
ಬಂಟರ ಪ್ರತಿಷ್ಟಿತ ಸಂಸ್ಥೆ ಮೀರಾ ಡಹಾಣೂ ಬಂಟ್ಸ್ ಇದರ ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಇದೇ ತಾ.09 ಮಾರ್ಚ್ ಶನಿವಾರದಂದು ಸಂಜೆ ಸದಸ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರಗಿತು. ಬೊಯಿಸರ್ ನ ಪ್ರೀಮಿಯಮ್ ಹೋಟೆಲ್ ರೆಯಾಂಶ್ ಪ್ರೈಡ್ ನಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಕಳೆದ ಫೆಬ್ರುವರಿ ತಾ.10 ರಂದು ವಿರಾರ್ ನಲ್ಲಿ ಜರಗಿದ ಸಂಸ್ಥೆಯ ಕ್ರೀಡಾ ಉತ್ಸವದಲ್ಲಿನ ವಿಜೇತ ಸದಸ್ಯರನ್ನು ಗೌರವಿಸಲಾಯಿತು. ಹಾಗೂ ಇತ್ತೀಚೆಗೆ ಸರಾವಲಿ ಗ್ರಾಮಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಲತಾ ಜಗದೀಶ್ ಶೆಟ್ಟಿ ಇವರನ್ನು ಸತ್ಕರಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟೀ ಕೆ.ಭುಜಂಗ ಶೆಟ್ಟಿ , ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಹಾಗೂ ಮಹಿಳಾ ಮತ್ತು ಯುವ ವಿಭಾಗ ಸೇರಿದಂತೆ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

” ಇದೇ ಮೊದಲ ಬಾರಿ ಎಂಬಂತೆ ಇಂದು ಜರಗಿದ ಈ ಸ್ನೇಹ ಸಮ್ಮಿಲನದ ಮೂಲಕ ನಮ್ಮ ಸಮಾಜದ ಯುವಕರನ್ನು ಉತ್ತೇಜಿಸುವುದು ಹಾಗೂ ಡಹಾಣೂವಿನಿಂದ ಪಾಲ್ಘರ್ ತನಕ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಂಟಬಾಂಧವರನ್ನು ಒಗ್ಗೂಡಿಸಿ ಪರಿಚಯ ಸಂಬಂಧ ಬೆಳೆಸುವುದು ಈ ಸುಂದರ ಸಂಜೆಯ ಕಾರ್ಯಕ್ರಮದ ಉದ್ದೇಶವಾಗಿದೆ ” ಎಂದು ಕೆ.ಭುಜಂಗ ಶೆಟ್ಟಿ ವಿವರಿಸಿ ಶುಭ ಹಾರೈಸಿದರು.
ವಿವಿಧ ಮನೋರಂಜನಾ ಆಟಗಳಲ್ಲಿ ಸದಸ್ಯರ ಮಕ್ಕಳು ಹಾಗೂ ಮಹಿಳೆಯರು ಭಾಗವಹಿಸಿದ್ದು ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಚಿತ್ರ ಹಾಗೂ ವರದಿ :
ಪಿ.ಆರ್.ರವಿಶಂಕರ್ 8483980035