
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ ಸೆ 10. ನಗರದ ಪ್ರತಿಷ್ಠಿತ ಜಾತೀಯ ಸಂಸ್ಥೆಯಲ್ಲಿ ಒಂದಾಗಿರುವ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಮುರಳಿ ಕೆ. ಶೆಟ್ಟಿ ಯವರಿಗೆ ನುಡಿ ನಮನ ಸೆ 9 ರಂದು ಸೋಮವಾರ ಸಯನ ನ ಸ್ವಾಮಿ ನಿತ್ಯಾನಂದ ಹಾಲ್ ನಲ್ಲಿ ನಡೆಯಿತು.
ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸುರೇಂದ್ರ ಮಲ್ಲಿಯವರು ಪುಷ್ಪ ನಮನವನ್ನು ಮುರುಳಿ ಶೆಟ್ಟಿಯವರ ಭಾವಚಿತ್ರಕ್ಕೆ
ಸಲ್ಲಿಸಿ ಅಸೋಸಿಯೇಷನ್ ಬಹಳಷ್ಟು ಅಭಿವೃದ್ಧಿಗೊಂಡಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಇದಕ್ಕೆ ಮಾಜಿ ಅಧ್ಯಕ್ಷರುಗಳ ಅಪಾರವಾದ ಯೋಗದಾನವಿದೆ.ಅದರಲ್ಲಿ ಮುರಳಿ ಶೆಟ್ಟಿಯವರ ದೇಣಿಗೆ,ಸೇವಾ ಕಾರ್ಯ, ಅವಿಸ್ಮರಣೆಯವಾಗಿದೆ. ಸೌಮ್ಯ ಸ್ವಭಾವದವರು, ಸಮಾಜ ಬಾಂಧವರನ್ನು ಪ್ರೀತಿಯಿಂದ ಕಂಡವರು, ಅವರ ಅಗಲಿವಿಕೆ ಅಸೋಸಿಯೇಷನ್ಗೆ ಬಹಳಷ್ಟು ನಷ್ಟ ತಂದಿದೆ ಎಂದು ನುಡಿದರು.

ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಯವರು ಪುಷ್ಪ ನಮನ ಸಲ್ಲಿಸಿ ಮುರಳಿ ಶೆಟ್ಟಿ ಮತ್ತು ನನ್ನ ಬಹಳ ವರ್ಷದ ಸಂಬಂಧ, ನಮ್ಮ ಪರಿವಾರಕ್ಕೆ ಬಹಳ ಹತ್ತಿರದವರು . ಅವರನ್ನು ಅಸೋಸಿಯೇಷನ್ ಸದಸ್ಯತ್ವ ಕಾಗಿ ಮಾತನಾಡಿದ ಸಂದರ್ಭದಲ್ಲಿ ನಮ್ಮನ್ನು ಬಹಳ ಪ್ರೀತಿಯಿಂದ ಕಂಡವರು. ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ದೇಣಿಗೆ ಸಂಗ್ರಹಿಸಿ ಅಸೋಸಿಯೇಷನ್ ಗೆ ನೀಡಿದ್ದಾರೆ. ಬಳಿಕ ಅವರು ಅಸೋಸಿಯೇಷನ್ಗೆ ನೀಡಿದ ಸೇವೆಗಳು. ಶಿಕ್ಷಣ ಸಮಿತಿಯಲ್ಲಿ ಮಾಡಿದ ಕಾರ್ಯಗಳು ಅಪಾರವಾಗಿದೆ. ಶಿಕ್ಷಣ ಸಮಿತಿಯಲ್ಲಿ ಕಾರ್ಯಧ್ಯಕ್ಷರಾಗಿ ದಾನಿಗಳಿಂದ ಬಹಳಷ್ಟು ದೇಣಿಗೆಯನ್ನು ಸಂಗ್ರಹಿಸಿದರು. ಅಲ್ಲದೆ ತನ್ನದೇ ವತಿಯಿಂದ ದೇಣಿಗೆಯನ್ನುವನ್ನು ನೀಡಿದ್ದಾರೆ. ಅಸೋಸಿಯೇಷನ್ನ ಅಧ್ಯಕ್ಷ ಪದವಿಗಾಗಿ ನಾಮಪತ್ರ ಸಲ್ಲಿಸಿದ ಸಂದರ್ಭ ದಲ್ಲಿ ಅವರೆದುರಗೆ ಮತ್ತೊಂದು ನಾಮಪತ್ರ ಬಂದಾಗ ಸ್ಪರ್ಧೆ ಬೇಡ ಎಂದು ಹಿಂದೆ ಸರಿದವರು. ಅದು ಅವರ ತ್ಯಾಗದ ಗುಣವಾಗಿದೆ. ದೊಂಬಿವಲಿ ಪರಿಸರದಲ್ಲಿ ಮುರಳಿ ಶೆಟ್ಟಿ ಮತ್ತು ಅವರ ಪತ್ನಿ ಬೇರೆ ಬೇರೆ ರೀತಿಯಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಎಂದು ನುಡಿದರು.
ಮಾಜಿ ಅಧ್ಯಕ್ಷ ನ್ಯಾಯವಾದಿ ರತ್ನಾಕರ್ ಶೆಟ್ಟಿ ಮಾತನಾಡಿ 14 ವರ್ಷ ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷರಾಗಿ ಮೂರು ಬಾರಿ ಅಧ್ಯಕ್ಷರಾಗಿ ಅಸೋಸಿಯೇಷನ್ನ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಅವರ ಅಗಲವಿಕೆ ದೊಡ್ಡ ಮಟ್ಟದ ಅಘಾತ ನೀಡಿದೆ ಎಂದು ನುಡಿದರು.
ಅಸೋಸಿಯೇಷನ್ ಮಾಜಿ ಅಧ್ಯಕ್ಷ ನ್ಯಾಯವಾದಿ ಅಶೋಕ್ ಶೆಟ್ಟಿ ನುಡಿ ನಮನವನ್ನು ಸಲ್ಲಿಸುತ್ತಾ ಸೌಮ್ಯ ಸ್ವಭಾವದಿಂದ ಸಮಾಜದ ಸೇವೆಯಲ್ಲಿ ತೊಡಗಿಕೊಂಡ ಮುರಳಿ ಶೆಟ್ಟಿಯವರು ಅಸೋಸಿಯೇಷನ್ ಎಲ್ಲಾ ಕಾರ್ಯ ಚಟುವಟಿಕೆಗಳ ಬಗ್ಗೆ ತಮ್ಮ ಸಹಾಯಾರ್ಥವನ್ನು ನೀಡುತ್ತಾ ಬಂದವರು. ಅವರು ಉತ್ತಮ ಗುಣವಂತರಾಗಿದ್ದರು ಎಂದರು.
ಅಸೋಸಿಯೇಷನ್ನು ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ ಮಾತನಾಡಿ ಶಿಕ್ಷಣ ಸಮಿತಿಗೆ ದೇಣಿಗೆ ಸಂಗ್ರಹಿಸುವ ಬಹಳ ದೊಡ್ಡ ಜವಾಬ್ದಾರಿ ಇದೆ .ಪ್ರತಿ ವರ್ಷ 45 ಲಕ್ಷಕ್ಕಿಂತ ಮಿಕ್ಕಿ ದೇಣಿಗೆ ಸಂಗ್ರಹಿಸಲು ಬಹಳಷ್ಟು ಕಷ್ಟಕರ ಆದರೂ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುದೀರ್ಘಕಾಲ ಮುರಳಿ ಶೆಟ್ಟಿಯವರು ಸೇವೆ ಮಾಡಿದ್ದಾರೆ. ಅವರು ಕೇವಲ ಅಸೋಸಿಯೇಷನ್ ಮೂಲಕ ಸಮಾಜದ ಸೇವೆ ಮಾತ್ರ ಮಾಡಿದ್ದಲ್ಲ. ತನ್ನೂರಿನ ದೇವಸ್ಥಾನದ ಅಭಿವೃದ್ಧಿಗಾಗಿ ಅಪಾರವಾದ ಸೇವೆ ಮಾಡಿದ್ದಾರೆ. ಮತ್ತು ಅವರ ಕುಟುಂಬವನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಬಂದವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರನ್ನು ಆದರ್ಶರನ್ನಾಗಿ ಬೆಳೆಸಿದ್ದಾರೆ ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ , ತೇಜಾಕ್ಷಿ ಶೆಟ್ಟಿ, ಅಸೋಸಿಯೇಷನ್ನ ಪದಾಧಿಕಾರಿಗಳಾದ ಪ್ರಭಾಕರ್ ಶೆಟ್ಟಿ, ನಾರಾಯಣಶೆಟ್ಟಿ ನಂದಳಿಕೆ ಇವರೆಲ್ಲ ಮುರುಳಿ ಶೆಟ್ಟಿಯವರ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡರು.
ಪತ್ರಕರ್ತ ದಯಾಸಾಗರ್ ಚೌಟ ನುಡಿ ನಮನವನ್ನು ಸಲ್ಲಿಸಿ ಅವರ ಬದುಕಿನ ಚಿತ್ರವನ್ನು, ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅಸೋಸಿಯೇಷನ್ ನಲ್ಲಿ ಅವರ ಸೇವಾ ಕಾರ್ಯಗಳನ್ನು ಸಮಗ್ರವಾಗಿ ತಿಳಿಸಿದರು.
ಸಭೆಯಲ್ಲಿ ಅಸೋಸಿಯೇಷನ್ ನ ಕೋಶಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಜಯಂತ್ ಶೆಟ್ಟಿ, ಉಪ್ಪುರು ಶೇಖರ್ ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶಾಂತ ಏನ್ ಶೆಟ್ಟಿ, ಕಾರ್ಯದರ್ಶಿ ಸಹಾನಿ ಶೆಟ್ಟಿ, ಮಾಜಿ ಕಾರ್ಯಧ್ಯಕ್ಷೆ ಶೈಲಜಾ ಶಟ್ಟಿ ಮತ್ತಿತರ ಸದಸ್ಯರು ಮುರಳಿ ಶೆಟ್ಟಿಯವರ ಧರ್ಮಪತ್ನಿ ಮತ್ತು ಅವರ ಮಕ್ಕಳು ಕುಟುಂಬಿಕರು ಪಾಲ್ಗೊಂಡರು.
ಅಸೋಸಿಯೇಷನ್ ವತಿಯಿಂದ ಮುರಳಿ ಶೆಟ್ಟಿಯವರ ಆತ್ಮಕತಿಗಾಗಿ ಮೌನ ಪ್ರಾರ್ಥನೆಯನ್ನು ಸಲ್ಲಿಸಿ ಪಾಲ್ಗೊಂಡ ಎಲ್ಲರೂ ಪುಷ್ಪ ನಮನವನ್ನು ಸಲ್ಲಿಸಿದರು.