
ಸಂಘಟನೆ ಹೆಚ್ಚಾದಂತೆ ಪ್ರತಿಭಾವಂತರಿಗೆ ಅವಕಾಶ ಸಿಕ್ಕಿದಂತಾಗುತ್ತದೆ – ಡಾ. ವಿರಾರ್ ಶಂಕರ್ ಶೆಟ್ಟಿ
ಮುಂಬಯಿ : ಸುಮಾರು ಹದಿಮೂರು ವರ್ಷಗಳ ಹಿಂದೆ ಜಾತಿ ಬೇದ ವಿಲ್ಲದೆ ಬೋರಿವಲಿ ಪರಿಸರದಲ್ಲಿ ನೆಲೆಸಿದ ಕರಾವಳಿಯ ತುಳು ಕನ್ನಡಿಗರನ್ನು ಒಟ್ಟುಗೂಡಿಸಿ ಸಾಂಸ್ಕೃತಿಕ ವೈಭವ ದಂತಹ ಕಾರ್ಯಕ್ರಮವನ್ನು ನಡೆಸಿ ನಾಡಿನ ಬಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ತುಳು ಸಂಘ, ಬೋರಿವಲಿಯ ಸ್ಥಾಪನೆಯಾಯಿತು. ಮಹಾನಗರದಲ್ಲಿ ಬೇರೆಡೆ ಇಂತಹ ಸಂಘಟನೆ ಇದ್ದು ಇಂತಹ ಇನ್ನೊಂದು ಹೊಸ ಸಂಘಟನೆ ಸ್ಥಾಪಿಸುದರಲ್ಲಿ ಯಾವುದೇ ಮಾರಕವಿಲ್ಲ ಹೊರತು ಇದರಿಂದ ನಮ್ಮ ಅನೇಕ ಪ್ರತಿಭೆಗಳಿಗೆ ವೇದಿಕೆ ಸಿಗುವುದು ಹಾಗೂ ಅವರ ಪ್ರತಿಭೆಗಳನ್ನು ಹೊರತರಲು ಹೆಚ್ಚಿನ ಅವಕಾಶ ಸಿಕ್ಕಿದಂತಾಗುತ್ತದೆ ಎಂದು ತುಳು ಸಂಘ, ಬೋರಿವಲಿಯ ಗೌರವ ಅಧ್ಯಕ್ಷ ಡಾ. ವಿರಾರ್ ಶಂಕರ್ ಬಿ. ಶೆಟ್ಟಿ ಅಭಿಪ್ರಾಯ ಪಟ್ಟರು.

ಮಾ. 23ರಂದು ತುಳು ಸಂಘ, ಬೊರಿವಲಿಯ 13ನೇ ವಾರ್ಷಿಕೋತ್ಸವ ಸಮಾರಂಭವು ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೋರಿವಲಿ ಸಂಸ್ಕೃತಿ ಕೇಂದ್ರ, ಬೋರಿವಲಿ (ಪ.) ಮುಂಬಯಿ ಇಲ್ಲಿ ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮ ಸಂಸ್ಕೃತಿ ಉಳಿಯಲು ಇಂತಹ ಸಂಘ ಸಂಸ್ಥೆಗಳು ಕಾರಣ. ಇಲ್ಲಿನ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಮಹಿಳೆಯರು ಕ್ರೀಯಾಶೀಲವಾಗಿರುವ ಸಂಘಟನೆಗೆ ಉತ್ತಮ ಭವಿಷ್ಯವಿದೆ. ಸಂಘಟನೆಗಳು ಉತ್ತಮ ಕೆಲಸ ಮಾಡಿದಲ್ಲಿ ಅದಕ್ಕೆ ದಾನ ರೂಪದಲ್ಲಿ ಸಹಕರಿಸುವವರು ಅನೇಕರಿದ್ದಾರೆ. ಈ ಸಂಘವನ್ನು ನಾವೆಲ್ಲರೂ ಸೇರಿ ಇನ್ನೂ ಬೆಳೆಸೋಣ ಎಂದರು.

