
ದೇವಸ್ಥಾನದಲ್ಲಿ ಧರ್ಮ ಜಾಗೃತಿಯ ಸೇವೆ ಮಾತ್ರವಲ್ಲ, ಭಕ್ತರ ಕಷ್ಟಗಳಿಗೆ ಸ್ಪಂದಿಸುವ ಸೇವೆ ನಡೆಯುತ್ತಿದೆ – ಪ್ರೇಮನಾಥ್ ಎಸ್ ಸಾಲ್ಯಾನ್
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ : ಸುದೀರ್ಘಕಾಲದಿಂದ ಕ್ಷೇತ್ರದಲ್ಲಿ ನನ್ನಿಂದ ಆಗುವ ಅಳಿಲ ಸೇವೆಯನ್ನು ಮಾಡುತ್ತ ಬಂದಿರುವೆನು. ಇವತ್ತು ನನಗೆ ಸೌಭಾಗ್ಯ ಅಂತ ಹೇಳಬೇಕು. ಆ ಸೇವೆಯನ್ನು ಮಾಡಿದಕ್ಕೆ ಪ್ರಸಾದ ರೂಪದಲ್ಲಿ ಇಂದು ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಧ್ಯಕ್ಷರನ್ನಾಗಿ ಮಾಡಿ ಈ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ , ಇದು ನನ್ನ ಸೌಭಾಗ್ಯ, ದೇವಸ್ಥಾನದಲ್ಲಿ ಧರ್ಮ ಜಾಗೃತಿಯ ಸೇವೆ ಮಾತ್ರವಲ್ಲ, ಭಕ್ತರ ಕಷ್ಟಗಳಿಗೆ ಸ್ಪಂದಿಸುವ ಸೇವೆ ನಡೆಯುತ್ತಿದೆ ಎಂದು ಅಭ್ಯುದಯ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ್ ಎಸ್ ಸಾಲ್ಯಾನ್ ಅವರು ನುಡಿದರು
ಮಲಾಡ್ ಪೂರ್ವ ಲಕ್ಷ್ಮಣ ನಗರ ಕುರಾರ್ ವಿಲೇಜ್ ನಲ್ಲಿ ಸ್ಥಾಪಿಸಿದ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರಂಭವು ಎ. 7 ರಂದು ಲತಾ ಮಂಗೇಶ್ಕರ್ ನಾಟ್ಯಾಗೃಹ ಸಭಾಗೃಹ, ಮಹಾಜನ್ ವಾಡಿ, ಮೀರಾರೋಡ್ ಪೂರ್ವ ಇಲ್ಲಿ ದಿನ ಪೂರ್ತಿ ಜರಗಿದ್ದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕಳೆದ ಸುಮಾರು 30 ವರ್ಷಗಳಿಗೂ ಅಧಿಕ ಕಾಲ ಶ್ರೀನಿವಾಸ ಸಾಫಲ್ಯರು ಈ ಕ್ಷೇತ್ರದಲ್ಲಿ ವಿವಿಧ ರೀತಿಯ ಜವಾಬ್ದಾರಿಯನ್ನು ಹೊಂದಿ ಕಳೆದ ಹತ್ತು ವರ್ಷಗಳಿಂದ ಅಧ್ಯಕ್ಷರಾಗಿ ದೇವಸ್ಥಾನದ ಅಭಿವೃದ್ಧಿಗಾಗಿ ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ. ಎಲ್ಲಾ ಭಕ್ತಾಭಿಮಾನಿಗಳನ್ನು ಒಂದುಗೂಡಿಸಿ ಅವರು ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ದೇವರ ಆಶೀರ್ವಾದ ಇದೆ. ನಮ್ಮೀ ಕ್ಷೇತ್ರವು ಕೇವಲ ಧಾರ್ಮಿಕ ಮಾತ್ರವಲ್ಲ ಶೈಕ್ಷಣಿಕವಾಗಿ ಬಡ ಜನರಿಗೆ ಕ್ಷೇತ್ರದ ಮೂಲಕ ಸಹಕರಿಸಲಾಗುತ್ತದೆ. ಇವತ್ತು ನಮ್ಮ ಹಿರಿಯ ಸದಸ್ಯರು ಊರಿನಲ್ಲಿ ನೆಲೆಸಿದ್ದವರು ಕೂಡ ಇಂದು ಇಲ್ಲಿಗೆ ಆಗಮಿಸಿ ಪ್ರಸಾದ ರೂಪದಲ್ಲಿ ದೇವಸ್ಥಾನದ ಗೌರವವನ್ನು ಸ್ವೀಕರಿಸಿದ್ದಾರೆ. ಮಲಾಡ್ ತೊರೆದು ದುರದಲ್ಲಿ ನೆಲೆಸಿದ್ದ ಭಕ್ತರು ದೇವಸ್ಥಾನೆಕ್ಕೆ ಬಂದು ಸೇವೆಯನ್ನು ಮಾಡುತ್ತಿದ್ದಾರೆ. ಇಂದು ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಶನಿ ದೇವರ ಭಾವಚಿತ್ರ ಹೊಂದಿದ ಬೆಳ್ಳಿಯ ನಾಣ್ಯವನ್ನು ಭಕ್ತಾಭಿಮಾನಿಗಳಿಗೆ ನೀಡಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಕಳೆದ ಒಂದು ವರ್ಷದಿಂದ ಹದಿನೆಂಟು ಕಾರ್ಯಕ್ರಮವನ್ನು ಯಶಸ್ಸಿಯಾಗಿ ನಡೆಸುವಂತಾಗಿದೆ ಎಂದರು.
ಆಶೀರ್ವಚನ ನೀಡುತ್ತಾ ಭಾರತ್ ಜ್ಯೋತೀಶ್ ರತ್ನ ವೇದಮೂರ್ತಿ ಧರ್ಮಚಾರ್ಯ ಶ್ರೀ ಗೋರಕ್ಷನಾಥ್ ಗುರೂಜಿರವರು ಶನಿ ದೇವರ ಭಕ್ತಾಭಿಮಾನಿಗಳಿಗೆ ಆಶ್ರೀರ್ವಚನದ ಅವಶ್ಯಕತೆಯಿಲ್ಲಅಂತ ಕಾಣುತ್ತಿದೆ. ಯಾಕೆಂದರೆ ಶನಿ ದೇವರಲ್ಲಿಗೆ ಹೋಗುವವರು ಒಳ್ಳೆಯ ಕರ್ಮವನ್ನು ಮಾಡಿದವರು. ಒಳ್ಳೆಯ ಕರ್ಮವನ್ನು ಮಾಡಿದವರ ಮನಸ್ಸು ಒಳ್ಳೆಯದಾಗಿರುತ್ತದೆ ಹಾಗೂ ಅಂತವ ಭಾವನೆಗಳು ಉತ್ತಮವಾಗಿರುತ್ತದೆ. ಇದರಿಂದ ಅಂತವರಿಗೆ ದೇವರ ಆಶೀರ್ವಾದ ಸದಾ ಇದೆ. ಮಲಾಡ್ ಕುರಾರ್ ನಲ್ಲಿ ಶನಿ ದೇವರ ಮೂರ್ತಿಯನ್ನು ಸ್ಥಾಪಿಸಿ ಪೂಜಿಸಿ ಎಲ್ಲಾ ತರದ ಜನರನ್ನು ಧರ್ಮದ ಮಾರ್ಗದಲ್ಲಿ ತರುವ ಕಾರ್ಯವನ್ನು ಕಳೆದ ೫೦ ವರ್ಷಗಳಿಂದ ಮಾಡುತ್ತಾ ಬಂದಿದ್ದೀರಿ. ಇಲ್ಲಿ ಕೇವಲ ಧಾರ್ಮಿಕ, ಆಧ್ಯಾತ್ಮಿಕ ಮಾತ್ರವಲ್ಲ ಸಾಂಸ್ಕೃತಿಕ ಹಾಗೂ ಸಮಾಜಿಕ ಕಾರ್ಯಾವನ್ನು ನಡೆಸುತ್ತಿರುವುದು ಅಭಿನಂದನೀಯ. ದೂರದ ಜನ್ಮ ಭೂಮಿಯಿಂದ ಬಂದು ಮಹಾರಾಷ್ಟ್ರದಲ್ಲಿ ಇಂತಹ ಧಾರ್ಮಿಕ ಕ್ಷೇತ್ರವನ್ನು ನಡೆಸುತ್ತಿರುವುದು ನಮಗೆಲ್ಲರಿಗೂ ಗೌರವದ ಸಂಕೇತವಾಗಿದೆ. ದಕ್ಷಿಣ ಭಾರತದಿಂದ ಉತ್ತರ ಭಾರತದ ತನಕ ಎಲ್ಲಾ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಈ ಮೂಲಕ ತಮ್ಮಿಂದ ನಡೆಯುತ್ತಿದೆ. ಇಲ್ಲಿ ಎಲ್ಲರೂ ಒಂದೇ ಮನಸ್ಸಿನಿಂದ ದೇವರ ಕಾರ್ಯ ಮಾಡುತ್ತಿದ್ದು, ದೇವರು ನೆಮ್ಮೆಲ್ಲರನ್ನು ಆಶೀರ್ವದಿಸಲಿ ಎಂದರು.
ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ ಯವರು ತುಳು ಕನ್ನಡಿಗರಿಂದ ಸ್ಥಾಪನೆಯಾಗಿ ಇದೀಗ 50 ವರ್ಷವನ್ನು ಆಚರಿಸುತ್ತಿರುವ ಮಲಾಡ್ ಕುರಾರ್ ವಿಲೇಜ್ ನ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಎಲ್ಲಾ ಕಾರ್ಯಕರ್ತರಿಗೆ ಶುಭ ಹಾರೈಸಿದರು.
ಸಮಾಜ ಸೇವಕ, ಉದ್ಯಮಿ ನಂದಕುಮಾರ್ ಅವರು ಮಾತನಾಡಿ ಅಭಿನಂದನೆಯನ್ನು ಸಲ್ಲಿಸುತ್ತಾ ಇಂದು ವಿಜ್ರಂಭಣೆಯಿಂದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾವು ಭವ್ಯ ದೇವಸ್ಥಾನವಾಗಿ ಜನ ಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸಲಿ ಎಂದರು.
ಬಂಟ್ಸ್ ಫಾರಂ ಮೀರಾ-ಭಾಯಂಧರ್ ನಿರ್ದೇಶಕರಾದ ಜಯಪ್ರಕಾಶ್ ಆರ್ ಬಂಡಾರಿ ಯವರು ಮಾತನಾಡಿ ದೇವರ ಆಶೀರ್ವಾದದಿಂದ ದೇವಸ್ಥಾನವು ಖಂಡಿತವಾಗಿ ಆಗುತ್ತದೆ. ನಾವು ದೇವರ ಸೇವೆಯನ್ನು ಮಾಡೋಣ. ಇನ್ನು ಮುಂದೆಯು ನನ್ನ ಸಹಕಾರವು ಇದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳು ಹಾಗೂ ಎಲ್ಲಾ ಗಣ್ಯರು ದೀಪ ಬೆಳಗಿಸಿ ಹಿಂಗಾರ ಅರಳಿಸಿ ಉದ್ಘಾಟನಾ ಸಮಾರಂಭದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು. ರಮೇಶ್ ಚಂದ್ರ ಅವರು ಪ್ರಾರ್ಥನೆ ಮಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಅವರು ಸಮಿತಿಯ ಕಳೆದ ೫೦ ವರ್ಷಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತಾ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನವು ಕೇವಲ ಧಾರ್ಮಿಕ ಕಾರ್ಯದಲ್ಲಿ ಮಾತ್ರ ತೊಡಗಿರದೆ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಬಗ್ಗೆ ತಿಳಿಸುತ್ತಾ ಸುವರ್ಣ ಮಹೋತ್ಸವ ವರ್ಷದಲ್ಲಿ ಪ್ರತೀ ತಿಂಗಳು ಒಂದು ಕಾರ್ಯಕ್ರಮದಂತೆ ಒಂದು ವರ್ಷ ಹನ್ನೆರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದೇವರ ಆಶೀರ್ವಾದದಿಂದ ಕೇವಲ ಮಲಾಡ್ ನಲ್ಲಿ ಮಾತ್ರವಲ್ಲದ ದೇಶದ ಇರತೆಡೆ ಸೇರಿ ಹದಿನೆಂಟು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಎಂಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಹಾಗೂ ಉದ್ಯಮಿ ದೇವರಾಯ ಮಂಜುನಾಥ್ ಸೇರಿಗಾರ್ ಅವರು ಮಾತನಾಡುತ್ತಾ ಹಳೆ ತಲೆಮಾರನ್ನು ಗುರುತಿಸಿ ಗೌರವಿಸಿದ್ದು ಸಂತೋಷದ ಸಂಗತಿ. ಇಂತಹ ಧಾರ್ಮಿಕ ಕಾರ್ಯದಿಂದ ನಮ್ಮ ಧರ್ಮ ಉಳಿಯುದರಲ್ಲಿ ಸಂದೇಹವಿಲ್ಲ. ದೇವರ ಕೃಪೆಯಿದ್ದಲ್ಲಿ ಸಾಧನೆ ಸಾಧ್ಯ. ಚಂಡಿಕಾ ದುರ್ಗಾಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ನಾನು ದೇವಸ್ಥಾನವನ್ನು ಮಾಡಿದ್ದು ದೇವರ ಕೃಪೆಯಿಂದ ಇದು ಸಾಧ್ಯವಾಗಿದೆ ಎಂದರು.
ಇನ್ನೋರ್ವ ಅತಿಥಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷರಾದ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಯವರು ಮಾತನಾಡಿ ಇಂದು ನನ್ನ ಅತ್ಮೀಯಾರಾದ ಶ್ರೀನಿವಾಸ ಸಾಫಲ್ಯರ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಹೆಚ್ಚಿನ ಹಿರಿಯರನ್ನು ಸನ್ಮಾನಿಸಿ ಋಣ ಸಲ್ಲಿಸಿದ್ದು ನಿಜಕ್ಕೂ ಅಭಿನಂದನೀಯ. ಕ್ಷೇತ್ರದ ಮೂಲಕ ಧಾರ್ಮಿಕ ಸೇವೆಯೊಂದಿಗೆ ಸಮಾಜಿಕ ಹಾಗೂ ಶೈಕ್ಷಣಿಕ ಸೇವೆ ಮುಂದುವರಿಯುತ್ತಿರಲಿ ಎನ್ನುತ್ತಾ ಮಕ್ಕಳಿಗೆ ಭಗದ್ಗೀತೆ ಕಲಿಸುವ ವ್ಯವಸ್ತೆಯಾಗಲಿ. ಇದರಿಂದ ಮಕ್ಕಳ ಜೀವನ ಸುಧಾರಣೆ ಯಾಗುವುದು ಎಂದರು.
ಅತಿಥಿ ಮಲಾಡ್ ಕನ್ನಡ ಸಂಘದ ಅಧ್ಯಕ್ಷರಾದ ನ್ಯಾ. ಜಗದೀಶ್ ಹೆಗ್ಡೆ, ಯವರು ಮಾತನಾಡುತ್ತಾ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಶನೀಶ್ವರ ದೇವಸ್ಥಾನವನ್ನು ನಮ್ಮ ಹಿರಿಯರು ಸ್ಥಾಪಿಸಿದ್ದು, ನಾವೆಲ್ಲರೂ ಸೇರಿ ನಮ್ಮಿಂದ ಆಗುವಷ್ಟು ಈ ಕ್ಷೇತ್ರಕ್ಕೆ ಸೇವೆ ಮಾಡಬೇಕು ಎನ್ನುತ್ತಾ ಹಿರಿಯರು ಮಾಡಿದ ಸೇವೆಯನ್ನು ನಾವೆಲ್ಲರೂ ಮುಂದುವರಿಸೋಣ ಎಂದರು.
