
——-
ಯಕ್ಷಗಾನ ಲೋಕಕ್ಕೆ ಕಳೆದ ವರ್ಷ ಪಾದಾರ್ಪಣೆಗೊಂಡ, ಯಶಸ್ವಿ ಜಯಭೇರಿ ತಿರುಗಾಟವನ್ನು ನಡೆಸಿದ ಶ್ರೀ ಮಕ್ಕೆಕಟ್ಟು ಮೇಳ ನಂದಿಕೇಶ್ವರನ ಸಂಪೂರ್ಣ ಅನುಗ್ರಹದಿಂದ ಈ ವರ್ಷವೂ ಸಹ ಅತ್ಯಂತ ದಿಗ್ಗಜರ ಕೂಡುವಿಕೆಯಿಂದ ಸಂಪತ್ ಭರಿತವಾಗಿ ಹೊರಹೊಮ್ಮಲಿದೆ.
ಮಳೆಗಾಲದ ತಿರುಗಾಟವನ್ನು ಸಹ ಸಂಸ್ಥೆಯಾದ ಶ್ರೀ ಹಟ್ಟಿಯಂಗಡಿ ಮೇಳದ ಜೊತೆ ಹಮ್ಮಿಕೊಂಡಿದ್ದು ಮೇಳದ ಅಭಿವೃದ್ಧಿಯ ದೃಷ್ಟಿಯಿಂದ ಮುಂಬೈ ಮಹಾನಗರದಲ್ಲಿ ಬೇರೆ ಬೇರೆ ಭಾಗಗಳಲ್ಲಿ ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನವನ್ನು ಜುಲೈ 9 ರಿಂದ 20 ರವರೆಗೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು.
ಉಳಿದ ಕೆಲವೇ ದಿನಗಳು ಬಾಕಿ ಇದ್ದು ಪ್ರದರ್ಶನಗಳು ಬೇಕಾಗಿದ್ದಲ್ಲಿ ಸಂಪರ್ಕಿಸಿ ಮೇಳವನ್ನು ಹರಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಜೊತೆಗೆ ಎರಡನೇ ವರ್ಷದ ತಿರುಗಾಟಕ್ಕೆ ಸಜ್ಜುಗೊಳ್ಳುತ್ತಿರುವ ಮೇಳಕ್ಕೆ ಮತ್ತು ಪ್ರದರ್ಶನಕ್ಕೆಆರ್ಥಿಕವಾಗಿ ನಮ್ಮ ಜೊತೆ ಕೈಜೋಡಿಸುವರೆ ಈ ಮೂಲಕ ವಿಜ್ಞಾಪಿಸಿಕೊಳ್ಳುತ್ತಿದ್ದೇವೆ.
ತಮ್ಮ ಸಹಕಾರದ ನಿರೀಕ್ಷೆಯಲ್ಲಿ
ರಂಜಿತ್ ಶೆಟ್ಟಿ (ಮೇಳದ ಯಜಮಾನ ) 9141930593
ಜುಲೈ 9 ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವಳದ ಧರ್ಮದರ್ಶಿಗಳಾದ ಅಣ್ಣಿ ಸಿ ಶೆಟ್ಟಿ ಅವರ ಪ್ರಥಮ ವರ್ಷದ ತಿರುಗಾಟದ ವಿದ್ಯುಕ್ತವಾದ ಉದ್ಘಾಟನೆಗೊಳ್ಳಲಿಕ್ಕಿದೆ. ಅಂದು ರಾತ್ರಿ ಆರು ಗಂಟೆಯಿಂದ ಮುಂಬೈ ಮಹಾನಗರದ ಮಹಾಪೋಷಕರ ನೆರವಿನಿಂದ ಯಕ್ಷಗಾನ ಪ್ರದರ್ಶನ ನಡೆಯಲಿಕ್ಕಿದೆ.
ಜುಲೈ 10 ರಂದು ಘಂನ್ಸೋಲಿ ಮೂಕಾಂಬಿಕ ಮಂದಿರದಲ್ಲೇ ಎಣ್ಣೆ ಹೊಳೆ ಜಯರಾಮ್ ಶೆಟ್ಟಿ ಮತ್ತು ಕುಟುಂಬಸ್ಥರ ಸೇವಾ ರೂಪವಾಗಿ ಸಂಜೆ 6 ಗಂಟೆಗೆ ಸರಿಯಾಗಿ ಕವಿರತ್ನ ಕಾಳಿದಾಸ ಎನ್ನುವ ಆಖ್ಯಾನ ಪ್ರದರ್ಶನಗೊಳ್ಳಲಿದ್ದು, ಜುಲೈ 12ರಂದು ಅಂದೇರಿಯ ಮೊಗವೀರ ಭವನದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಆಶ್ರಯದಲ್ಲಿ ಚಂದ್ರಾವಳಿ ವಿಳಾಸ ಮತ್ತು ಗದಾಯುದ್ಧ,
ಜುಲೈ 16ರಂದು ವಾಪಿಯಲ್ಲಿ, 17ರಂದು ಬೆಳಿಗ್ಗೆ ಕಲ್ಯಾಣ್ ಮಧ್ಯಾಹ್ನ ಐರೋಲಿ ಹೆಗಡೆ ಭವನದಲ್ಲಿ, 18 ಮತ್ತು 19 ನೇ ತಾರೀಖಿನಂದು ಠಾಣೆ ನವೋದಯ ಸ್ಕೂಲಿನ ಸಭಗ್ರಹದಲ್ಲಿ ಎರಡು ದಿನದ ನವೋದಯ ಯಕ್ಷೋತ್ಸವ ಕಾರ್ಯಕ್ರಮ, 20ನೇ ತಾರೀಖಿನಂದು ಪನ್ವೇಲ್ ನಲ್ಲಿ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ನಮ್ಮೀ ತಿರುಗಾಟದಲ್ಲಿ ಯಕ್ಷರಂಗದ ಡೈನಮಿಕ್ ಸ್ಟಾರ್ ವಿದ್ಯಾಧರ ಜಲ್ವಳ್ಳಿ, ನೇಲ್ಕೊಡು ಶಂಕರ ಹೆಗಡೆ, ರಮೇಶ್ ಭಂಡಾರಿ ಮೂರೂರು, ರಾಜೇಶ್ ಬಂಡಾರಿ ಗುಣವಂತೆ, ನರಸಿಂಹ ಗಾವ್ಕರ್, ಜಯರಾಮ್ ಕೊಟಾರಿ ಕಮಲಿ ಶಿಲೆ, ಶ್ರೀಕಾಂತ ರಟ್ಟಾಡಿ, ದ್ವಿತೇಶ್ ಕಾಮತ್ ಹಿರಿಯಡ್ಕ, ಅಜಿತ್ ಶೆಟ್ಟಿ, ಮುಂತಾದ ಕಲಾವಿದರು ಭಾಗವಹಿಸಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ಆರ್ ಡಿ ಸಂತೋಷ್ ಕುಮಾರ್,ಸುಧೀರ್ ಭಟ್ ಪೆರಡೂರು ಮದ್ದಲೆದಾರರಾಗಿ ಸುಬ್ರಹ್ಮಣ್ಯ ಹೆಗಡೆ ಮೂರೂರು ಚಂಡೆ ವಾದಕರಾಗಿ ಪ್ರಶಾಂತ್ ಭಂಡಾರಿ ಭಾಗವಹಿಸಲಿದ್ದಾರೆ.