
ಉಡುಪಿಯ ಶಾಲಾ ಬಸ್ ಚಾಲಕನಿಗೆ ಹೃದಯಾಘಾತ, ಸಮಯ ಪ್ರಜ್ಞೆ ಮೆರೆದ ಚಾಲಕ.
ಉಡುಪಿ : ಇಂದು ಸಂಜೆ (ಜೂ. 5) ಬ್ರಹ್ಮಾವರದಿಂದ ಮಣಿಪಾಲ ಕಡೆ ಬರುತ್ತಿದ್ದ ಶಾಲಾ ಬಸ್ ಚಾಲಕನಿಗೆ ಲಘು ಹೃದಯಘಾತವಾದ ಘಟನೆ ನಡೆದಿದ್ದು, ಚಾಲಕನು ತಕ್ಷಣ ಬಸ್ ಎಡಬದಿಗೆ ತಿರುಗಿಸಿ ನಿಲ್ಲಿಸಿದ್ದರಿಂದ ಮಕ್ಕಳು ಸುರಕ್ಷಿತವಾಗಿ ಬಸ್ಸಿನಿಂದ ಇಳಿಯುವಂತಾಗಿದೆ.
ಬ್ರಹ್ಮಾವರದಿಂದ ಮಣಿಪಾಲ ಕಡೆ ಬರುತ್ತಿದ್ದ ಬಸ್ ಬ್ರಹ್ಮಾವರದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ್ದು, ಬಸ್ಸಿನಲ್ಲಿ ಒಟ್ಟು 65 ಮಕ್ಕಳು ಪ್ರಯಾಣಿಸುತ್ತಿದ್ದರು.ಬಸ್ ಪೆರಂಪಳ್ಳಿಯಾಗಿ ಮಂಚಿಯತ್ತ ಸಾಗುತ್ತಿದ್ದಾಗ, ಬಸ್ ಚಾಲಕ ಅಲ್ವಿನ್ ಡಿಸೋಜ (52) ಅವರಿಗೆ ಲಘು ಹೃದಯಾಘಾತವಾಯಿತು, ಕೂಡಲೇ ಅಲ್ವಿನ್ ಅವರು ಬಸ್ ಎಡಬದಿಗೆ ತಿರುಗಿಸಿ ನಿಲ್ಲಿಸಿದ್ದರಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.