ಮುಂಬಯಿ,ಜು.21: ತುಳುನಾಡ ಸೇವಾ ಸಮಾಜ,ಮೀರಾ ಭಾಯಂದರ್ ಇದರ ಅದ್ಯಕ್ಷ, ಅಖಿಲ ಭಾರತ ತುಳು ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯ, ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ಮಹಾರಾಷ್ಟ್ರ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯ , ಮೀರಾ ರೋಡ್ ಶನೀಶ್ವರ ಸೇವಾ ಸಮಿತಿಯ ಸಲಹೆಗಾರ, ಸಮಾಜ ಸೇವಕ ಡಾ.ರವಿರಾಜ್ ಸುವರ್ಣ ಮೀರಾ ರೋಡ್ ಇವರನ್ನು ಇತ್ತೀಚೆಗೆ ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಅಕಾಡೆಮಿಯ ನಿಯಮಾವಳಿಗಳ ಪ್ರಕಾರ ಸರ್ಕಾರದ ನಿರ್ದೇಶನದಂತೆ ಸಹ ಸದಸ್ಯರನ್ನಾಗಿ ನಿರ್ದೇಶನ ಮಾಡಲಾಗಿದೆ.
ತುಳು ಭಾಷೆ ಹಾಗೂ ಸಂಸ್ಕೃತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಇವರು2010ರಲ್ಲಿ ಕೇರಳ ತುಳು ಅಕಾಡೆಮಿ ಹಾಗೂ 2016ರಲ್ಲಿ ಕೊಡಗು ಸಾಹಿತ್ಯ ಅಕಾಡೆಮಿಯೊಂದಿಗೆ ಮೀರಾ-ಭಾಯಂದರಿನಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನು ಹಮ್ಮಿಕೊಂಡ ಕೀರ್ತಿ ಇವರಿಗಿದೆ.
ತುಳು ಸಮ್ಮೇಳನದಲ್ಲಿ ದೇಶ-ವಿದೇಶಗಳಲ್ಲಿ ಭಾಗವಹಿಸಿದ ಇವರು ತುಳು ಭಾಷೆ ಹಾಗೂ ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸದಾ ಶ್ರಮಿಸುತ್ತಿದ್ದಾರೆ.
ಇವರ ನೇಮಕಾತಿಗೆ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡು , ಕರ್ನಾಟಕ ಸರ್ಕಾರದ ಶಾಸಕ ಹಾಗೂ ಸಭಾಪತಿ ಯು.ಟಿ.ಖಾದರ್ ಹಾಗೂ ಅಖಿಲ ಭಾರತ ಕಿಸಾನ್ ಕಾಂಗ್ರೆಸ್ಸಿನ ಸಂಯುಕ್ತ ಸಂಯೋಜಕರಾದ ಸುರೇಶ್ ಶೆಟ್ಟಿ ಯೆಯ್ಯಾಡಿಯವರು ಶಿಫಾರಸು ಮಾಡಿದ್ದರು.
