30 C
Mumbai
September 27, 2026
Mumbai News Kannada
ಸುದ್ದಿ

ಸಮಾಜ ಸೇವಕಿ ದಿ. ಸುಮಿತ್ರಾ ರಾಜು ಸಾಲ್ಯಾನ್ ಅವರ ಜನ್ಮದಿನ.ವೃದ್ಧಾಶ್ರಮದಲ್ಲಿ ಆಚರಣೆ.



    ಮುಂಬಯಿ ಜೂ 5.   ಮುಂಬೈಯ ಕುಲಾಲ ಸಮಾಜದ ಮಹಾದಾನಿ. ಆಶಕ್ತರ ಕಣ್ಣೀರು ಒರೆಸುವ ಕರುಣಾಳು  ಸುನಿಲ್ ರಾಜು   ಸಾಲಿಯಾನ್  ಅವರು  ತಮ್ಮ ಮಾತೃಶ್ರೀ ಸಮಾಜ ಸೇವಕಿ ದಿ. ಸುಮಿತ್ರಾ ರಾಜು ಸಾಲ್ಯಾನ್ ಅವರ  ಜನ್ಮದಿನ ಜೂನ್ 4ರಂದು ಮುಂಬೈಯ ಗೋರೆ ಗಾಂವ್ ಪೂರ್ವದ ಸಾಯಿಬಾಬಾ ನಗರದ   ಸೇಂಟ್ಸ್ ಜೋಸೆಫ್ ಕಾನ್ವೆಂಟ್ ಮತ್ತು ಅಸ್ಸಿಸ್ಸಿ  ವೃದ್ಧಾಶ್ರಮದಲ್ಲಿ  ಸುಮಾರು  50ಕ್ಕೂಮ್ಮಿಕ್ಕಿ ವೃದ್ಧ ಮಹಿಳೆಯವರು ಉಪಸ್ಥಿತಿಯಲ್ಲಿ  ಸುಮಿತ್ರಾ ಸಾಲ್ಯಾನ್ ಅವರು  ನೆನಪಿಗಾಗಿ ಕೇಕ್ ಅನ್ನು ಕತ್ತರಿಸಿ  ಮಧ್ಯಾಹ್ನದ ಪ್ರೀತಿ ಭೋಜನವನ್ನು ನೀಡಿ ಸಂಭ್ರಮವನ್ನು ಆಚರಿಸಿಕೊಂಡರು .

ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಸಾಲಿಯಾನ್.  ನವರು ತಾಯಿ ಪ್ರತಿಯೊಬ್ಬನ ಬದುಕಿನಲ್ಲೂ ಶ್ರೇಷ್ಠತೆಯನ್ನು ಪಡೆದವಳು, ಅವಳ ಋಣಸಂದಾಯ ನಮ್ಮ ಜನುಮದಲ್ಲಿ ಸಾಧ್ಯವಿಲ್ಲ ಆದರೆ ಅವರ ನೆನಪುಗಳು ನಮ್ಮಿಂದ ಸದಾ ನಡೆಯಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿವರ್ಷ ನನ್ನ ಅಮ್ಮ ನಮ್ಮನ್ನು ಅಗಲಿದರು ಅವರು ಜನುಮದಿನದ ನೆನಪುಗಳು ಸಾಧ್ಯವಾದಷ್ಟು ನಡೆಸುತ್ತಾ ಬಂದಿದ್ದೇನೆ. ಅಮ್ಮನ ಸಮಾನ ಮನಸ್ಸಿನ ಹಿರಿಯರೊಂದಿಗೆ ಜನ್ಮದಿನವನ್ನು ಆಚರಿಸುವುದು ನನಗೆ ಸಂತೋಷವನ್ನು ನೀಡಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಸುನಿಲ್ ಸಾಲಿಯಾನ್ ಮತ್ತು ಅವರ ಧರ್ಮಪತ್ನಿ ದೇವಕಿ ಸಾಲ್ಯಾನ್ ಹಾಗೂ ಕುಲಾಲ ಸಮಾಜದ ಬಂಧುಗಳು.ಹಾಗೂ ಮುಂಬಯಿ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್. ಮಾಜಿ ಅಧ್ಯಕ್ಷರು ಗಿರೀಶ್ ಬಿ.  ಸಾಲ್ಯಾನ್ . ಗೌರವ ಕೋಶಧಿಕಾರಿ ಜಯ ಅಂಚನ್. ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಉಮೇಶ್ ಬಂಗೇರ. ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಮಾಲತಿ ಜೆ. ಅಂಚನ್. ಮತ್ತು ಮಮತಾ ಗಿರೀಶ್ ಸಾಲಿಯಾನ.

ಸಂಘದ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಕಾರ್ಯ ಧ್ಯಕ್ಷ ಆನಂದ ಕುಲಾಲ್. ಉಪ ಕಾರ್ಯಧ್ಯಕ್ಷ ಅರುಣ್ ಬಂಗೇರ. ಕಾರ್ಯದರ್ಶಿ ಸತೀಶ್ ಬಂಗೇರ . ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾಲತಾ ಮೂಲ್ಯ.

ಕಾರ್ಯದರ್ಶಿ ಆರತಿ ಸಾಲಿಯಾನ್. ಜೊತೆ ಕಾರ್ಯದರ್ಶಿ ಪ್ರಮೀಳಾ ಬಂಗೇರ ಮತ್ತಿತರ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು



Related posts

ಸರ್ ಜೆ ಜೆ ಆಸ್ಪತ್ರೆಯಲ್ಲಿ ನೂತನ ಅತ್ಯಾಧುನಿಕ ಹೆರಿಗೆ ವಾರ್ಡ್ ಲೋಕಾರ್ಪಣೆ

Mumbai News Desk

ನವಿ ಮುಂಬೈ – ಪ್ರಮುಖ ಪೈಪ್ ಲೈನ್ ಕಾಮಗಾರಿಗಾಗಿ ಜುಲೈ 18 – 19ರಂದು 18 ಗಂಟೆಗಳ ಕಾಲ ನೀರು ಸರಬರಾಜು ಕಡಿತ

Mumbai News Desk

ಯುವ ಭಾರತದ ಮೇಲೆ ದೇಶಕ್ಕೆ ಅಪಾರ ನಂಬಿಕೆ: ಐಐಟಿ ದೆಹಲಿ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪೂರ್ತಿದಾಯಕ ನುಡಿ

Mumbai News Desk

ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕಾರ್ಕಳದ ಪ್ರತಿಭೆ ಸಿಂಚನ್ ಎ. ಪೂಜಾರಿ ಆಯ್ಕೆ: ಕರ್ನಾಟಕಕ್ಕೆ ಹೆಮ್ಮೆಯ ಗೌರವ

Mumbai News Desk

ಪರೀಕ್ಷಾ ಅಕ್ರಮ ತಡೆಗೆ ಕೇಂದ್ರದಿಂದ ಕಠಿಣ ಕಾನೂನು: ಪ್ರಧಾನಿ ಮೋದಿ ಅಭಯ

Mumbai News Desk

ಮಾತೃಭೂಮಿ  ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ. ಯಿಂದ ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರಿಗೆ ಅಭಿನಂದನೆ.

Mumbai News Desk