ನಗರ ಸೇವಕರಾದ ಪ್ರತಿಭಾ ಹೇಮಂತ್ ಶಿಂಧೆ ಮಾತನಾಡಿ ಈ ಸಮಾರಂಭಕ್ಕೆ ಆಗಮಿಸಿದ್ದ ನಾನು ಭಾಗ್ಯ ಶಾಲಿಯಾಗಿದ್ದೇನೆ. ದೇವರ ಕೃಪೆಯಿಂದ ಇದು ಸಾಧ್ಯ. ದೇವರ ಕೃಪೆಯಿಂದ ಎಲ್ಲರೂ ಇಲ್ಲಿಗಾಗಮಿಸಿದ್ದಾರೆ. ಇನ್ನು ಮುಂದೆಯೂ ಇದಕ್ಕಿಂತಲೂ ಅದ್ದೂರಿಯಾಗಿ ದೇವಸ್ಥಾನದ ಕೆಲಸ ನಡೆಯಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಕ್ವಾರಿ ಅಂಡ್ ಕರ್ಸರ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಸನ್ಮಾನಕ್ಕೆ ಉತ್ತರಿಸಿ ಮಾತನಾಡುತ್ತಾ ಉದ್ಯೋಗ ನಿಮಿತ್ತ ಮುಂಬಯಿಗಾಗಮಿಸಿದ ನಮ್ಮ ಹಿರಿಯರು ಇಲ್ಲಿಗೆ ಬಂದು ನಮ್ಮ ದೈವ ದೇವರನ್ನು ಪೂಜಿಸುವ ಕೆಲಸವನ್ನು ಮಾಡಿದ್ದು ನಮ್ಮ ಹಿರಿಯರ ಅಂದಿನ ಹೋರಾಟದಿಂದ ಇದು ಸಾದ್ಯವಾಯಿತು. ನಮ್ಮ ಮಕ್ಕಳಿಗೆ ಸಂಸ್ಕಾರ ನೀಡುವಂತಹ ಇಂತಹ ಕಾರ್ಯಕ್ರಮಗಳು ಮುಂದುವರಿಯಲಿ. ಮಕ್ಕಳು ಸಂಸ್ಕಾರದಿಂದ ಹೊರಗೆ ಹೋಗದ ಹಾಗೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಲಿ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಹಿರಿಯ ಸದಸ್ಯರಾದ ನಾರಾಯಣ್ ಶೆಟ್ಟಿ, ಜಗನ್ನಾಥ್ ಸಾಲಿಯಾನ್, ವಾಸು ದೇವಾಡಿಗ, ರಾಘು ಸಾಲ್ಯಾನ್, ನಿತ್ಯಾನಂದ ಕೋಟ್ಯಾನ್ ,ಚಂದ್ರ ಕುಮಾರ್ ಶೆಟ್ಟಿ, ರಮೇಶ್ ರಾವ್,, ಸದಾನಂದ ನಾಯಕ್, ನಾರಾಯಣ ದೇವಾಡಿಗ ,ರಾಮಕೃಷ್ಣ ಶೆಟ್ಟಿಯನ್ ,ದಿನೇಶ್ ಕುಂಬ್ಳೆ, ಮಾಧವ ಪೂಜಾರಿ , ಸುಭಾಷ್ ಅಮೀನ್, ಸುಂದರ್ ಎನ್ ಶೆಟ್ಟಿ , ಕಾಂತಪ್ಪ ಪೂಜಾರಿ , ದೇವಸ್ಥಾನದ ಪ್ರಧಾನ ಅರ್ಚಕರಾದ ತುಂಗಾ ರಾಘವೇಂದ್ರ ಭಟ್ ,ಅರ್ಚಕರಾದ ನಾರಾಯಣ ಭಟ್, ಹಾಗೂ ಊರಿನಿಂದ ಆಗಮಿಸಿದ ಬಜೆಗೋಳಿ ಡಾ. ರವೀಂದ್ರ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರೆ, ದೇವಸ್ಥಾನದ ಹಿತೈಷಿಗಳಾಗಿ ರಾಜು ಬಾಯಿ, ಸತೀಶ್ ಶೆಟ್ಟಿ, ರಮೇಶ್ ಟೆಟ್ಟಿ , ರಾಜೇಶ್ ಪಾಲ್, ನರೇಶ್ ಬಾಯಿ, ನಾಗೇಶ್ ಪೊಳಲಿ, ಅಜಿತ್ ಕರ್ಖಾನೆಸ್, ಕೆ ಪಿ ರವೀಂದ್ರನ್, ಎಡ್ವಿನ್ ಜೆ ಫೆರ್ನಾಂಡೀಸ್, ಪಿ ಲಕ್ಷ್ಮಿ ನಾರಾಯಣ ಹೆಬ್ಬಾರ್, ನಿತ್ಯಪ್ರಕಾಶ್ ಶೆಟ್ಟಿ, ರಾಜೀವ್ ಕೆ ತುಂಗರೆ, ಇವರನ್ನು ಗೌರವಿಸಲಾಯಿತು,
ವೇದಿಕೆಯಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ , ಸುವರ್ಣಮೋತ್ಸವ ಸಮಾರಂಭದ ಕಾರ್ಯಾಧ್ಯಕ್ಷರಾದ ಅಭ್ಯುದಯ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ, ಪ್ರೇಮನಾಥ್ ಎಸ್ ಸಾಲ್ಯಾನ್
ಮುಖ್ಯ ಅತಿಥಿಯಾಗಿ ಕುಂದಾಪುರ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಹಾಗೂ ಉದ್ಯಮಿ ದೇವರಾಯ ಮಂಜುನಾಥ್ ಸೇರಿಗಾರ್ . ಅತಿಥಿಗಳಾಗಿ ಬೊಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸಿ ಎ ಸುರೇಂದ್ರ ಕೆ. ಶೆಟ್ಟಿ ,ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷರಾದ ಡಾ. ಸುರೇಂದ್ರ ಕುಮಾರ್ ಹೆಗ್ಡೆ, ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ,, ವಾರ್ಡ್ ನಂಬರ್ 37 ರ ನಗರ ಸೇವಕರಾದ ಪ್ರತಿಭಾ ಹೇಮಂತ್ ಶಿಂಧೆ, ಮಲಾಡ್ ಕನ್ನಡ ಸಂಘದ ಅಧ್ಯಕ್ಷರಾದ ನ್ಯಾ. ಜಗದೀಶ್ ಹೆಗ್ಡೆ, ವೆಸ್ಟೆರ್ನ್ ಇಂಡಿಯಾ ಶನಿಮಹಾತ್ಮ ಸೇವಾ ಸಮಿತಿ ಮುಂಬಯಿ ಅಧ್ಯಕ್ಷರಾದ ರವಿ ಎಲ್ ಬಂಗೇರ, ಕರ್ನಾಟಕ ಕ್ವಾರಿ ಅಂಡ್ ಕರ್ಸರ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಬಂಟ್ಸ್ ಫಾರಂ ಮೀರಾ-ಭಾಯಂಧರ್ ನಿರ್ದೇಶಕರಾದ ಜಯಪ್ರಕಾಶ್ ಆರ್ ಬಂಡಾರಿ ಮತ್ತು ಸಮಾಜ ಸೇವಕ, ಉದ್ಯಮಿ ನಂದಕುಮಾರ್ . ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ರಮೇಶ್ ಆಚಾರ್ಯ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಗೌ. ಕೋಶಾಧಿಕಾರಿ ಹರೀಶ್ ಜೆ. ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್, ಪಾಲ್ಗೊಂಡಿದ್ದರು,
ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಪೇತ್ರಿ ವಂದನಾರ್ಪಣೆ ಮಾಡಿದರು. ದಿನೇಶ್ ರಾಯಿ ಮತ್ತು ಜೀವಿಕಾ ವಿ ಶೆಟ್ಟಿ ಯವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರ,
