September 6, 2026
Mumbai News Kannada
ತುಳುನಾಡು

ಮುಲ್ಕಿ ಅರಸು ಪ್ರಶಸ್ತಿ 2025 ಪ್ರಧಾನ ಹಾಗೂ ಸಾಧಕರಿಗೆ ಗೌರವಾರ್ಪಣೆ ಸಮಾರಂಭ: ಪತ್ರಕರ್ತ ಹರಿಶ್ಚಂದ್ರ ಪಿ ಸಾಲ್ಯಾನ್ ರವರಿಗೆ ಸಾಹಿತ್ಯ ಕ್ಷೇತ್ರ ಪ್ರಶಸ್ತಿ.





ಮುಲ್ಕಿ, ಡಿ.29: ಪಡುಪಣಂಬೂರು ಮುಲ್ಕಿ ಅರಮನೆ ವೆಲ್ಫೇರ್ ಟ್ರಸ್ಟ್ ಹಾಗೂ ಹಳೆಯಂಗಡಿ ಪ್ರಿಯದರ್ಶಿನಿ ಕೋಪರೇಟಿವ್ ಸೊಸೈಟಿಯ ಸಹಯೋಗದಿಂದಿಗೆ ‘ಅರಸು ಪ್ರಶಸ್ತಿ-2025’ ರ ಪ್ರಧಾನ ಕಾರ್ಯಕ್ರಮವು ಸೀಮೆಯ ಅರಸರಾದ ದುಗ್ಗಣ್ಣ ಸಾಮಂತರ ನೇತೃತ್ವದಲ್ಲಿ ಭಾನುವಾರ ಡಿ.28ರಂದು ಪಡುಪಣಂಬೂರು ಮುಖ್ಯ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ದುಗ್ಗಣ್ಣ ಸಾಮಂತ ಅರಸರು ವಹಿಸಿದ್ದರು.ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿ ಸೇವಾ ಸಂಸ್ಥೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯ. ವಿವಿಧ ಕ್ಷೇತ್ರಗಳಲ್ಲಿ ಪಾರು ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಭಾಗ್ಯ ನನಗೆ ಸಿಕ್ಕಿದ್ದು ತುಂಬಾ ಸಂತಸ ತಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹರಿಶ್ಚಂದ್ರ ಪಿ .ಸಾಲ್ಯಾನ್ ರವರ ಕೊಡುಗೆ ಅಪಾರ ಎಂದರು.


ಸಾಲ್ಯಾನ್ ರವರು ಪರಿಸರದ ಓರ್ವ ಹಿರಿಯ ಹಾಗೂ ಶ್ರೇಷ್ಠ ಲೇಖಕರಿಗಿದ್ದು ಜ್ಯೋತಿಷ್ಯ ಹಾಗೂ ವಾಸ್ತು ತಜ್ಞರೂ ಆಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಲೋಕಾರ್ಪಣೆ ಮಾಡಿದ್ದಾರೆ. ಕೆಲವು ಕೃತಿಗಳನ್ನು ಮರುಮುದ್ರಣವನ್ನೂ ಕಂಡಿವೆ.ಇವರ ಅದೆಷ್ಟೋ ಲೇಖನಗಳು ಊರಿನ ಪ್ರಸಿದ್ಧ ಪತ್ರಿಕೆಗಳಾದ ವಿಜಯಾ ಕರ್ನಾಟಕ, ಕನ್ನಡ ಪ್ರಭ, ಜಯಕಿರಣ, ಆತ್ಮ ಶಕ್ತಿ, ಜ್ಯೋತಿಷ್ಯ ಮಂಡಳಿ, ತ್ರಿಕಣ್ಣೇಶ್ವರಿ ಅಲ್ಲದೆ ಮುಂಬಯಿಯ ಕರ್ನಾಟಕ ಮಲ್ಲ, ಅಕ್ಷಯ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಬಿರುದುಗಳು ಇವರ ಮಡಿಲು ಸೇರಿವೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ರಾಜ್ಯ ಕಂಬಳ ಅಸೋಸಿಯೇಶನಿನ ಅಧ್ಯಕ್ಷ ಡಾ.ಐಕಳಬಾವ ದೇವೀ ಪ್ರಸಾದ್ ಶೆಟ್ಟಿ, ಕರ್ನಾಟಕ ರಾಜ್ಯ ಬೀಜ ಮತ್ತು ಪಾವಯವ ದೃಢೀಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಳ್ಳಾಲ್ ಜೈನ್, ಮೂಡುಬಿದಿರೆ ಸರ್ವೀಸ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಕೆ.ಅಮರನಾಥ್ ಶೆಟ್ಟಿ ಚಾರಿಟೇಬಲ್ ಟ್ರಸ್ಟಿನ ಗೌರವ ಟ್ರಸ್ಟಿ ಅಮರನಾಥ್ ಶೆಟ್ಟಿ, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, ಮುಲ್ಕಿ ಅರಮನೆ ವೆಲ್ಫೇರ್ ಚಾರಿಟೇಬಲ್ ಟ್ರಸ್ಟಿನ ನಿರ್ದೇಶಕ ಗೌತಮ್ ಜೈನ್, ಮೊದಲಾದವರು ಉಪಸ್ಥಿತರಿದ್ದರು.ಡ
ಪ್ರಶಸ್ತಿ ಪ್ರದಾನ ಸಮಾರಂಭದೊಟ್ಟಿಗೆ ಸಾಧಕರ ನೆಲೆಯಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಸಮಾಜ ಸೇವಕ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿಯವರನ್ನು ಗೌರವಿಸಲಾಯಿತು .
ಹಳೆಯಂಗಡಿ ಪ್ರಿಯದರ್ಶಿನಿ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ್ ಬರ್ನಾಡ್ ಸ್ವಾಗತಿಸಿದರು.ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪಂಜ ವಂದಿಸಿದರು. ಕಾರ್ಯಕ್ರಮವನ್ನು ಅರ್ಪಿತಾ ಶೆಟ್ಟಿ ನಿರೂಪಿಸಿದರು.



Related posts

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ 48ನೇ ವಾರದ ಭಜನಾ ಸಂಕೀರ್ತನೆ, ಮಂಗಳೋತ್ಸವ

Mumbai News Desk

ಮುಲ್ಕಿ : ಹೊಸ ಅಂಗಣ ‘ತಿಂಗಳ ಬೆಳಕು’ ಕಾರ್ಯಕ್ರಮದಲ್ಲಿ ಸವೀನ್ ಪಂಬದ ಅವರಿಗೆ ಸನ್ಮಾನ

Mumbai News Desk

ಕೋಡಿಕಲ್‌ ವಿಶ್ವಭಾರತೀ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿಗಾರ್ ಆಯ್ಕೆ

Mumbai News Desk

ಮೂಲ್ಕಿ : ಹರಿಶ್ಚಂದ್ರ ಸಾಲ್ಯಾನ್ ಅವರ 23ನೇ ಕೃತಿ ‘ನುಡಿಮುತ್ತು’ ಬಿಡುಗಡೆ ಕಾರ್ಯಕ್ರಮ

Mumbai News Desk

ಸುರತ್ಕಲ್‌ನಲ್ಲಿ ನಶಾ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಕಾರ್ಯಕ್ರಮ

Mumbai News Desk

ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನ ಅಮ್ಮ ರಕ್ಷೆಯಾಗಿದ್ದಾಳೆ : ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ

Mumbai News Desk