April 1, 2025
ಸುದ್ದಿ

ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ನಗರಕ್ಕೆ ಭವ್ಯ ಸ್ವಾಗತ

ದಿನೇಶ್ ಕುಲಾಲ್ 

ಮುಂಬಯಿ ಜು 17.   ಶ್ರೀ ಕ್ಷೇತ್ರ  ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು  ಜುಲೈ 17 ರಿಂದ. ಜುಲೈ 29 ರ ವರೆಗೆ ಮುಂಬಯಿಯ ವಿವಿಧ ಉಪನಗರಗಳಲ್ಲಿ ಹಾಗೂ ನವಿಮುಂಬಯಿ ಮತ್ತು ಥಾಣೆಯಲ್ಲಿ ವಿವಿಧ ಧಾರ್ಮಿಕ  ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇಂದು ಜುಲೈ 17ರಂದು ಮುಂಬೈ ನಗರಕ್ಕೆ ಆಗಮಿಸಿದ್ದರು ಅವರನ್ನು ಭಕ್ತರು ಭಕ್ತಿ ಪೂರ್ವಕವಾಗಿ ಮುಂಬೈ ಮಹಾನಗರದ ವಿಮಾನ ನಿಲ್ದಾನದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ   ಸ್ವಾದಿ ಶ್ರೀ ಮಾತಾನಂದಮಯಿ ಅವರು ಉಪಸ್ಥಿತರಿದ್ದರು

ಸ್ವಾಮೀಜಿಯವರನ್ನು. ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮಹಾರಾಷ್ಟ್ರ ಘಟಕ, ಅಧ್ಯಕ್ಷರು ಪದಾಧಿಕಾರಿಗಳು,ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಪದಾಧಿಕಾರಿಗಳು ಸದಸ್ಯರು ಹಾಗೂ  ಒಡಿಯೂರು ಶ್ರೀ ಯುವ ಸೇವಾ ಬಳಗ ಸದಸ್ಯರು ತುಳಸಿ ಹಾರವನ್ನು  ಸಮರ್ಪಿಸಿ ನಗರಕ್ಕೆ ಸ್ವಾಗತಿಸಿದರು

   ಜುಲೈ 18ರಂದು ನವಿ ಮುಂಬಯಿಯ ಜುಹಿ ನಗರ,   ಸಾನ್ಪಾಡ ದಲ್ಲಿರುವ ಬಿಲ್ಲವರ ಅಸೋಸಿಯೇಷನ್ ಇವರ ನೂತನ ಸಮುದಾಯ ಭವನಕ್ಕೆ ಭೇಟಿ ನೀಡಿ ಸಂಜೆ 7ರಿಂದ ಸಾರ್ವಜನಿಕ ಆಶೀರ್ವಚನ ಕಾರ್ಯಕ್ರಮವುಜರಗಲಿದೆ. ಜುಲೈ 19ರಂದು ದಾಮೋದರ್ ಎಸ್  ಶೆಟ್ಟಿ, ಖರ್ ರ್ಗರ್ ನವಿ ಮುಂಬಯಿ ಇಲ್ಲಿ ಸಾರ್ವಜನಿಕ ದರ್ಶನ, ಹಾಗೂ ಜುಲೈ 20ರಂದು ಚೆಂಬೂರು ಛಡ್ ನಗರ್, ಇಂಡಿಯನ್ ಒಯಿಲ್ ನಗರ್ ನಲ್ಲಿರುವ ನ್ಯಾಯವಾದಿ ಕೆಪಿ ಪ್ರಕಾಶ್ ಎಲ್ ಶೆಟ್ಟಿ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನ ಕಾರ್ಯಕ್ರಮ ನಡೆಯಲಿದೆ. ಜುಲೈ 21ರಂದು ರವಿವಾರ ಸಂಜೆ 4:00ಯಿಂದ ಬಂಟರ ಭವನದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುದೇವ ಸೇವಾ ಬಳಗ ಮುಂಬಯಿ ಘಟಕದಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Related posts

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾರ್ಥಿಗಳಿಗೆ ಜಯಲೀಲಾ ಟ್ರಸ್ಟ್ ನ ವತಿಯಿಂದ ಗೌರವ ಧನ

Mumbai News Desk

ಗನ್​ನಿಂದ ಕಾಲಿಗೆ ಶೂಟ್ ಮಾಡಿಕೊಂಡ ನಟ ಗೋವಿಂದ, ಐಸಿಯುಗೆ ದಾಖಲು

Mumbai News Desk

ತಿರುಮಲದಲ್ಲಿ ವಿಜೃಂಭಣೆಯಿಂದ ನಡೆದ ಪುರಂದರ ದಾಸರ ಆರಾಧನ ಮಹೋತ್ಸವ

Mumbai News Desk

ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಆಯ್ಕೆ

Mumbai News Desk

ಮಲಾಡ್ ಕುರಾರ್ ಶನೇಶ್ವರ ಮಂದಿರದ ವತಿಯಿಂದ ಉಳ್ಳಾಳ ಸೋಮೇಶ್ವರದಲ್ಲಿ, ಶ್ರೀ ಶನಿ ಮಹಾಪೂಜೆ.

Mumbai News Desk

ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ 

Mumbai News Desk