——
ಧರ್ಮದ ಚಿಂತನೆ ಇಲ್ಲದಿದ್ದಲ್ಲಿ ಜೀವನದಲ್ಲಿ ಸಫಲತೆ ಅಸಾಧ್ಯ.: ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್
ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿಯ ಸ್ಥಾಪಕ ಟ್ರಷ್ಟಿ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಮಾತನಾಡುತ್ತಾ ಒಂದು ಸಂಸ್ಥೆಗೆ 50 ವರ್ಷಪ್ರಾಯ ವಾಗುವುದೆಂದರೆ ಅದು ಮನುಷ್ಯನಿಗೆ ಅದೆಷ್ಟೋ ಸಾವಿರ, ಲಕ್ಷ ವರ್ಷ ಆದಂತೆ. ಸಾಫಲ್ಯರಂತಹ ಚಿಂತನಾತ್ಮಕವಾದ ಕ್ರಿಯಾಶೀಲ ವ್ಯಕ್ತಿಗಳಿಂದ ವೈಭವೀಕೃತ ಸುವರ್ಣ ಮಹೋತ್ಸವವನ್ನು ಇಲ್ಲಿ ಆಚರಿಸುವುದೇ ಒಂದು ಸಾಧನೆ. ನಮ್ಮ ಜೀವನ ಸಫಲವಾಗಬೇಕು ಎಂಬ ಚಿಂತನೆ ಇರಬೇಕು. ಧರ್ಮದ ಚಿಂತನೆ ಇಲ್ಲದಿದ್ದಲ್ಲಿ ಜೀವನದಲ್ಲಿ ಸಫಲತೆ ಅಸಾಧ್ಯ. ಮಾಡುತ್ತಾ ಕಷ್ಟ ಕೊಟ್ಟರೂ ನಿರ್ಮೂಲನೆ ಮಾಡುವ ಕಾರ್ಯ ಶನಿ ದೇವರದ್ದು. ಜೀವನದಲ್ಲಿ 50 ವರ್ಷ ಆಗೋದು ಮುಖ್ಯ ಅಲ್ಲ. ಜೀವನದಲ್ಲಿ ಸಾಧನೆಯೊಂದಿಗೆ ಸಫಲವಾಗುವುದು ಅತೀ ಮುಖ್ಯ. ಧಾರ್ಮಿಕ ಚಿಂತನೆಯೊಂದಿಗೆ ನಮ್ಮ ದೇಶ ವಿಶ್ವ ಗುರು ಆಗಲಿ ಎಂದರು.
——–
्ಶ್ರೀ.ಕ್ಷೇತ್ರದಲ್ಲಿ ಸನಾತನ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯುತ್ತಿರುವುದು ಅಭಿನಂದನೀಯ : ಸಿ ಎ ಸುರೇಂದ್ರ ಕೆ. ಶೆಟ್ಟಿ
ಅತಿಥಿಯಾಗಿ ಆಗಮಿಸಿದ ಬೊಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸಿ ಎ ಸುರೇಂದ್ರ ಕೆ. ಶೆಟ್ಟಿ ಯವರು ಮಾತನಾಡುತ್ತಸ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಮೂಲಕ ಕಳೆದ ೫೦ ವರ್ಷಗಳಿಂದ ಸನಾತನ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯುತ್ತಿರುವುದು ಅಭಿನಂದನೀಯ. ಇಂದಿನ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನಡೆಸುತ್ತಿರುವ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಿರುವೆನು. ಎಲ್ಲರಿಗೂ ಶನೀಶ್ವರ ದೇವರ ಆಶೀರ್ವಾದವಿರಲಿ ಎಂದರು.