
ಮುಂಬಯಿ : ಮೋಯಾ ಸಮುದಾಯದ ಹಿರಿಯ ಸಂಘಟನೆ ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ (ವೈ.ಎಂ.ಬಿ.ಎ.) ಮುಂಬಯಿ ಯ ವತಿಯಿಂದ ಬದ್ಲಾಪುರದಲ್ಲಿರುವ ಸಮಾಜದ ವಿಶಾಲವಾದ ನಿವೇಷಣ ’ಮೋಯಾ ನಗರಿ’ಯಲ್ಲಿ ಗಣ-ಹೋಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಯು ಮೇ ೨೬ ರಂದು ನಡೆಯಿತು.
ವೈ.ಎಂ.ಬಿ.ಎ. ಹಳೆಯ ಕಾಟೇಜ್ ನ ನಾಗ ದೇವಸ್ಥಾನ ಮತ್ತು ಶಿವ ಮಂದಿರದಲ್ಲಿ ಮೇ 26 ರಂದು ಬೆಳಿಗ್ಗೆ 7 ರಿಂದ 8 ರವರೆಗೆ ಪೂಜೆ ಬಳಿಕ ಡೊಂಬಿವಿಲಿಯ ರಘುಪತಿ ಭಟ್ ಮತ್ತು ಬಳಗದವರಿಂದ ಗಣಹೋಮ ನಡೆಯಿತು. ಅನಂತಚಂದ್ರ ಸಾಗರ್ ಮತ್ತು ಶ್ರೀಮತಿ ಸಂಧ್ಯಾ ಎ. ಸಾಗರ್ ಭಾಗವಹಿಸಿದ್ದರು. ಯಶವಂತ ಎ.ಕೆ. , ಶ್ರೀಮತಿ ಲಕ್ಷ್ಮಿ ವೈ.ಕೆ. ಮತ್ತಿತರರ ಉಪಸ್ಥಿತಿಯೊಂದಿಗೆ ಬೆಳಿಗ್ಗೆ 11ರಿಂದ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ ಆರಂಭಗೊಂಡು ಮಧ್ಯಾಹ್ನ 1 ಗಂಟೆಗೆ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಮತ್ತು ಅನ್ನ ಪ್ರಸಾದದೊಂದಿಗೆ ಧಾರ್ಮಿಕ ಕಾರ್ಯಕ್ರಮ ಮುಕ್ತಾಯವಾಯಿತು.
ಉಪಸ್ಥಿತರಿದ್ದ ಎಲ್ಲಾ ಸದಸದಸ್ಯರು ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ ಸದಸ್ಯರುಗಳ ಒಗ್ಗಟ್ಟಿನೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಪ್ರಾರ್ಥಿಸಿದರು. ಮೇ ೨೫ ರಂದು ವೈ.ಎಂ.ಬಿ.ಎ. ಯ ಕ್ರೀಯಾಶೀಲ ಸದಸ್ಯರುಗಳಾದ ಆನಂದ್ ಸಿ. ಐಲ್, ಚಂದ್ರಶೇಖರ್ ಜಿ. ಐಲ್, ಸಂದೀಪ್ ಬಿ. ಐಲ್, ಭಾಸ್ಕರ್ ಕೆ. ಉಚ್ಚಿಲ್ ಮತ್ತು ತಾರಾನಾಥ್ ಎ. ಉಚ್ಚಿಲ್ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸಹಕರಿಸಿದರು. ಅಂದು ಸಂಜೆ 7ರಿಂದ 10ರವರೆಗೆ ಅಲ್ಲಿ ಭಜನೆಯನ್ನೂ ಮಾಡಿರುವರು.
ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಪದಾಧಿಕಾರಿಗಳು ಯುವ ಪೀಳಿಗೆಯೊಂದಿಗೆ ಮುಂದಿನ ಯೋಜನೆ ಕುರಿತು ಸಂವಾದ ನಡೆಸಿದ್ದು ರಚಿತ್ ಎಸ್. ಐಲ್, ವೀಕ್ಷಿತ್ ವಿ. ಉದ್ಯಾವರ, ಜಶಿತ್ ಉದ್ಯಾವರ್, ಪ್ರೀತ್ ಯು. ಐಲ್, ನಮನ್ ಕೆ. ಉದ್ಯಾವರ್, ಏಕಾಂಶ ಅಡ್ಕ, ಕು. ಸಾಕ್ಷಿ ಉದ್ಯಾವರ್ , ಕು. ಪ್ರಾಚಿ ಉದ್ಯಾವರ್, ಹಿರಿಯ ಸದಸ್ಯರಾದ ದೇವೇಂದ್ರ ಜಿ. ಅಯೂರ್, ತಾರಾನಾಥ್ ಎ. ಉಚ್ಚಿಲ್, ದಿನಕರ್ ಟಿ. ಉಚ್ಚಿಲ್ ಮೊದಲಾದವರು ಸೂಕ್ತ ಸಲಹೆ ಸೂಚನೆಗಳನ್ನಿತ್ತರು. ಶ್ರೀಮತಿ ಯಶೋದಾ ಬಟ್ಟಪ್ಪಾಡಿ, ರವಿ ವಿಠಲ್ , ಕೃಪಾಕರ ಕುಂಬ್ಳೆ, ಚಂದ್ರ ವಾಮಂಜೂರ್, ಶೈಲೇಶ್ ಉದ್ಯಾವರ್, ಕೋಶಾಧಿಕಾರಿಗಳಾದ ಸುಭಾಷ್ ಚಂದ್ರ ಉಚ್ಚಿಲ್ , ಸುರೇಶ್ ವಾಮಂಜೂರು ಮೊದಲಾದವರು ಇತರರೊಡನೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಎಸ್ ಉದ್ಯಾವರ ಧನ್ಯವಾದ ಸಮರ್ಪಿಸಿದರು.