರಣ ಮುಹೂರ್ತ ಮಧ್ಯಾಹ್ನ ಗಂಟೆ 1.00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ ಗಂಟೆ 6.00ಕ್ಕೆ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಪ್ರಸಾದ ಅಗಮನ
ರಾತ್ರಿ ಗಂಟೆ 9.30ಕ್ಕೆ ಭಂಡಾರ ಇಳಿಯುವುದು ತದನಂತರ ನೇಮೋತ್ಸವ

ಈ ದೇವತಾ ಕಾರ್ಯಕ್ರಮಕ್ಕೆ ತಾವೆಲ್ಲರೂ ಸಕುಟುಂಬಿಕರಾಗಿ ಆಗಮಿಸಿ, ನೇಮೋತ್ಸವದಲ್ಲಿ ಭಾಗವಹಿಸಿ, ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ದೈವದ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ, ಊರ ಹಾಗೂ ಪರ ಊರ ಗ್ರಾಮದ ಹತ್ತು ಸಮಸರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ವಿಶೇಷವಾಗಿ ಗ್ರಾಮದ ಭಜನಾಮಂಡಳಿಗಳು ಮತ್ತು ಸಂಘ ಸಂಸ್ಡೆಗಳಾದ, ಶ್ರೀ ವಿಷ್ಣು ಮೂರ್ತಿ ಭಜನಾ ಮಂಡಳಿ ಉಂಡಾರು. ಶ್ರೀ ವಿಷ್ಣುಮೂರ್ತಿ ಭಗಿನಿಯರು ಉಂಡಾರು, ಶ್ರೀ ಧೂಮಾವತಿ ಭಜನಾಮಂಡಳಿ ಕಲ್ಯಾಲು, ಶ್ರೀ ವಿಠೋಭ ಭಜನಾ ಮಂಡಳಿ ಗೋಳಿಕಟ್ಟೆ, ಶ್ರೀ ಬ್ರಹ್ಮಲಿಂಗೇಶ್ಪರ ಭಜನಾ ಮಂಡಳಿ.ಮಡುಂಬು, ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ, ಶ್ರೀ ನಾರಾಯಣಗುರು ಭಜನಾ ಮಂಡಳಿ ಇನ್ನಂಜೆ, ಶ್ರೀ ಅಶ್ಪಥನಾರಾಯಣ ಭಜನಾ ಮಂಡಳಿ ಮಜಲು, ಶ್ರೀ ರವಿಶಂಕರ ಗುರೂಜಿಯವರ ಜೀವನ ಕಲಾ ಸಂಸ್ಧೆ ಇನ್ನಂಜೆ, ಹಿಂದೂಯುವಸೇನೆ ಮತ್ತು ಭಜರಂಗದಳ ಇನ್ನಂಜೆ ಘಟಕ, ಇನ್ನಂಜೆ ಯುವಕ ಮಂಡಲ, ಯುವತಿ ಮಂಡಲ ಇನ್ನಂಜೆ, ವೈ .ಎಸ್ .ಎಮ್. ಮಡುಂಬು, ನಿಸರ್ಗ ಫ್ರೆಂಡ್ಸ್ ಇನ್ನಂಜೆ, ಅಜಿಲಕಾಡು ಫ್ರೆಂಡ್ಸ್, ಈ ಎಲ್ಲಾ ಸಂಸ್ಥೆಗಳ ಸಹಕಾರದಿಂದ ದಿನಾಂಕ 24.12.2023 ರ ಆದಿತ್ಯವಾರ ಸಂಜೆ 4.30 ಕ್ಕೆ ಸರಿಯಾಗಿ ಉಂಡಾರು ದೇವಸ್ಡಾನದಿಂದ ಶ್ರೀ ಧೂಮಾವತಿ ದೈವಸ್ಥಾನದ ವರೆಗೆ ನೂತನವಾಗಿ ನಿರ್ಮಿಸಲಾದ ಬೆಳ್ಳಿಯ ಅಣೆ ಮತ್ತು ಇತರ ಆಭರಣಗಳ ಮೆರವಣೆಗೆಯು ಭವ್ಯವಾಗಿ ಭಕ್ತಿ, ಶೃದ್ಧೆ ಯಿಂದ ನಡೆಲಿದೆ.

Related posts

ಡಿ.24 ಕ್ಕೆ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ,ಭಾರತಿ ಪಾರ್ಕ್ ಮೀರಾರೋಡ್, 27ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ನವೆಂಬರ್ 26 ರಂದು ಚಿಣ್ಣರ ಬಿಂಬ  ಮುಂಬಯಿ ವತಿಯಿಂದ ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ  ಪ್ರತಿಭಾ ಸ್ಪರ್ಧೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮುತ್ತುಟ್ ಫೈನಾನ್ಸ್ ಲಿಮಿಟೆಡ್ ನ ಜಂಟಿ ಆಶ್ರಯದಲ್ಲಿ ಅ. 10ಕ್ಕೆ ಸ್ಥನ್ಯ ಪಾನ ಸಪ್ತಾಹ

Mumbai News Desk

ಡಿ.24 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ, ಅನ್ನ ಸಂತರ್ಪಣೆ.

Mumbai News Desk

ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ದೀಪಾವಳಿ ಸಾಹಿತ್ಯ ಸ್ಪರ್ಧೆ 2024 : ಸಣ್ಣ ಕಥೆ ಮತ್ತು ಲೇಖನಗಳ ಸ್ಪರ್ಧೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk