ಮುಂಬಯಿ ಜು 7 ಕಾಂದಿವಲಿ ಕನ್ನಡ ಸಂಘ ಅಧ್ಯಕ್ಷ ಪೂಲ್ಯ ಜಯಪಾಲ್ ಶೆಟ್ಟಿಯವರು ನೇತೃತ್ವದಲ್ಲಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ವಿನೋದ ಡಿ ಶೆಟ್ಟಿ ಅವರು ಸಂಯೋಜನೆಯಲ್ಲಿ ಜು 7 ನೇ ರವಿವಾರ ಮಧ್ಯಾಹ್ನ ಗಂ 3.30 ಕ್ಕೆ ಪೊಯಿಸರ್ ಜಿಮ್ಖಾನ ಸಭಾಗೃಹ, ಪೊಯಿಸರ್ ಜಿಮ್ಖಾನ ರಸ್ತೆ ,ಮಹಾವೀರ ನಗರ ಕಾಂದಿವಲಿ (ಪ) ಇಲ್ಲಿ ಸಂಘ ಮಹಿಳಾ ವಿಭಾಗದ ಸದಸ್ಯೆಯರಿಂದ, ಮುಂಬಯಿಯ ಯಕ್ಷಗುರು ಸದಾನಂದ ಶೆಟ್ಟಿ, ಕಟೀಲ್ ರವರ ನಿರ್ದೇಶನದಲ್ಲಿ . ಸುದರ್ಶನ ವಿಜಯ* (ತುಳು)ಯಕ್ಷಗಾನ ತಾಳಮದ್ದಳೆ ಜರಗಲಿರುವುದು,
ಮುುಂಬಯಿಯ ತಾಳಮದ್ದಳೆ ಪ್ರೇಮಿಗಳು, ಹಿತಚಿಂತಕರು ಹಾಗೂ ಸಂಘದ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಕಾಂದಿವಲಿ ಕನ್ನಡ ಸಂಘ ಗೌರವ ಅಧ್ಯಕ್ಷ ಪಳ್ಳಿ ಕಾವೇರಿ ಬೆಟ್ಟು ಜಯಕರ್ ಶೆಟ್ಟಿ , ಅಧ್ಯಕ್ಷರಾದಪೊಲ್ಯ ಜಯಪಾಲ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಪ್ರೇಮ್ ನಾಥ್ ಪಿ.ಕೋಟ್ಯಾನ್ ,ವಾರಿಜಾ ಎಸ್ ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಸಬಿತಾ ಜಿ ಪೂಜಾರಿ , ಗೌರವ ಕೋಶ ಧಿಕಾರಿಜಗನ್ನಾಥ್ ಡಿ ಕುಕ್ಯಾನ್ ಮತ್ತು ಮಹಿಳಾ ವಿಭಾಗದ ಪರವಾಗಿ ಶರ್ಮಿಳಾ ಎಸ್ ಶೆಟ್ಟಿ (ಉಪ ಕಾರ್ಯಾಧ್ಯಕ್ಷೆ)ಜಯಲಕ್ಷ್ಮಿ ಪಿ ಶೆಟ್ಟಿ (ಕಾರ್ಯದರ್ಶಿ) ಆಶಾ ಮೊಗವೀರ (ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ,