
“ ಕ್ರೀಡಾ ಸ್ಪರ್ಧೆಗಳು ನಮ್ಮಲ್ಲಿನ ಮನೋಬಲವನ್ನು ಹೆಚ್ಚುಮಾಡುತ್ತವೆ ” – ಕೆ.ಭುಜಂಗ ಶೆಟ್ಟಿ
ಚಿತ್ರ ವರದಿ : ಪಿ.ಆರ್.ರವಿಶಂಕರ್
” ಸ್ಪರ್ಧೆಗಳು ನಮ್ಮಲ್ಲಿನ ಕ್ರೀಡಾಮನೋಭಾವವನ್ನು ಹುರಿದುಂಬಿಸುತ್ತವೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಇಂತಹ ಕ್ರೀಡೆಗಳಲ್ಲಿ ಸ್ಪರ್ಧಿಸುವಲ್ಲಿನ ಹುಮ್ಮಸ್ಸು ನಮ್ಮಲ್ಲಿನ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ಹೆಚ್ಚುಮಾಡುತ್ತವೆ ” ಹೀಗೆಂದು ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ ಹಾಗೂ ಮಾಜೀ ಅಧ್ಯಕ್ಷರಾದ ಕೆ. ಭುಜಂಗ ಶೆಟ್ಟಿ ನುಡಿದರು.
ಬೊಯಿಸರ್ ಪೂರ್ವದಲ್ಲಿನ ಸ್ಕೋರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ರವಿವಾರ ತಾ. 04 ರಂದು ಜರಗಿದ ವಾರ್ಷಿಕ ಟರ್ಫ್ ಫುಟ್ ಬಾಲ್ ಟೂರ್ನಮೆಂಟ್ ಉದ್ಘಾಟನೆಯ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಆರಂಭದಲ್ಲಿ ಮೀರಾ ರೋಡ್ ನಿಂದ ಡಹಾಣೂ ತನಕದ ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೆಯಾಂಶ್ ಗ್ರೂಪ್ ಆಫ್ ಹೋಟೆಲ್ಸ್ ನ ಪ್ರವೀಣ್ ಶೆಟ್ಟಿ ಫುಟ್ ಬಾಲ್ ಅನ್ನು ಕಾಲಿನಿಂದ ಸರಿಸಿ ಪಂದ್ಯಕ್ಕೆ ಚಾಲನೆ ನೀಡಿದರು.

ಸಂಸ್ಥೆಯ ಖಜಾಂಚಿ ರವಿಚಂದ್ರ ರೈ ಬೊಯಿಸರ್ , ಯುವ ವಿಭಾಗದ ಅದ್ಯಕ್ಷ ಮುಕೇಶ್ ಶೆಟ್ಟಿ , ನಾಯ್ಗಾಂವ್ ವಸಯಿ ವಿಭಾಗದ ಅದ್ಯಕ್ಷ ಅಶೋಕ್ ಶೆಟ್ಟಿ , ವಸಯಿ ತಾಲೂಕು ಹೋಟೆಲ್ ಅಸೋಸಿಯೇಶನ್ ಅದ್ಯಕ್ಷ ನಾಗರಾಜ್ ಶೆಟ್ಟಿ , ಪಾಲ್ಘರ್ ಬೊಯಿಸರ್ ವಿಭಾಗೀಯ ಅಧ್ಯಕ್ಷ ವಿಜಯ್ ಶೆಟ್ಟಿ , ಪಾಲ್ಘರ್ ಬೊಯಿಸರ್ ಮಹಿಳಾ ವಿಭಾಗದ ಅದ್ಯಕ್ಷೆ ಪ್ರತಿಭಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
20 ನಿಮಿಷ ಕಾಲಾವಧಿಯ ಫುಟ್ ಬಾಲ್ ಟೂರ್ನಮೆಂಟ್ ನಲ್ಲಿ ಐದು ತಂಡಗಳು ಭಾಗವಹಿಸಿದ್ದು ಕೊನೆಯಲ್ಲಿ ಮೀರಾ ರೋಡ್ ಬಂಟ್ಸ್ ತಂಡವು ಪ್ರಥಮ ಹಾಗೂ ವಸಯಿ ವಾರಿಯರ್ಸ್ ತಂಡವು ದ್ವಿತೀಯ ಸ್ಥಾನದಲ್ಲಿ ವಿಜೇತರಾದರು.
ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಸದಸ್ಯರು ಭಾಗವಹಿಸಿದ್ದು , ಡಹಾಣೂ ವಿನ ರವೀಂದ್ರ ಶೆಟ್ಟಿ , ದಾಮೋದರ್ ಶೆಟ್ಟಿ , ರಮೇಶ್ ಇಟಗಿ , ಪಾಲ್ಘರ್ ನ ನಾರಾಯಣ್ ಶೆಟ್ಟಿ , ಶ್ರೀಮತಿ ವಿಶಾಲಾ ಮತ್ತು ರವೀಂದ್ರ ಶೆಟ್ಟಿ , ಬೊಯಿಸರ್ ನ ಪ್ರೇಮಾ ಬಿ.ಶೆಟ್ಟಿ , ಯಶೋದಾ ಬಿ.ಶೆಟ್ಟಿ , ಪೂರ್ಣಿಮಾ ಎಸ್.ಶೆಟ್ಟಿ , ಸುವರ್ಣಿ ಎನ್. ಶೆಟ್ಟಿ , ಪ್ರಕಾಶ್ ಶೆಟ್ಟಿ , ವಿನಯ್ ಅಡಪ ಉಪಸ್ಥಿತರಿದ್ದರು.
ಅಪರಾಹ್ನ 2 ಗಂಟೆಗೆ ಆರಂಭವಾದ ಕಾರ್ಯಕ್ರಮವು ಸಂಜೆ 6 ಗಂಟೆಗೆ ಸಂಪನ್ನಗೊಂಡಿತು.
ಸಂಪೂರ್ಣ ಕಾರ್ಯಕ್ರಮದ ವ್ಯವಸ್ಥಾಪನೆಯಲ್ಲಿ ತುಂಗಾ ಸಂತೋಷ್ ಶೆಟ್ಟಿ , ಶಯನ್ ಶೆಟ್ಟಿ , ನೀಲೇಶ್ ಹೆಗ್ಡೆ , ನವೀನ್ ಶೆಟ್ಟಿ , ಅಭಿಷೇಕ್ ಶೆಟ್ಟಿ , ಪ್ರವೀಣ್ ಶೆಟ್ಟಿ , ಸತೀಶ್ ಶೆಟ್ಟಿ ಸಹಕರಿಸಿದರು.
ಚಿತ್ರ ವರದಿ : ಪಿ.ಆರ್.ರವಿಶಂಕರ್
Mob. 8483980035