32 C
Mumbai
March 7, 2026
Mumbai News Kannada
ಮುಂಬಯಿ

ಬೆಸ್ಟ್ ಡಾಕ್ಟರ್ ಅವಾರ್ಡ್ ವಿಜೇತ ಡಾ. ಸದಾನಂದ ಶೆಟ್ಟಿಯವರಿಗೆಕರ್ನಾಟಕ ಸಂಘ ಸಯನ್ ನ ವತಿಯಿಂದ ಆತ್ಮೀಯ ಸನ್ಮಾನ.





ಕರ್ನಾಟಕ ಸಂಘ, ಸಯನ್ ಇದರ ಮಹಾಪೋಷಕರಾಗಿರುವ, ಅಂತರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞ, ಡಾ.ಸದಾನಂದ ಶೆಟ್ಟಿ ಯವರು 2024 ನೇ ಸಾಲಿನ ಬೆಸ್ಟ್ ಡಾಕ್ಟರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.

ಇಂದು ಸಯನ್ ನಲ್ಲಿರುವ ಅವರ ಕ್ಲಿನಿಕ್ನಲ್ಲಿ ಸಂಘದ ವತಿಯಿಂದ ಅವರನ್ನು ಭೇಟಿಯಾಗಿ ಶಾಲು ಹೊದಿಸಿ, ಪುಷ್ಪ ಗುಚ್ಛವನ್ನಿತ್ತು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷರುಗಳಾದ
ಶ್ರೀ ಸದಾಶಿವ ಶೆಟ್ಟಿ ಹಾಗೂ ಶ್ರೀ ಸದಾನಂದ ಶೆಟ್ಟಿ ಪೇಟ ತೊಡಿಸಿ, ಪುಷ್ಪ ಗುಚ್ಛವನ್ನಿತ್ತು ಗೌರವಿಸಿದರೆ, ಸಂಘದ ಸಂಸ್ಥಾಪಕ ಶ್ರೀ ಹ್ಯಾರಿ ಸಿಕ್ವೇರಾ ಶಾಲು ಹೊದಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ.ಶೆಟ್ಟಿಯವರು
ನಮ್ಮ ಸಂಘದ ಬೆಳವಣಿಗೆಗೆ ನಾವೆಲ್ಲರೂ ಸೇರಿ ದುಡಿಯಬೇಕು.
ಸಯನ್ ಪರಿಸರದಲ್ಲಿ ಕರ್ನಾಟಕ ಸಂಘವು ಕಳೆದ ವರ್ಷ ದಸರಾ ಸಮಯದಲ್ಲಿ ಹುಟ್ಟಿ ಕೊಂಡಾಗ ಬಹಳಷ್ಟು ಸಂತೋಷ ಅನುಭವಿಸಿದೆ.
ಕಳೆದ 60 ವರ್ಷಗಳಿಂದ ನಾನು ಇದೇ ಪರಿಸರದಲ್ಲಿ ಬದುಕು ಸಾಗಿಸಿದವ.
ಈ ಪರಿಸರದಲ್ಲಿ ಸಂಘ ಸಂಸ್ಥೆಗಳು ಇಲ್ಲದ ಒಂದು ಕೊರತೆ ನಮ್ಮನ್ನೆಲ್ಲ ಕಾಡುತ್ತಿತ್ತು. ಇದೀಗ ಆ ಕೊರತೆಯನ್ನು ತಾವೆಲ್ಲ ಸೇರಿ ನೀಗಿಸಿದ್ದೀರಿ.
ಇಂದು ಈ ಸಂಸ್ಥೆಯ ವತಿಯಿಂದ ದೊರೆತ ಸನ್ಮಾನ ಇದುವರೆಗೆ ನನ್ನ ಬದುಕಿನಲ್ಲಿ ದೊರೆತ ಸನ್ಮಾನಕ್ಕಿಂತ ಹೆಚ್ಚಿನ ಸಂತಸವನ್ನು ನೀಡಿದೆ ಎಂದು ನುಡಿದರು.

ಕಾರ್ಯದರ್ಶಿ ಡಾ.ಜಿ.ಕುಸುಮಾ, ಜೊತೆ ಕಾರ್ಯದರ್ಶಿ ಶ್ರೀ ದಯಾನಂದ ಮೂಲ್ಯ, ಸದಸ್ಯರುಗಳಾದ ವಾಣಿ ಪ್ರಸಾದ್ ಕರ್ಕೇರ,
ಶ್ರೀ ಚಂದ್ರ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.



Related posts

ಬೊರಿವಲಿ: ಜಗದೀಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ; ಕುಣಿತ ಭಜನೆಯ ಭಕ್ತಿಪರವಶತೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಭವ್ಯ ಶಿವನಂದ್ ಪೂಜಾರಿಗೆ ಶೇ 92.00 ಅಂಕ

Mumbai News Desk

12ನೇ ತರಗತಿಯ ಪರೀಕ್ಷೆಯಲ್ಲಿ. ಅನನ್ಯ ಬಿ ಕುಲಾಲ್. ಶೇ  86.50% 

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ತುಳು ಸಂಘ, ಬೋರಿವಲಿ ವತಿಯಿಂದ ಆಟಿದ ಒಂಜಿ ಕೂಟ,

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ ಮಹಮ್ಮಾಯಿ ದೇವಸ್ಥಾನದಲ್ಲಿ  ಅಯ್ಯಪ್ಪ ಸ್ವಾಮಿ ಗೆ ಅಪ್ಪ ಸೇವೆ.

Mumbai News Desk