32 C
Mumbai
March 7, 2026
Mumbai News Kannada
ಸುದ್ದಿ

ನಾವುಂದ ಮೂರ್ತೆದಾರರ ಸೊಸೈಟಿಯಿಂದ 9 ಲಕ್ಷ ರೂ. ಠೇವಣಿ ಹಣ ವಂಚನೆ : 16 ಮಂದಿಯ ವಿರುದ್ದ ಪ್ರಕರಣ ದಾಖಲು





ಉಡುಪಿ ಜಿಲ್ಲೆಯ ನಾವುಂದ ಮೂರ್ತೆದಾರರ ಸೊಸೈಟಿಯ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯ ಸಲಹೆಯ ಮೇರೆಗೆ 9 ಲಕ್ಷ ರೂಪಾಯಿಯನ್ನು ಆರುವರೆ ವರ್ಷ ಅವಧಿಗೆ ಡೆಪಾಸಿಟ್‌ ಇಟ್ಟರೆ ಅವಧಿ ಮುಗಿದ ಬಳಿಕ 18 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು. ಅದರಂತೆಯೇ ಉಮೇಶ್‌ ಅವರು 2021 ರ ಜುಲೈ 29 ರಂದು ಸೊಸೈಟಿಯಲ್ಲಿ 9 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿದ್ದರು.
ಠೇವಣಿ ಇರಿಸಿದ್ರೆ 6 ವರ್ಷಗಳಲ್ಲೇ ಹಣವನ್ನು ಡಬ್ಬಲ್‌ ಮಾಡಿಕೊಡುವುದಾಗಿ ಭರವಸೆ ನೀಡಿ 9 ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್‌ ಇರಿಸಿಕೊಂಡು, ನಂತರ ಹಣ ವಾಪಾಸ್‌ ನೀಡದೇ ವಂಚಿಸಿರುವ ಕುರಿತು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಮೂರ್ತೆದಾರರ ಸೊಸೈಟಿ (Navunda Murthedarara Seva Sahakari Sangha ) ಯ ವಿರುದ್ದ ಆರೋಪ ಕೇಳಿಬಂದಿದ್ದು, ಸೊಸೈಟಿ ಸೇರಿದಂತೆ ಒಟ್ಟು 16 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಕುಂದಾಪುರ : ಠೇವಣಿ ಇರಿಸಿದ್ರೆ 6 ವರ್ಷಗಳಲ್ಲೇ ಹಣವನ್ನು ಡಬ್ಬಲ್‌ ಮಾಡಿಕೊಡುವುದಾಗಿ ಭರವಸೆ ನೀಡಿ 9 ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್‌ ಇರಿಸಿಕೊಂಡು, ನಂತರ ಹಣ ವಾಪಾಸ್‌ ನೀಡದೇ ವಂಚಿಸಿರುವ ಕುರಿತು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ನಿವಾಸಿಯಾಗಿರುವ ಉಮೇಶ್‌ ಎಂಬವರು ನಾವುಂದ ಮೂರ್ತೆದಾರರ ಸೊಸೈಟಿಯ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯ ಸಲಹೆಯ ಮೇರೆಗೆ 9 ಲಕ್ಷ ರೂಪಾಯಿಯನ್ನು ಆರುವರೆ ವರ್ಷ ಅವಧಿಗೆ ಡೆಪಾಸಿಟ್‌ ಇಟ್ಟರೆ ಅವಧಿ ಮುಗಿದ ಬಳಿಕ 18 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು. ಅದರಂತೆಯೇ ಉಮೇಶ್‌ ಅವರು 2021 ರ ಜುಲೈ 29 ರಂದು ಸೊಸೈಟಿಯಲ್ಲಿ 9 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿದ್ದರು.

ನಾವುಂದ ಮೂರ್ತೆದಾರರ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿಗಳು ಕಲ್ಪವೃಕ್ಷ ಬಾಂಡ್‌ ಸಿ ನಂಬರ್‌ ಇರುವ ದಾಖಲೆಯನ್ನು ನೀಡಿದ್ದರು. ಆದರೆ ಉಮೇಶ್‌ ಅವರಿಗೆ ಹಣದ ಸಮಸ್ಯೆ ಉಂಟಾದಾಗ ಸೊಸೈಟಿಗೆ ತೆರಳಿ ನಾವು ಡೆಪಾಸಿಟ್‌ ಇರಿಸಿದ್ದ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಆದರೆ ಈ ವೇಳೆಯಲ್ಲಿ ಸೊಸೈಟಿಯವರು ಹಣ ನೀಡಲು ನಿರಾಕರಿಸಿದ್ದಾರೆ. ಸೊಸೈಟಯಲ್ಲಿ ನೀವು 9 ಲಕ್ಷ ರೂಪಾಯಿ ಹಣವನ್ನು ನೀವು ಜಮೆ ಮಾಡಿಲ್ಲ. ಸಿಸಿ ಬಾಂಡ್‌ಗೂ ಸೊಸೈಟಿಗೂ ಯಾವುದೇ ಸಂಬಂಧವಿಲ್ಲ, ನಿಮ್ಮ ಹಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಹಿಂಬರಹವನ್ನು ನೀಡಿದ್ದರು.

