
ಚಿತ್ರ, ವರದಿ: ಉಮೇಶ್ ಕೆ.ಅಂಚನ್.
ಮುಂಬಯಿ, ಅ.22: ಭಾರತ್ ಬ್ಯಾಂಕಿನ 46ನೇ ಸಂಸ್ಥಾಪನಾ ದಿನಾಚರಣೆಯನ್ನು ಭಾಯಂದರ್ ಶಾಖೆಯಲ್ಲಿ ಬ್ಯಾಂಕಿನ ನಿರ್ದೇಶಕ ನರೇಶ್ ಕೆ.ಪೂಜಾರಿಯವರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ನರೇಶ್ ಕೆ.ಪೂಜಾರಿಯವರು ಬ್ಯಾಂಕಿನ ಸೇವೆಯ ಬಗ್ಗೆ ಮಾತನಾಡಿ ಬ್ಯಾಂಕಿನ ಪ್ರಗತಿಗೆ ಕಾರಣರಾದ ಗ್ರಾಹಕರಿಗೆ ಹಾಗೂ ಬ್ಯಾಂಕಿನ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ ಕಚೇರಿಯ ಉಪಾಧ್ಯಕ್ಷರು ಗಳಾದ ರಘುನಾಥ್ ಹಳೆಯಂಗಡಿ, ಉದಯ ಸುವರ್ಣ , ಕಾರ್ಯಕಾರಿ ಸಮಿತಿಯ ಸದಸ್ಯ ಮಾಧವ ಸುವರ್ಣ, ಬ್ಯಾಂಕಿನ ಮಾಜಿ ಸಿಬ್ಬಂದಿ ವಿಜಯ ಅಂಚನ್, ಉಮೇಶ್ ಪೂಜಾರಿ , ಹಿರಿಯ ಗ್ರಾಹಕರಾದ ಸ್ವತಂತ್ರ ಕುಮಾರ್, ರಮೇಶ್ ಪಾರೇಖ್,ಚಂಗ್ನಾಲಾಲ್ ಪುರೋಹಿತ್, ಗಣೇಶ್ ಶರ್ಮಾ, ಉದಯ್ ಪೂಜಾರಿ, ದಿನೇಶ್ ಸುವರ್ಣ,ಅಲ್ಪೇಶ್ ,ರಾಂಪಾಲ್ ಯಾದವ್,ದಿನೇಶ್ ಹಲ್ವಾಯಿ, ಇಂತಾರ್ ಖಾನ್, ಅಂಜಲಿನ್ ಡಿಮೆಲ್ಲೋ ಉಪಸ್ಥಿತರಿದ್ದು ಬ್ಯಾಂಕಿನ ಉತ್ತಮ ಸೇವೆಯ ಬಗ್ಗೆ ಪ್ರಶಂಸಿಸಿ ಮಾತನಾಡಿದರು.




ಶಾಖಾ ಪ್ರಬಂಧಕ ಪ್ರವೀಣ್ ಎಮ್.ಬಂಗೇರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಧಿಕಾರಿ ವೀಣಾ ಪೂಜಾರಿ ವಂದಿಸಿದರು.ಹಿರಿಯ ನಾಗರಿಕ ದಿನದ ಪ್ರಯುಕ್ತ ಹಿರಿಯ ಗ್ರಾಹಕರನ್ನು ಹೂಗುಚ್ಛ ನೀಡಿ ಸತ್ಕರಿಸಲಾಯಿತು.
ಜತೆ ಪ್ರಭಂದಕಿ ನಮಿತಾ ಮಿಸ್ತ್ರೀ, ಅಧಿಕಾರಿ ದೀಪಾ ಸಾಲ್ಯಾನ್ , ಜತೆ ಕಿರಿಯ ಅಧಿಕಾರಿಗಳಾದ ಲೀಲಾಧರ್ ಸುವರ್ಣ ಮತ್ತು ಪ್ರಿಯಾ ಮರಾಠೆ, ಸಹಾಯಕ ಕಿರಿಯ ಅಧಿಕಾರಿಗಳಾದ ಮುಕ್ತಾ ಸುವರ್ಣ,ಅಕ್ಷತ ಕುಮಾರ್ , ಪ್ರಶಿಕ್ಷಣಾರ್ಥಿಗಳಾದ ಸೂರ್ಯ ನಾಯರ್, ಪ್ರಾಪ್ತಿ ಅಂಚನ್, ಪ್ರಿಯಾ ಸಿಂಗ್ , ಎಚ್ಡಿಎಫ್ ಲೈಫ್ ನ ನೇಹಾ ತೋರ್ವೆ ಉಪಸ್ಥಿತರಿದ್ದು ಸಹಕರಿಸಿದ್ದರು.