
ಸಯನ್ ನಲ್ಲಿ ಸದಾನಂದ ಹೆಲ್ದಿ ಲಿವಿಂಗ್ ಸೆಂಟರ್ (Sadanand Healthy Living Center Ltd) ವೈದಕೀಯ ಕೇಂದ್ರದ ಮೂಲಕ ಹೃದಯ ಸಂಬಂದಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ, ಡಾ. ಸದಾನಂದ ಆರ್ ಶೆಟ್ಟಿ ಅವರು ಮುಂಬೈಯ ಉತ್ತಮ ಡಾಕ್ಟರ್ ಪ್ರಶಸ್ತಿಗೆ ಭಾಜನಾರಾಗಿದ್ದಾರೆ.
ಔಟ್ ಲುಕ್ ಮೆಗಾಸಿನ್ ಪ್ರತಿ ವರ್ಷ ನೆಬಿ ಮೀಡಿಯಾದ ಮೂಲಕ ದೇಶದ ಪ್ರಾಮುಖ್ಯ ನಗರಗಳಲ್ಲಿ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳ ಸಮೀಕ್ಷೆ ನಡೆಸಿ ಉತ್ತಮ ವೈದ್ಯ ಪುರಸ್ಕಾರ ನೀಡಿ ಗೌರವಿಸುತಿದೆ.
2024ರಲ್ಲಿ ನೆಬಿ ಮೀಡಿಯಾ ಮುಂಬೈಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹೃದಯಶಾಸ್ತ್ರ ವಿಭಾಗದಲ್ಲಿ ಸಾಯನ್ ನ ಡಾ. ಸದಾನಂದ ಆರ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದೆ.
ಡಾ. ಸದಾನಂದ ಶೆಟ್ಟಿ ಅವರು ಡಿ. ವೈ. ಪಾಟೀಲ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನವಿ ಮುಂಬೈಯಲ್ಲಿ ಪ್ರೊಫೆಸರ್ ಆಗಿ, ಸೋಮಯ್ಯ ಸೂಪರ್ ಸ್ಪೆಷಲಿಟಿ ಇನ್ಸ್ಟಿಟ್ಯೂಟ್ ಮುಂಬೈಯ ಕಾರ್ಡಿಯಲಜಿ ವಿಭಾಗದ ನಿರ್ದೇಶಕರಾಗಿ,ಸಿವಿಡಿ ಇಂಡಿಯಾ ಮತ್ತು ಸಿಸಿಯೆ ಇಂಟರ್ನ್ಯಾಷನಲ್ ನ ಸ್ಥಾಪಕರಾಗಿ, ಲಿಪಿಡ್ ಎಸೋಸಿಯೇಷನ್ ಆಪ್ ಇಂಡಿಯಾದ ರಾಷ್ಟ್ರೀಯ ಸಲಹೆಗಾರರಾಗಿ, ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಲಜಿ ಮತ್ತು ಯುರೋಪಿಯನ್ ಸೊಸೈಟಿ ಆಫ್
ಕಾರ್ಡಿಯಲಜಿಯ ಸದಸ್ಯರಾಗಿ , ಕ್ಲಿನಿಕಲ್ ಕೇಸಸ್ ಇನ್ ಕಾರ್ಡಿಯಲಜಿ ಪುಸ್ತಕ-2020ರ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವರು.
ಡಾ. ಸದಾನಂದ ಶೆಟ್ಟಿ ಅವರು ಪ್ರಾಥಮಿಕ ವಿದ್ಯಾಬ್ಯಾಸವನ್ನು ಮಹಾನಗರ ಪಾಲಿಕೆಯ ಶಾಲೆಯಲ್ಲೂ, ವಡಲಾದ ಎನ್ ಕೆ ಇ ಎಸ್ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ವನ್ನು ಮುಗಿಸಿ, ಮುಂದಿನ ಶಿಕ್ಷಣ ವನ್ನು ಸಯನ ನ ಎಲ್ ಟಿ ಎಂ ಮೆಡಿಕಲ್ ಕಾಲೇಜ್ ನಲ್ಲಿ ಮುಗಿಸಿರುವರು.1982ರಲ್ಲಿ ಜನರಲ್ ಮೆಡಿಸಿನ್ ನಲ್ಲಿ ಎಂ ಡಿ ಪದವಿಯನ್ನೂ,1984ರಲ್ಲಿ ಕಾರ್ಡಿಯಲಜಿ ಯಲ್ಲಿ ಮೊದಲ ಪ್ರಯತ್ನದಲ್ಲೇ ಡಿ ಎಂ ಪದವಿ ಪಡೆದ ಹೆಗ್ಗಳಿಕೆ ಡಾ. ಸದಾನಂದ ಶೆಟ್ಟಿ ಅವರದ್ದು.