
ಕಾಂತಾವರ: ಯಕ್ಷದೇಗುಲ ಕಾಂತಾವರದ ವಾರ್ಷಿಕ ಆಟ ಕೂಟ ಬಯಲಾಟ ಸಹಿತ 22 ನೇ ಯಕ್ಷೋಲ್ಲಾಸ ಕಾರ್ಯಕ್ರಮವು ಜುಲೈ 21 ನೇ ಭಾನುವಾರದಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಲಿದ್ದು ಆ ದಿನ ಯಕ್ಷ ರಂಗದ ಸಿಡಿಲ ಮರಿ ಖ್ಯಾತಿ ವೆತ್ತ ಪುತ್ತೂರು ದಿ. ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿಯನ್ನು ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ ರವರಿಗೆ ಹಾಗೂ ಸವ್ಯ ಸಾಚಿ ಕಲಾವಿದ ಬಾಯಾರು ದಿ. ಪ್ರಾಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ ಯನ್ನು ಸುರತ್ಕಲ್ ಮೇಳದ ನಿವೃತ್ತ ಕಲಾವಿದ ಪುತ್ತಿಗೆ ಕುಮಾರ ಗೌಡರವರಿಗೆ ನೀಡಲು ಸಂಸ್ಥೆಯ ಆಯ್ಕೆ ಸಮಿತಿ ತೀರ್ಮಾನಿಸಿದ್ದು , ನಗದು ಪುರಸ್ಕಾರ ಪ್ರಶಸ್ತಿ ಪ್ರಧಾನ ಒಳಗೊಂಡಿದೆ ಎಂದು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಮಹಾವೀರ ಪಾಂದಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
.
.