
ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಕುಲಾಲ ಸಂಘವು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿ ನಿರ್ಮಿಸುತ್ತಿರುವ ಕುಲಾಲ ಭವನದ 4 ನೆಯ ಮಾಡಿಯಲ್ಲಿ ತೀರ್ಮಾನವಾಗುತ್ತಿರುವ ನಮ್ರತಾ ಜಗದೀಶ್ ರಾಮ ಬಂಜನ್ ಬ್ಯಾಂಕ್ವೆಟ್ ಹಾಲ್ ಮತ್ತು ಪಿಕೆ ಸಾಲ್ಯಾನ್ ವೇದಿಕೆಯ ಮುಹೂರ್ತ ಸಮಾರಂಭವು ಮಾರ್ಚ್ 8 ರಂದು ಬೆಳಿಗ್ಗೆ 10:30 ಗಂಟೆಗೆ ಜರಗಲಿದೆ.
ಕುಲಾಲ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆಲಿರುವ ಮುಹೂರ್ತ ಸಮಾರಂಭದಲ್ಲಿ
ವೀರನಾರಾಯಣ ಸೇವಾ ಟ್ರಸ್ಟ್ ಕುಲಶೇಖರ ಮಂಗಳೂರು ಇದರ ಕಾರ್ಯಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್ , ಮುಂಬೈಯ ಉದ್ಯಮಿ,ದಾನಿ ಸುನಿಲ್ ಆರ್ ಸಾಲಿಯನ್, ಜೈದೀಪ್ ಕನ್ಸ್ಟ್ರಕ್ಷನ್ ಅಂಬರನಾಥ್, ಇದರ ಮಾಲಕ ಜಗದೀಶ್ ರಾಮ ಬಂಜನ್ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕುಲಾಲ ಸಂಘ ಮುಂಬೈಯ ಗೌರವಾಧ್ಯಕ್ಷ ದೇವದಾಸ್ ಎಲ್ ಕುಲಾಲ್, ಉಪಾಧ್ಯಕ್ಷ ಡಿ. ಐ.ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ ಸಾಲ್ಯಾನ್, ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷ ಗಿರೀಶ್ ಬಿ ಸಾಲ್ಯಾನ್, ಕಾರ್ಯದರ್ಶಿ ಉಮೇಶ್ ಎಂ ಬಂಗೇರ, ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಬಂಗೇರ ಹಾಗೂ ಆಡಳಿತ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಸ್ಥಳೀಯ ಸಮಿತಿಯ ಎಲ್ಲಾ ಕಾರ್ಯಧ್ಯಕ್ಷರು, ಯುವ ವಿಭಾಗ ಮತ್ತು ಸಂಘದ ಎಲ್ಲ ಸದಸ್ಯರು ವಿನಂತಿಸಿದ್ದಾರೆ.