ತುಳು ಸಂಘ, ಬೋರಿವಲಿಯ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರು ಅತಿಥಿಗಳನ್ನು ಹಾಗೂ ಸೇರಿದ ಎಲ್ಲಾ ತುಳು ಅಭಿಮಾನಿಗಳನ್ನು ಸ್ವಾಗತಿಸಿ ಮಾತನಾಡುತ್ತಾ ಸಂಘದ ಮಾಜಿ ಅಧ್ಯಕ್ಷರುಗಳಾದ ವಾಸು ಪುತ್ರನ್ ಮತ್ತು ಪ್ರಕಾಶ್ ಶೆಟ್ಟಿ ಪೇಟೆಮನೆ ಇವರ ನೇತೃತ್ವದಲ್ಲಿ ಹಿಂದೆಯೂ ತುಳು ಸಂಘವು ಪರಿಸರದ ವಿವಿಧ ಸಮುದಾಯದ ತುಳು ಕನ್ನಡ ಬಾಂಧವರನ್ನು ಸೇರಿಸಿ ತುಳು ಬಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಿದ್ದು ಇದನ್ನು ನಾವು ಮುಂದುವರಿಸುತ್ತಿದ್ದೇವೆ. ವಿರಾರ್ ಶಂಕರ್ ಶೆಟ್ಟಿ, ಸಂಸದರಾದ ಗೋಪಾಲ್ ಶೆಟ್ಟಿ, ಪ್ರದೀಪ್ ಶೆಟ್ಟಿ ಮೊದಲಾದ ಗಣ್ಯರ ಮಾರ್ಗದರ್ಶನ ತುಳು ಸಂಘ, ಬೋರಿವಲಿ ಗೆ ನಿರಂತರವಾಗಿದೆ ಎಂದರು.

ಗಣ್ಯರಿಂದ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರಸ್ವತಿ ರಾವ್ ಪ್ರಾರ್ಥನೆ ಮಾಡಿದರು.
ಸಾಂಸ್ಕೃತಿಕ ಕಾರ್ಯಮದ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಶಾಸಕಿ ಮನೀಶಾ ಚೌದರಿ ಹೋಳಿ ಹಬ್ಬದ ಶುಭ ಸಂಧರ್ಭದಲ್ಲಿ ಎಲ್ಲಾ ಸಮುದಾಯದ ತುಳು ಬಾಂದವರನ್ನು ಒಂದೆಡೆ ಸೇರಿಸಿ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸುತ್ತಿರುವ ತುಳು ಸಂಘ ಮುಂಬಯಿ ಎಲ್ಲಾ ಬಣ್ಣಗಳನ್ನು ಒಟ್ಟು ಸೇರಿಸಿ ಹೋಳಿ ಆಚರಿಸುವಂತೆ ಎಲ್ಲರೂ ಒಗ್ಗಟ್ಟಾಗಿರುವುದು ಅಭಿನಂದನೀಯ ಎನ್ನುತ್ತಾ ಸಮಾರಂಭಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಬೋರಿವಲಿ ಪಶ್ಚಿಮ ಜಯರಾಜ್ ನಗರದ ಮಹಿಷ ಮರ್ಧಿನಿ ದೇವಸ್ಥಾನದ ಆಡಳಿತ ಟ್ರಷ್ಟಿ ಪ್ರದೀಪ್ ಸಿ. ಶೆಟ್ಟಿ ಮತ್ತು ಬಹುಬಾಷಾ ಸಾಹಿತಿ, ಕವಿ ಸೀಮಂತೂರು ಚಂದ್ರಹಾಸ ಸುವರ್ಣ ದಂಪತಿ ಇವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ಅಲ್ಲದೆ ಕಳೆದ ಮೂರು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಸೇವೆ ಮಾಡುತ್ತಿರುವ ಕರುಣಾಕರ ಎಂ. ಶೆಟ್ಟಿ ದಂಪತಿಯನ್ನು ಗಣ್ಯರು ಗೌರವಿಸಿದರು. ಸನ್ಮಾನಿತರನ್ನು ಪ್ರವೀಣ್ ಅರ್. ಶೆಟ್ಟಿ ಮತ್ತು ಪೇಟೆಮನೆ ಪ್ರಕಾಶ್ ಶೆಟ್ಟಿ ಪರಿಚಯಿಸಿದರು. ಅತಿಥಿಗಳನ್ನು ಲಕ್ಷ್ಮೀ ದೇವಾದಿಗ, ನ್ಯಾ. ರಾಘವ ಎಂ., ಮತ್ತು ಕೃಷ್ಣರಾಜ್ ಸುವರ್ಣ ಪರಿಚಯಿಸಿದರು.

