
ಕಿನ್ನಿಗೋಳಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಭಕ್ತಿ ಸಂಭ್ರಮದೊಂದಿಗೆ ನಡೆಯಿತು.
50ನೇ ವರ್ಷದ ಸಂಭ್ರಮಾಚರಣೆಯ ಧಾರ್ಮಿಕ ಸಭೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಕಟೀಲಿನ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ಹಾಗೂ ಮುಂಡ್ಕೂರಿನ ಶ್ರೀ ರಾಮದಾಸ್ ಉಪಾಧ್ಯಯರು ಆಶೀರ್ವಚನ ನೀಡಿದರು. ಶ್ರೀ ಗುರುರಾಜ್ ಆಚಾರ್ಯ ಪಡುಬಿದ್ರಿ, ಶ್ರೀ ಹರಿಭಟ್ ಮುಂಡ್ಕೂರು, ಆಶೀರ್ವಚನದ ಮಾತುಗಳನ್ನಾಡಿದರು.
ಅತಿಥಿಯಾಗಿ ಶಾಸಕರಾದ ಉಮಾನಾಥ್ ಕೋಟ್ಯಾನ್, ಗೌರವಾಧ್ಯಕ್ಷ ಭುವನಾಭಿರಾಮ ಉಡುಪ, ಅಧ್ಯಕ್ಷ ಕುಶಲ ಪೂಜಾರಿ, ಶರತ್ ಶೆಟ್ಟಿ, ಧನಂಜಯ ಶೆಟ್ಟಿಗಾರ್ ದುಬೈ, ಅರುಣ್ ಉಳ್ಳಾಲ, ಸುಚರಿತ ಶೆಟ್ಟಿ, ಧನಪಾಲ ಶೆಟ್ಟಿ, ರಮೇಶ್ ಕುಮಾರ್ ಸೌಂದರ್ಯ, ದಿವಾಕರ್ ಕರ್ಕೇರ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಕ್ತರಿಂದ ಸುಮಾರು 11 ಲಕ್ಷ ಮೌಲ್ಯದ ಬೆಳ್ಳಿಯ ಪ್ರಭಾವಳಿಯನ್ನು ದೇವರಿಗೆ ಅರ್ಪಿಸಲಾಯಿತು. ಹಾಗೂ ಗುರುರಾಜ್ ಆಚಾರ್ಯ ಪಡುಬಿದ್ರೆ ಇವರನ್ನು ಮತ್ತು ಸೌಂದರ್ಯ ರಮೇಶ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
.
.