23.5 C
Karnataka
April 4, 2025
ಸುದ್ದಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿ  ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ತೋನ್ಸೆ ಶಶಿರೇಖಾ ಆನಂದ  ಶೆಟ್ಟಿ ಓಪನ್ ಏರ್ ಗಾರ್ಡನ್” ಹೆಸರಿನಲ್ಲಿ ತೆರೆದ ವೇದಿಕೆ  ನಿರ್ಮಾಣ



      ಮುಂಬಯಿ ಜ12. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹತ್ವಕಾಂಕ್ಷಿ ಯೋಜನೆಯಾದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ  ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿಶಿತಾರ್ಥ,ಮೆಹೆಂದಿ,ಮದುವೆ, ಔತನಕೂಟ, ಹುಟ್ಟುಹಬ್ಬ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಶ್ರೀಮತಿ ತೋನ್ಸೆ ಶಶಿರೇಖಾ ಆನಂದ  ಶೆಟ್ಟಿ ಓಪನ್ ಏರ್ ಗಾರ್ಡನ್. ಎಂಬ ಹೆಸರಿನಲ್ಲಿ ತೆರೆದ ವೇದಿಕೆ ನಿರ್ಮಾಣ

  ಈ. ಓಪನ್ ಏರ್ ಗಾರ್ಡನ್  ಸಂಪೂರ್ಣ ಪ್ರಾಯೋಜಕತೆಯನ್ನು  ಒಕ್ಕೂಟದ ವಿಶೇಷ ಮಹಾ-ನಿರ್ದೇಶಕರಾದ ಮುಂಬೈಯ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಸಿ. ಎಂ. ಡಿ. ತೋನ್ಸೆ ಆನಂದ್ ಎಂ. ಶೆಟ್ಟಿಯವರ ಮತ್ತು ಶಶಿರೇಖಾ ಆನಂದ ಎಂ.ಶೆಟ್ಟಿಯವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿಯವರು, ವಿಶೇಷ ಮಹಾ ನಿರ್ದೇಶಕರಾದ  ಪ್ರವೀಣ್ ಬೋಜ ಶೆಟ್ಟಿ ಹಾಗೂ ಕೋಶಾಧಿಕಾರಿಯಾದ  ಉಳ್ತೂರು ಮೋಹನದಾಸ ಶೆಟ್ಟಿಯವರು ಜೊತೆ ಸೇರಿ ಗೌರವ ಪೂರ್ವಕವಾಗಿ  ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. 

    ಓಪನ್ ಏರ್ ಗಾರ್ಡನ್ ಯೋಜನೆಯ ಪೂರ್ತಿ ಜವಾಬ್ದಾರಿಯನ್ನು ಮತ್ತು ಅದರ ಕೆಲಸ ಕಾರ್ಯಗಳನ್ನು ತನ್ನ ಯೋಚನೆಯ ಪ್ರಕಾರದಂತೆ ಮಾಡಿ ಈ ವರ್ಷ 2024 ಡಿಸೆಂಬರ್ ಕೊನೆಯಲ್ಲಿ   ಒಕ್ಕೂಟಕ್ಕೆ ಒಪ್ಪಿಸುತ್ತೇನೆ ಎಂದು  ತೋನ್ಸೆ   ಆನಂದ ಶೆಟ್ಟಿಯವರು   ಭರವಸೆಯ ಮಾತನ್ನು ನೀಡಿದ್ದಾರೆ.

ಈ  ಯೋಜನೆಗೆ ಸಹಕಾರ ನೀಡಿದ   ತೋನ್ಸೆ ಶಶಿರೇಖಾ ಆನಂದ ಎಂ. ಶೆಟ್ಟಿಯವರಿಗೆ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ . ಉಪಾಧ್ಯಕ್ಷರುಕರ್ನಿರೆ ವಿಶ್ವನಾಥ ಶೆಟ್ಟಿ.ಗೌ.ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ .ಜೊತೆ -ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ಮತ್ತು ಮಹಾ ನಿರ್ದೇಶಕರು, ನಿರ್ದೇಶಕರು, ಮಹಾ-ಪೋಷಕರು, ಪೋಷಕರು, ದಾನಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಸರ್ವ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ

Related posts

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಧನ ಸಹಾಯ

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

ಉದ್ಯಮಿ, ಸಂಘಟಕ ಗೋಪಾಲ ಪುತ್ರನ್ ಅವರಿಗೆ ಪಿತೃ ವಿಯೋಗ

Mumbai News Desk

ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರಿಗೆ ಪರಿಸರ ಪ್ರೇಮಿ ಸಮಿತಿಯಿಂದ ಸ್ವಾಗತ.

Mumbai News Desk

ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ 

Mumbai News Desk