September 6, 2026
Mumbai News Kannada
ಸುದ್ದಿ

ಪ್ರಗತಿಯ ಪಥದಲ್ಲಿ ಭಾರತ್ ಬ್ಯಾಂಕ್:  ಸೂರ್ಯಕಾಂತ್ ಜಯ ಸುವರ್ಣ 





ದೇಶದ ಅತ್ಯಂತ ಗ್ರಾಹಕ ಸ್ನೇಹಿ ಬ್ಯಾಂಕುಗಳಲ್ಲಿ ಒಂದಾದ ಭಾರತ್ ಬ್ಯಾಂಕ್, 2025-26 ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ತಮ್ಮ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (CASA) ಗುರಿಗಳನ್ನು ಮೀರಿದ ತನ್ನ ಶಾಖೆಗಳ ಕಾರ್ಯಕ್ಷಮತೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಅಕ್ಟೋಬರ್ 14, 2025 ರಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಬ್ಯಾಂಕಿನ  ಕಾರ್ಯಾಧ್ಯಕ್ಷರಾದ  ಸೂರ್ಯಕಾಂತ್ ಜಯ ಸುವರ್ಣರು ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (CASA) ಗುರಿಗಳನ್ನು ಮೀರಿದ  ಶಾಖಾ ಮುಖ್ಯಸ್ಥರುಗಳಾದ  ಸಿದ್ದಾಂತ್ ಜಾಧವ್ – ಇನ್‌ಚಾರ್ಜ್ – ದಿವಾ ಎಕ್ಸ್‌ಟೆನ್ಶನ್ ಕೌಂಟರ್,  ಜಯ ಎ ಕೋಟ್ಯಾನ್ – ಶಾಖಾ ಮುಖ್ಯಸ್ಥರು – ದಹಿಸರ್ ಶಾಖೆ,  ರೇಷ್ಮಾ ಎನ್. ಶೆಟ್ಟಿ – ಶಾಖಾ ಮುಖ್ಯಸ್ಥರು – ಕಂಕನಾಡಿ ಶಾಖೆ,  ಹೇಮಲತಾ ಎ. ಸುವರ್ಣ – ಶಾಖಾ ಮುಖ್ಯಸ್ಥರು – ಹಂಪನಕಟ್ಟೆ ಶಾಖೆ,  ಕೃತಿಕಾ ಎಂ. ಕರ್ಕೇರ – ಶಾಖಾ ಮುಖ್ಯಸ್ಥರು – ಜೋಗೇಶ್ವರಿ ಶಾಖೆ,  ಕಸ್ತೂರಿ ಪಿ. ಪೂಜಾರಿ – ಶಾಖಾ ಮುಖ್ಯಸ್ಥರು – ಘೋಡ್‌ಬಂದರ್ ಶಾಖೆ ಮತ್ತು  ಪ್ರತಿಮಾ ಡಿ. ಸುವರ್ಣ – ಶಾಖಾ ಮುಖ್ಯಸ್ಥರು – ಐರೋಲಿ ಶಾಖೆ ಅವರನ್ನು ಸನ್ಮಾನಿಸಿದರು.

ಈ ಸಾಧನೆಯು ಭಾರತ್ ಬ್ಯಾಂಕಿನ ದೃಢವಾದ ಗ್ರಾಹಕ-ಕೇಂದ್ರಿತ ಕಾರ್ಯತಂತ್ರ ಮತ್ತು ಬ್ಯಾಂಕಿನ ಸಿಬ್ಬಂದಿಗಳ ದಕ್ಷತೆಯನ್ನು ಒತ್ತಿಹೇಳುತ್ತದೆ. CASA ಠೇವಣಿಗಳು ಬ್ಯಾಂಕಿನ ಸ್ಥಿರತೆ ಮತ್ತು ಲಾಭದಾಯಕತೆಗೆ ಪ್ರಮುಖ ಮಾನದಂಡವಾಗಿದೆ ಮತ್ತು ಈ ಯಶಸ್ಸು ಭಾರತ್ ಬ್ಯಾಂಕಿನ ಬಗ್ಗೆ ಗ್ರಾಹಕರಲ್ಲಿ ಹೆಚ್ಚುತ್ತಿರುವ ನಂಬಿಕೆ ಮತ್ತು ಆದ್ಯತೆಯ ಬಲವಾದ ಸೂಚಕವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಾಧ್ಯಕ್ಷರಾದ  ಸೂರ್ಯಕಾಂತ್ ಜಯ ಸುವರ್ಣರು,  ಭಾರತ್ ಬ್ಯಾಂಕಿಗೆ ಇದು ಹೆಮ್ಮೆಯ ಕ್ಷಣವಾಗಿದೆ. ಈ ಎಲ್ಲಾ ಶಾಖೆಗಳು  ಕಾರ್ಯಕ್ಷಮತೆಯು ನಮ್ಮ ಬ್ಯಾಂಕಿನ ಭರವಸೆಯ ಪಥದ ನೇರ ಪ್ರತಿಬಿಂಬವಾಗಿದೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುವಲ್ಲಿ ನಮ್ಮ ಬದ್ಧತೆಯನ್ನು ದರ್ಶಿಸುತ್ತದೆ. ಈ ಕಾರ್ಯಶೈಲಿ ಉಳಿದ ಶಾಖೆಗಳಿಗೂ ಅನುಕರಣೀಯವಾಗಿದೆ ಎಂದರು.

