
ಮುಂಬಯಿ ಮಾ 16.ಭಾರತೀಯ ಜನತಾ ಪಾರ್ಟಿಯಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕ್ಯಾ.ಬ್ರಿಜೇಶ್ ಚೌಟ ಅವರು, ಮಾರ್ಚ್ 17 ರಂದು
ಮುಂಬೈಗೆ ಆಗಮಿಸಲಿದ್ದು ಈ ಸಂದರ್ಭದಲ್ಲಿ ನವಿ ಮುಂಬೈಯ ನ್ಯೂ ಪನ್ವೆಲ್ ಪೂರ್ವ ದ ಭಗತ್ ವಾಡಿಯ ರಾಜೀವ್ ಗಾಂಧಿ ಮೈದಾನದ ಹತ್ತಿರ ಸೆಕ್ಟರ್ 11,ರಲ್ಲಿರುವ ಹೋಟೆಲ್ “ಸ್ಪೈಸ್ ವಾಡಿ”ಇಲ್ಲಿ ಸಂಜೆ 7 ಗಂಟೆಗೆ ಮುಂಬೈ ಮತ್ತು ನವಿ ಮುಂಬೈಯ ತಮ್ಮ ಅಭಿಮಾನಿಗಳೊಂದಿಗೆ ಮಾತುಕತ ನಡೆಸಲಿದ್ದಾರೆ,

ಈ ಸಭೆಯಲ್ಲಿ ಅವರ ಅಭಿಮಾನಿಗಳು
ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಕ್ಯಾ.ಬ್ರಿಜೇಶ್ ಚೌಟ ಅಭಿಮಾನಿ ಬಳಗ ಮುಂಬೈ ಮತ್ತುನವಿ ಮುಂಬೈಯ ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರು ವಿನಂತಿಸಿಕೊಂಡಿದ್ದಾರೆ.