
ಚಿತ್ರ, ವರದಿ: ಉಮೇಶ್ ಕೆ.ಅಂಚನ್.
ಮುಂಬಯಿ,ಜ.19. ಮೀರಾರೋಡ್ ಪೂರ್ವದ ಮೀರಾಭಾಯಂದರ್ ರಸ್ತೆಯಲ್ಲಿರುವ ಬ್ರಹ್ಮ ಮಂದಿರದಲ್ಲಿ ಲೀಲಾಧರ್ ಸನಿಲ್ ಸಾಂತೂರು (ಬಾಲಾಜಿ ಕ್ಯಾಟರರ್ಸ್)ರವರ ಮುಂದಾಳತ್ವದಲ್ಲಿ ಮಕರ ಸಂಕ್ರಾಂತಿಯಂದು ಶಾರದಾ ಪೂಜೆ, ಶ್ರೀರಾಮ ಪೂಜೆ ಹಾಗೂ ಬಾಲ ಭಜನಾ ಮಂಡಳಿಯವರಿಂದ ಭಜನೆ, ಕುಣಿತ ಭಜನೆ ನಡೆಯಿತು.

ಮೀರಾರೋಡ್ ಭಾರತಿ ಪಾರ್ಕ್ ಲಕ್ಷ್ಮೀ ನಾರಾಯಣ ಬಾಲ ಭಜನಾ ಮಂಡಳಿ ಮತ್ತು ಜೋಗೇಶ್ವರಿ ಜಗದಂಬಾ ಕಾಲಭೈರವ ದೇವಸ್ಥಾನದ ಬಾಲ ಭಜನಾ ಮಂಡಳಿಯ ಮಕ್ಕಳು ಮುಂಜಾನೆಯಲ್ಲಿ ಭಾಗವಹಿಸಿದ್ದರು.ಮೀರಾರೋಡ್ ವಿಭಾಗದ ಡಿವೈನ್ ಪಾರ್ಕ್ ಸದಸ್ಯರಿಂದ ಶ್ರೀ ರಾಮ ರಕ್ಷಾ ಸ್ತೋತ್ರ ಪಟನೆ, ಮಹಾ ಆರತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷೆ ರಂಜನಾ ಸತೀಶ್ ಕಥಾವಟೆ ಬಾಲ ಮಕ್ಕಳ ಭಜನೆಗೆ ಸಂತೋಷ ವ್ಯಕ್ತ ಪಡಿಸಿ ಕಾಣಿಕೆ ನೀಡಿ ಅಭಿನಂದಿಸಿದರು. ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಪೂಜಾರಿ ಸೇರಿದಂತೆ ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಭಜನಾ ಗುರುಗಳಾದ ಮೀರಾರೋಡ್ ಹೇಮಂತ್ ಮುಚ್ಚೂರು ಮತ್ತು ಜೋಗೇಶ್ವರಿ ರಾಘವೇಂದ್ರ ಶಾನುಭಾಗ್ ದೇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮವನ್ನು ಬಾಲಚಂದ್ರ ರೈ ನಿರೂಪಿಸಿದರು. ಸುರೇಶ್ ಕೋಟ್ಯಾನ್ ಪಡುಬಿದ್ರಿ, ಸದಾನಂದ ಕೋಟ್ಯಾನ್ ಕಾಪು ಹೇಮಂತ್ ಮುಚ್ಚೂರು, ಸುಧಾಕರ್ ಕೆ.ಸನಿಲ್ ಸಾಂತೂರು ಹಾಗೂ ಬಿಲ್ಲವರ ಅಸೋಸಿಯೇಶನಿನ ಮೀರಾರೋಡ್ ಸ್ಥಳೀಯ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.