ವಸಾಯಿ, ಜು.19- ವಸಾ ಯಿ ಪರಿಸರದ ತುಳು-ಕನ್ನಡಿಗರ ಸಂಘಟನೆಯಾದ ವಸಾಯಿ ಕರ್ನಾಟಕ ಸಂಘವು ಪ್ರತೀ ವರ್ಷದಂತೆ ಮುಂದಿನ ತಿಂಗಳು ಆಗಸ್ಟ್ 15ರ ಗುರುವಾರ ದಂದು ಸಂಘದ ಅಧ್ಯಕ್ಷರಾದ ದೇವೇಂದ್ರ ಬುನ್ನನವರ ಅಧ್ಯಕ್ಷತೆಯಲ್ಲಿ ರೂಮ್ ನಂಬರ್-3, 4, ಹ್ಯಾಪಿ ಜೀವನ್ ಸೊಸೈಟಿ, ಪಾರ್ವತಿ ಸಿನೆಮಾದ ಹಿಂದುಗಡೆ, ವಸಾಯಿ ಪಶ್ಚಿಮದಲ್ಲಿರುವ ಸಂಘದ ಕಚೇರಿಯಲ್ಲಿ ಸಾತಂತ್ರೋತ್ಸವ ಸಂಭ್ರಮವನ್ನು ಆಯೋಜಿಸಿಕೊಂಡಿದೆ.
ಈ ಸಂದರ್ಭ ಎಸ್ ಎಸ್. ಹೊಸಮನೆ ಮತ್ತು ದಿ. ಮುಲ್ಕಿ ಸರೋಜಾ ಕೃಷ್ಣ ಕಾಮತಯವರು ನೆರವಿನೊಂದಿಗೆ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಯೊಬ್ಬನನ್ನು. ಪೂರ್ತಿ ವರ್ಷದ ಶಾಲಾ ವೆಚ್ಚವನ್ನು ನೀಡಿ ದತ್ತ ಸ್ವೀಕಾರ ಮಾಡಲಾಗುವುದು. ಮತ್ತು ಸಂಘದ ಗೌರವ ಅಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ ಅವರು ಇಬ್ಬರು ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಿದ್ದಾರೆ. 2023-2024ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಸಿ, ಎಚ್.ಎಸ್.ಸಿ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿ ಮೊದಲನೆಯ ಸ್ಥಾನ ಪಡೆದ ಮಕ್ಕಳಿಗೆ ಸಹಯಧನ ಮತ್ತು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಎಸ್. ಎಸ್.ಸಿ ಪರೀಕ್ಷೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು, ಎಚ್.ಎಸ್.ಸಿ ಪರೀಕ್ಷೆಯಲ್ಲಿ ಶೇಕಡಾ 75ಕ್ಕಿಂತ ಹೆಚ್ಚು, ಪದವಿ ಶಿಕ್ಷಣ ಪರೀಕ್ಷೆಯಲ್ಲಿ ಶೇಕಡಾ 65ಕ್ಕಿಂತ ಹೆಚ್ಚು ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ಪೂರೈಸಿದ ಸಂಘದ ಮಕ್ಕಳು ಈ ಪ್ರತಿಭಾ ಪುರಸ್ಕಾರ ಪಡೆಯಲು ಅರ್ಹರಾಗಿದ್ದು, ಪ್ರತಿಭಾ ಪುರಸ್ಕಾರ ಪಡೆಯಲು ಇಚ್ಛಿಸುವ ಸಂಘದ ಸದಸ್ಯರು ಅಥವಾ ಸದಸ್ಯರ ಮಕ್ಕಳು ವಸಾಯಿ ಕರ್ನಾಟಕ ಸಂಘದ ಕಚೇರಿಯನ್ನು ಸದಸ್ಯತನ ನೋಂದಾವಣಿಯ ಗುರುತು ಚೀಟಿ, ಅಂಕಪಟ್ಟಿಯ ಪ್ರತಿಯೊಂದಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ವಿನಂತಿಸಿಕೊಳ್ಳಲಾಗಿದೆ.
ಸ್ವೀಕರಿಸಿದ ಅರ್ಜಿಗಳಲ್ಲಿ ಎಸ್.ಎಸ್.ಸಿ, ಎಚ್.ಎಸ್.ಸಿ, ಪದವಿಗಳಲ್ಲಿ ಹಾಗೂ ಎಸ್.ಎಸ್.ಸಿ ಪರೀಕ್ಷೆಯ ಗಣಿತ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತರಿಗೆ ಗೌರವಧನ ನೀಡಿ ಪುರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಘದ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಪ್ರಮಿಳಾ ಎನ್ ಅಮೀನ್ ಇವರನ್ನು ಮೊಬೈಲ್ ಸಂಖ್ಯೆ- 9049889551 ಸಂಪರ್ಕಿಸಬಹುದು. ಪ್ರತಿಭಾ ಪುರಸ್ಕಾರ ಪಡೆಯಲು ಇಚ್ಛಿಸುವ ಸದಸ್ಯರು ಅಥವಾ ಸದಸ್ಯರ ಮಕ್ಕಳು ಆಗಸ್ಟ್ 5ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಸದಸ್ಯರು ಈ ಕಾರ್ಯಕ್ರಮದ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕೆಂದು ವಸಾಯಿ ಕರ್ನಾಟಕ ಸಂಘದ ಸರ್ವ ಪದಾಧಿಕಾರಿಗಳು ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.