
ವಸಯಿ ತಾಲೂಕ ಮೊಗವೀರ ಸಂಘದ ಆಶ್ರಯದಲ್ಲಿ ಸಮಾಜ ಬಾಂಧವರಿಗಾಗಿ ವಿಟಿಎಂಎಸ್(VTMS)ಟ್ರೋಪಿ -2024 ನ್ನು ಜನವರಿ 21, ಆದಿತ್ಯವಾರ ಆಯೋಜಿಸಿದೆ.
ವಸಯಿ ಪಶ್ಚಿಮದ ಸನ್ ಸಿಟಿ ಮೈದಾನದಲ್ಲಿ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗೆ ತ್ರೋ ಬಾಲ್ ಪಂದ್ಯಾಟದ ಉದ್ಘಾಟನೆ ಬೆಳ್ಳಿಗ್ಗೆ 8 ಗಂಟೆಗೆ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ, ಗೌರವ ಅತಿಥಿಯಾಗಿ ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ, ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆಯ ಗೌರವ ಅಧ್ಯಕ್ಷ ಜಗನ್ನಾಥ್ ಎನ್ ರೈ, ಕರ್ನಾಟಕ ಸಂಘ ವಸಯಿ ಯ ಅಧ್ಯಕ್ಷ ದೇವೇಂದ್ರ ಬುನ್ನಾನ್, ಶ್ರೀ ಮಣಿಕಂಠ ಸೇವಾ ಸಮಿತಿ ವಸಯಿ, ಇದರ ಅಧ್ಯಕ್ಷ ಕರ್ನೂರು ಶಂಕರ್ ಆಳ್ವ, ಬಂಟರ ಸಂಘದ ವಸಯಿ- ಡಹಾಣು ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆ ಉಷಾ ಎಸ್ ಶೆಟ್ಟಿ ಕರ್ನಿರೆ ಉಪಸ್ಥಿತರಿರುವರು.
ಸಂಜೆ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉದ್ಯಮಿ, ಸಂಘಟಕ ಡಾ. ವಿರಾರ್ ಶಂಕರ್ ಶೆಟ್ಟಿ ಮುಖ್ಯ ಅತಿಥಿಯಾಗಿರುವರು.
ಮೊಗವೀರ ಬ್ಯಾಂಕ್ ನ ಮಾಜಿ ಕಾರ್ಯಧ್ಯಕ್ಷ ಕೀರ್ತಿರಾಜ್ ಸಾಲ್ಯಾನ್, ವಸಯಿ-ವಿರಾರ್ ಮಹಾನಗರಪಾಲಿಕೆಯ ಮಾಜಿ ಮೇಯರ್ ಗಳಾದ ನಾರಾಯಣ ಮಾನ್ಕರ್, ಪ್ರವೀಣ್ ಶೆಟ್ಟಿ, ಉದ್ಯಮಿ, ಸಂಘಟಕ ಮಂಜುನಾಥ್ ಎನ್ ಶೆಟ್ಟಿ ಕೊಡಲ್ಪಾಡಿ ಗೌರವ ಅತಿಥಿಗಳಾಗಿರುವರು.
ಪಂದ್ಯಾಟಕ್ಕೆ ವಸಯಿ ತಾಲೂಕ ಮೊಗವೀರ ಸಂಘದ ಅಧ್ಯಕ್ಷ ಯಶೋದರ ವಿ ಕೋಟ್ಯಾನ್, ಉಪಾಧ್ಯಕ್ಷ ದಯಾನಂದ ಕುಂದರ್, ಕಾರ್ಯದರ್ಶಿ ಶೇಖರ್ ಕರ್ಕೇರ, ಕೋಶಧಿಕಾರಿ ವಿಶ್ವನಾಥ ಬಂಗೇರ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮ ಎಸ್ ನಾಯ್ಕ ಹಾಗೂ ಕ್ರೀಡಾ ಸಮಿತಿಯ, ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಆದರದ ಸ್ವಾಗತ ಬಯಸಿದ್ದಾರೆ.