ವಿವೇಕಾನಂದರು ಜಾತಿ ಧರ್ಮ ಪ್ರದೇಶ ಮೀರಿ ಸಮಾಜ ಸೇವಕರಾಗಿ ಬೆಳೆದವರು: ಡಾ. ಹರೀಶ್ ಶೆಟ್ಟಿ

ಚಿತ್ರ, ವರದಿ: ರಮೇಶ್ ಉದ್ಯಾವರ
ದಹಿಸರ್, ಜ. 17: ಮಹಾರಾಷ್ಟ್ರ ಮಾನವ ಸೇವಾ ಸಂಘ ದಹಿಸರ್ ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನ ಜನವರಿ 12ರಂದು ದಹಿಸರ್ ಪೊಲೀಸ್ ಠಾಣೆಯಲ್ಲಿ ಮುಖ್ಯ ವರಿಷ್ಠ ನಿರೀಕ್ಷಕರಾದ ಸುಧೀರ್ ದಳ್ವಿ ಮತ್ತು ಸಿಬಂದಿ ವರ್ಗದವರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮಾನವ ಸೇವಾ ಸಂಘದ ಅಧ್ಯಕ್ಷರಾದ ಡಾ. ಹರೀಶ್ ಶೆಟ್ಟಿ ನೆರೆದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರೇಕ್ಷಕರ ಹೃದಯವನ್ನು ಗೆದ್ದ ಮಹಾನ್ ತತ್ವಜ್ಞಾನಿ. ಯೋಗ ಮನೋಧರ್ಮದ ಪ್ರಭಾವಿತರಾದ ಅವರು ಆಧ್ಯಾತ್ಮಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಾತಿ ಧರ್ಮ ಪ್ರದೇಶವನ್ನು ಮೀರಿ ಸಮಾಜ ಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡ ಅವರ ತತ್ವ ಚಿಂತನೆಗಳು ದೇಶದ ಯುವ ಶಕ್ತಿಗೆ ಪ್ರೇರಣೆಯಾಗಿತ್ತು.

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು 1984 ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವ ದಿನವಾಗಿ ಆಚರಿಸಲು ಘೋಷಿಸಿದರು. ಅವರ ಆಲೋಚನೆಗಳು ಯಾವಾಗಲೂ ಜನರಿಗೆ ಸ್ಪೂರ್ತಿ ನೀಡುತ್ತದೆ ಮತ್ತು ಭವಿಷ್ಯದ ಯುವ ಜನಾಂಗಕ್ಕೆ ಯಾವಾಗಲೂ ಶಕ್ತಿಯ ಮೂಲವಾಗಿರುತ್ತದೆ ಎಂದು ಹೇಳಿದರು
. ಕಾರ್ಯಕ್ರಮ ದಲ್ಲಿ ದಹಿಸರ್ ಪೋಲಿಸ್ ಠಾಣೆಯ ನಿರೀಕ್ಷಕರುಗಳು, ಸಿಬಂದಿಗಳು, ಮತ್ತು ಮಹಾರಾಷ್ಟ್ರ ಮಾನವ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯ ಕ್ರಮದ ಪ್ರಾರಂಭದಲ್ಲಿ ಠಾಣೆಯಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ಮೂರ್ತಿಗೆ ಹೂಹಾರ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.