ಶಾಖೆಯ ವ್ಯವಸ್ಥಾಪಕರು ಮತ್ತು ಅವರ ತಂಡಗಳಿಗೆ ನಿರ್ದೇಶಕರ ಮಂಡಳಿಯ ಪರವಾಗಿ ಉಪಕಾರ್ಯಧ್ಯಕ್ಷರಾದ  ಸೋಮನಾಥ್ ಬಿ. ಅಮೀನ್ ಹಾಗೂ ನಿರ್ದೇಶಕರಾದ ಚಂದ್ರಶೇಖರ ಎಸ್. ಪೂಜಾರಿ, ಜಯಲಕ್ಷ್ಮಿ ಪಿ ಸಾಲಿಯಾನ್, ಗೌರೇಶ್ ಆರ್ ಕೋಟ್ಯಾನ್  ಮತ್ತು ಜಯಶ್ರೀ ಎಂbಹೆಜಮಾಡಿ ತಮ್ಮ ಅಭಿನಂದನೆಗಳನ್ನು ಸಲ್ಲಿಸಿ ಬ್ಯಾಂಕಿನ ಒಟ್ಟಾರೆ ಆರ್ಥಿಕ ಆರೋಗ್ಯಕ್ಕೆ ಶಾಖೆಗಳ ಕೊಡುಗೆಯನ್ನು ಶ್ಲಾಘಿಸಿ ಸಿಬ್ಬಂದಿಗಳ ಬದ್ಧತೆಯು ಬ್ಯಾಂಕಿನ ಧ್ಯೇಯ ಮತ್ತು ಉನ್ನತ ಕಾರ್ಯಕ್ಷಮತೆಯ ನೀತಿಯನ್ನು ತೋರಿಸುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ bಭಾಸ್ಕರ್ ಎಂ. ಸಾಲ್ಯಾನ್,. ಅಶೋಕ್ ಎಂ ಕೋಟ್ಯಾನ್,  ಮೋಹನ್ ದಾಸ್ ಜಿbಪೂಜಾರಿ,  ನರೇಶ್ ಕೆ. ಪೂಜಾರಿ, ನಿರಂಜನ್ ಎಲ್ ಪೂಜಾರಿ, ಸಂತೋಷ್ ಕೆ. ಪೂಜಾರಿ, ಗಣೇಶ್ ಡಿ. ಪೂಜಾರಿ  ಹರೀಶ್ ವಿ. ಪೂಜಾರಿ,    ನಾರಾಯಣ್ ಎಲ್ ಸುವರ್ಣ, nಸುರೇಶ್ ಬಿ. ಸುವರ್ಣ,  ಆಶಾ ಆರ್. ಬಂಗೇರ,  ಅನ್ಬಳಗನ್ ಸಿ. ಹರಿಜನ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿದ್ಯಾನಂದ ಎಸ್. ಕರ್ಕೇರ, ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ  ದಿನೇಶ್ ಬಿ. ಸಾಲ್ಯಾನ್ ಉಪಸ್ಥಿತರಿದ್ದರು.

———- 



Related posts

ಮುಂಬೈ ನ್ಯೂಸ್ ನ ಛಾಯಾಗ್ರಾಹಕ, ವರದಿಗಾರ ಧನಂಜಯ ಪೂಜಾರಿ ಅವರಿಗೆ ಮಾತೃ ವಿಯೋಗ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ವಸಯಿಯ ಮೋಹಿತ್ ಆನಂದ ಪೂಜಾರಿಗೆ ಶೇ 86.50%

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಮುನಿರಾಜ್ ಜೈನ್ ಮತ್ತು ದಿ. ನ್ಯಾ. ಸುಭಾಷ್ ಶೆಟ್ಟಿ ಯವರಿಗೆ ನುಡಿ ನಮನ.

Mumbai News Desk

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ವತಿಯಿಂದ ಶ್ರೀ ಶನಿಶಿಂಗ್ನಪುರದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

“ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ

Mumbai News Desk

ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಭಜನಾ ಕಾರ್ಯಕ್ರಮ.

Mumbai News Desk