ಮೂರ್ತೆದಾರರ ಸೊಸೈಟಿಯಿಂದ ತನಗೆ ಅನ್ಯಾಯ ಆಗಿರುವ ಕುರಿತು ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯ ಪೊಲೀಸರು ನಾವುಂದ ಮೂರ್ತೆದಾರರ ಸೊಸೈಟಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ನೀಲಾಧರ ಪೂಜಾರಿ ನಾವುಂದ, ದಿನೇಶ ಪೂಜಾರಿ ಕೊಡೇರಿ , ಮೂರ್ತೆದಾರರ ಸೊಸೈಟಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಪ್ರತಿನಿಧಿ ವಿರುದ್ದ ಪ್ರಕರಣ ದಾಖಲಾಗಿದೆ.
ಮಾತ್ರವಲ್ಲದೇ ಅಧ್ಯಕ್ಷ ವಿಜಯ ಪೂಜಾರಿ ತ್ರಾಸಿ, ಉಪಾಧ್ಯಕ್ಷ ವಿಜಯ ಕುಮಾರ್ ಕೊಡೇರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಂಕರ ಪೂಜಾರಿ , ಗುಮಾಸ್ತೆ ದೀಪಾ ಪೂಜಾರಿ , ನಿರ್ದೇಶಕರುಗಳಾದ ಅಣ್ಣಪ್ಪ ಪೂಜಾರಿ ಮರವಂತೆ, ನಾರಾಯಣ ಪೂಜಾರಿ ನಾವುಂದ , ಬಾಬು ಪೂಜಾರಿ ನಾವುಂದ , ನಾರಾಯಣ ಪೂಜಾರಿ ಆಳೊಳ್ಳಿ, ಕೊಡೇರಿ , ವೆಂಕಟೇಶ ಪೂಜಾರಿ ಕೊಡೇರಿ, ಆನಂದ ಪೂಜಾರಿ ನಾವುಂದ, ಕೃಷ್ಣ ಪೂಜಾರಿ ನಾಗೂರು, ಪದ್ದು ಪೂಜಾರಿ ತ್ರಾಸಿ ಹಾಗೂ ಕವಿತಾ ಪೂಜಾರಿ ತ್ರಾಸಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ದೂರುದಾರರಿಂದ ಹಣವನ್ನು ಠೇವಣಿ ಇರಿಸಿಕೊಂಡು ಹಣವನ್ನು ಹಿಂದಿರುಗಿಸದೆ ನಂಬಿಸಿ ಮೋಸ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ



Related posts

ಬಜೆ ಮೊಗವೀರ ಸುವರ್ಣ ಆದಿ ಮೂಲಸ್ಥಾನ, ಮುಂಬಾಯಿ ಶಾಖೆಯ 100ನೇ ಮಹಾಸಭೆ

Mumbai News Desk

ಮುಲ್ಕಿ: ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಜನಾಕರ್ಷಣೆ ಪಡೆಯುತ್ತಿರುವ ಪುಂಗನೂರು ತಳಿಯ ಹಸು

Mumbai News Desk

ನಿಟ್ಟೆ ವಿಶ್ವವಿದ್ಯಾಲಯದ   ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂಲ್ಕಿ ಜೀವನ್ ಕೆ. ಶೆಟ್ಟಿ  ಆಯ್ಕೆ

Mumbai News Desk

ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳ್ಳಲು ಸಿದ್ಧತೆ; ಮಹಾರಾಷ್ಟ್ರ ಸರಕಾರದಿಂದ ಷರತ್ತುಗಳೊಂದಿಗೆ ಹಸಿರು ನಿಶಾನೆ.

Mumbai News Desk

ಬೆಂಗಳೂರಲ್ಲಿ ಮುಂಬಯಿಯ ನಿಶಿತ ಸೂರ್ಯಕಾಂತ್ ಸುವರ್ಣರ ಇಮೇಜ್ ಕನ್ಸಲ್ಟೆಂಟ್ ನ ಅದ್ದೂರಿಯ ಕರ್ನಾಟಕ ಸ್ಟೈಲ್ ಐಕಾನ್ 2023 ಕಾರ್ಯಕ್ರಮ

Mumbai News Desk

ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ : 12 ಕೋಟಿ ರೂ.ಮೌಲ್ಯದ ಚಿನ್ನ, ನಗದು ಲೂಟಿ

Mumbai News Desk