
ನಿಯಮಿತ ಆರೋಗ್ಯ ತಪಾಸಣೆಯೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಬಹುದು – ಸೂರ್ಯಕಾಂತ್ ಸುವರ್ಣ
ಮುಂಬಯಿ : ಇಂದು ಆರೋಗ್ಯ ಸಮಸ್ಯೆ ಎಲ್ಲರನ್ನು ಕಾಡುತ್ತಿದ್ದು, ಆಗಾಗ ಆರೋಗ್ಯ ತಪಾಸಣೆ ಮಾಡುವುದು ಒಳ್ಳೆಯದು. ಅದಕ್ಕಾಗಿ ಇಂತಹ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಎಂದು ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಹೇಳಿದರು.
ಜು. 14ರಂದು ಬಿಲ್ಲವರ ಎಸೋಸಿಯೇಷನ್ ಮುಂಬಯಿ ಗೋರೆಗಾಂವ್ ಸ್ಥಳೀಯ ಕಛೇರಿ, ಸತ್ಯ ಸಾಯಿ ಬಾಬಾ ಫೌಂಡೇಶನ್, ಲಾಡ್ಜ್ ಮದರ್ ಇಂಡಿಯಾ 110, ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಸಹಕಾರವಾಡಿ ಗೊರೆಗಾಂವ್ ಪೂರ್ವ ಇವರ ಸಂಯುಕ್ತ ಆಶ್ರಯದಲ್ಲಿ ನಿತ್ಯಾನಂದ ಆಶ್ರಮ ಸಹಕಾರವಾಡಿ ಗೊರೆಗಾಂವ್ ಪೂರ್ವ ಇಲ್ಲಿ ಆಯೋಜಿಸಲಾದ ಉಚಿತ ವೈದ್ಯಕೀಯ ಹಾಗೂ ಉಚಿತ ಕಣ್ಣು ತಪಾಸಣೆ ಶಿಬಿರವನ್ನು ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಅಧ್ಯಕ್ಷರ ರಘು ಆರ್. ಮೂಲ್ಯ ಅವರು ಶಿಭಿರವನ್ನು ಆಯೋಜಿಸಲು ಸಹಕರಿಸಿದ ಎಲ್ಲರಿಗೆ ಕೃತಜ್ನತೆ ಸಲ್ಲಿಸುತ್ತಾ ಶುಭ ಕೋರಿದರು.
ಶ್ರೀ ಸತ್ಯ ಸಾಯಿ ಫೌಂಡೇಶನ್ ನಿಂದ ಉಚಿತ ಕಣ್ಣಿನ ಪೊರೆ ಆಪರೇಷನ್ ನಡೆಸಲಾಗುವುದು.
ಬಿಲ್ಲವರ ಅಸೋಸಿಯೇಶನ್ ಸ್ಥಳೀಯ ಕಛೇರಿಯ ಕಾರ್ಯಾಧ್ಯಕ್ಷ ಸಚೀಂದ್ರ ಕೋಟ್ಯಾನ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಮ್ಮ ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ವಿವಿಧ ಸಮುದಾಯದ ಜನರು ಈ ಶಿಬಿರದ ಲಾಭವನ್ನು ಪಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ನ ಉಪಾಧ್ಯಕ್ಷ ಶಂಕರ್ ಡಿ ಪೂಜಾರಿ, ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲಿಯಾನ್ , ಜೊತೆ ಕಾರ್ಯದರ್ಶಿ ವಿಶ್ವನಾಥ ತೋನ್ಸೆ ಸ್ಥಳೀಯ ಕಛೇರಿಯ ಉಪಕಾರ್ಯಾಧ್ಯಕ್ಷ ರಮೇಶ್ ಸುವರ್ಣ, ಜೊತೆ ಕಾರ್ಯದರ್ಶಿ ಜನಾರ್ದನ್ ಕೋಟ್ಯಾನ್, ಕೋಶಾಧಿಕಾರಿ ಮೋಹನ್ ಅಮೀನ್ ಸದಸ್ಯರುಗಳಾದ ಮಧುಕರ ಕೋಟ್ಯಾನ್, ಯಶವಂತ ಪೂಜಾರಿ, ನವೀನ್ ಓ ಪೂಜಾರಿ, ಪುಷ್ಪಲತಾ ಅಮೀನ್, ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಜೆ.ಪೂಜಾರಿ ಉಪಸ್ಥಿತರಿದ್ದರು.

ಡಾ. ಸೋನಿತಾ ಕೋಟ್ಯಾನ್, ಡಾ ಅಪೇಕ್ಷಾ ಸುವರ್ಣ ಮತ್ತು ಇತರ ವೈದ್ಯರು ವೈದ್ಯಕೀಯ ತಪಾಸಣೆ ನಡೆಸಿದರು.
ಸುಚಲತಾ ಸಚಿನ್ ಪೂಜಾರಿ, ಉದಯ್ ಎನ್ ಪೂಜಾರಿ, ಐಶ್ವರ್ಯ ಎಸ್ ಪೂಜಾರಿ ಶ್ರೀನಿಧಿ ಪಿ. ಸಾಲಿಯಾನ್, ಶ್ರೇಯಾ ಕೆ ಪೂಜಾರಿ, ಅನೀಶ್ ಎಸ್ ಪೂಜಾರಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಗೌರವಾಧ್ಯಕ್ಷರಾದ ಮೋಹನ್ ಪೂಜಾರಿ, ಮುಖ್ಯ ಸಂಚಾಲಕ ಡಾಕ್ಟರ್ ಶೈಲೇಶ್ ಜಿ, ಉಪಾಧ್ಯಕ್ಷ ಬಾಲಕೃಷ್ಣ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲಿಯಾನ್, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್, ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಜೊತೆ ಕೋಶಾಧಿಕಾರಿ ಭಬಿತಾ ಜೆ ಕೋಟ್ಯಾನ್, ಮಹಿಳಾ ವಿಭಾಗದ ಶಾಂಭವಿ ಕೆ ಪೂಜಾರಿ, ಪೂರ್ಣಿಮಾ ಶೆಟ್ಟಿ , ಸುಮತಿ ಪೂಜಾರಿ, ರೇವತಿ ಸಾಲಿಯಾನ್, ಪೂಜಾ ಸಮಿತಿಯ ವಿಶ್ವನಾಥ್ ಎಸ್ ಪೂಜಾರಿ, ರವಿ ಶೆಟ್ಟಿ, ಪ್ರಮೀಳಾ ಆರ್ ಮೂಲ್ಯ, ಸುಧಾಕರ್ ಅಮೀನ್ ಯುವ ವಿಭಾಗ ಹಾಗೂ ಎಲ್ಲಾ ಸದಸ್ಯರು, ಟೀಮ್ ಲಾಡ್ಜಿಯೋದರ್ ಇಂಡಿಯಾ 110 ಇದರ ಮೌಲಿಕ್ ಭಾತು, ಡಾ. ಚೇತನ್ ಅರೋರಾ, ಡಿ.ಬಿ.ಅಮೀನ್ , ಯೋಗೇಶ್ ಶರ್ಮಾ, ಋಷಬ್ ಪಾಟೀಲ್ ಮತ್ತಿತರರು ಸಹಕರಿಸಿದರು.