ಬಂಟರ ಸಂಘ ಮುಂಬಯಿಯ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ, ಮಾಜಿ ಕಾರ್ಯಾಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿ, ಮಹಿಳಾ ವಿಭಾಗದ ನಿಕಟ ಪೂರ್ವ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ್ ಶೆಟ್ಟಿ, ಡಾ. ಪಿ. ವಿ. ಶೆಟ್ಟಿ, ಮುಂಡಪ್ಪ ಪಯ್ಯಡೆ, ಉಷಾ ಗೋಪಾಲ್ ಶೆಟ್ಟಿ, ರತಿ ಶಂಕರ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಡಾ. ಸತೀಶ್ ಶೆಟ್ಟಿ, ಭಾರತ್ ಭ್ಯಾಂಕಿನ ನಿರ್ದೇಶಕರಾದ ಭಾಸ್ಕರ ಸಾಲ್ಯಾನ್ , ಮಾಜಿ ನಿರ್ದೇಶಕ ಪ್ರೇಮನಾಥ ಕೋಟ್ಯಾನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮನೋರಂಜನೆಯ ಅಂಗವಾಗಿ ಅಭಿನಯ ಮಂಟಪದ ಕಲಾವಿದರಿಂದ, ಕರುಣಾಕರ ಕೆ. ಕಾಪು ನಿರ್ದೇಶನದ “ಕಲ್ಕುಡ – ಕಲ್ಲುರ್ಟಿ”, ತುಳು ನಾಟಕ, ಕುಣಿತ ಭಜನೆ ಸಂಘದ ಸದಸ್ಯರಿಂದ, ಮಕ್ಕಳಿಂದ ನೃತ್ಯ ಕವಾಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ತುಳು ಕನ್ನಡಿಗರಿಂದ ತುಂಬಿದ ಸಭಾಂಗಣದಲ್ಲಿ ನಡೆಯಿತು
ವೇದಿಕೆಯಲ್ಲಿ ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರಾದ ಉಮಾ ಕೃಷ್ಣ ಶೆಟ್ಟಿ, ಗೌರವ ಅತಿಥಿಗಳಾದ ಕನ್ನಡ ಸಂಘ ಸೂರತ್ ಇದರ ಮಾಜಿ ಅದ್ಯಕ್ಷ, ಉದ್ಯಮಿ ರಾಧಾಕೃಷ್ಣ ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ತುಳು ಸಂಘ, ಬೋರಿವಲಿ ಯ ಉಪಾಧ್ಯಕ್ಷರಾದ ಹರೀಶ್ ಮೈಂದನ್, ಸಂಘದ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ, ಉಪ ಕಾರ್ಯಾಧ್ಯಕ್ಷೆ ಶೋಭಾ ಎಸ್. ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಿ ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ, ಕುಸುಮ ಬಿ. ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಕಸ್ತೂರಿ ಎಸ್. ಶೆಟ್ಟಿ, ಕಾರ್ಯದರ್ಶಿ ಸುನಂದ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಅರ್. ಶೆಟ್ಟಿ, ಸದಸ್ಯತನ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ನ್ಯಾ. ರಾಘವ ಎಂ., ನಿರೂಪಿಸಿದ್ದು, ಸಭಾ ಕಾರ್ಯಕ್ರಮವನ್ನು ಸಚಿನ್ ಪೂಜಾರಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಅರ್. ಶೆಟ್ಟಿ ನಿರ್ವಹಿಸಿದರು.
ಇಂದಿನ ಸಮಾರಂಭಕ್ಕೆ ಇಂದು ನನ್ನನ್ನು ಮುಖ್ಯ ಅತಿಥಿಯ ಸ್ಥಾನ ನೀಡಿದ್ದಾರೆ. ಮಹಿಳೆಯರಿಗೆ ಎಲ್ಲಿ ಸ್ಥಾನ ಮಾನ ನೀಡುತ್ತಾರೋ ಅಲ್ಲಿ ದೇವರು ನೆಲೆಸುತ್ತಾರಂತೆ. ತುಳುವರ ಮನಸ್ಸು ದೊಡ್ಡದು. ಮಹಿಳೆಯರಿಗೆ ಯಾವಾಗಲೂ ಸ್ಥಾನ ಮಾನ ಇರಲಿ. ಈ ಸಂಘದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ. ದಾನ ಮಾಡುವ ಕೈ ಶ್ರೇಷ್ಠ. ಜಾತಿ ಬೇದವಿಲ್ಲದೆ ನಿಸ್ವಾರ್ಥ ಸೇವೆ ಮಾಡುವುದೇ ದೇವರ ಕೆಲಸ. ಅದು ತುಳುವರ ಮನ್ನಸ್ಸು.
- ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರಾದ ಉಮಾ ಕೃಷ್ಣ ಶೆಟ್ಟಿ,
=====
ತುಳು ಅಂದರೆ ನನಗೆ ಬಹಳ ಪ್ರೀತಿ. ತುಳು ಜನರು ನನಗೆ ಬಹಳ ಹತ್ತಿರದವರು. ತುಳು ಜನರನ್ನು ಎಷ್ಟೂ ಹೊಗಳಿದರೂ ಕಡೆಮೆ. ತುಳುವರು ಶ್ರಮ ಜೀವಿಗಳು. ಎಲ್ಲಾ ಕ್ಷೇತ್ರಗಳಲ್ಲಿ ನಾವಿದ್ದೇವೆ ನಮ್ಮವರು ಸಾಧಕರು. ಪ್ರಯತ್ನ ಮಾಡಿದಲ್ಲಿ ಯಾವುದೂ ಅಸಾಧ್ಯವಲ್ಲ. ನಮ್ಮ ನಾಡು ಇಂದು ಬಹಳ ಅಭಿವೃದ್ದಿಯಾಗಿದೆ. ಇದಕ್ಕೆ ಶಿಕ್ಷಣಿಕ ವಾಗಿ ನಮ್ಮವರು ಬಹಳ ಮುಂದುವರಿದಿರುವುದೂ ಕಾರಣ. ತುಳು ನಾಡಿನ ಮಣ್ಣಿನಲ್ಲಿ ವಿಶೇಷತೆಯಿದೆ. ಪಾಲಕರು ಮಕ್ಕಳೊಂದಿಗೆ ಹೆಚ್ಚಿನ ಕಾಲ ಕಳೆಯುತ್ತಾ ನಮ್ಮ ಸಂಸ್ಕೃತಿಯನ್ನು ಅವರಿಗೂ ತಿಳಿಸುವಂತಾಗಬೇಕು.
ಗೌರವ ಅತಿಥಿ ಕನ್ನಡ ಸಂಘ ಸೂರತ್ ಇದರ ಮಾಜಿ ಅದ್ಯಕ್ಷ, ಉದ್ಯಮಿ ರಾಧಾಕೃಷ್ಣ ಶೆಟ್ಟಿ
====
ತುಳು ನಾಡಿನ ಜನರು ಒಂದಾಗ ಬೇಕಾದದ್ದು ಹಾಗೂ ತುಳು ನಾಡಿನ ಸಂಸ್ಕಾರವನ್ನು ಉಳಿಸಿ ಬೆಳೆಸಲು ತುಳು ಸಂಘ ಸಂಸ್ಥೆಗಳ ಅಗತ್ಯವಿದೆ. ಹಿರಿಯರು ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕಿರಿಯರನ್ನು ಇಂತಹ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದಲ್ಲು ಮುಂದೆ ತುಳು ನಾಡಿನ ಸಂಸ್ಕೃತಿ ಸಂಸ್ಕಾರ ಉಳಿಯುವಲ್ಲಿ ಸಂದೇಹವಿಲ್ಲ.