23.5 C
Karnataka
April 4, 2025
ಪ್ರಕಟಣೆ

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಮುಂಬಯಿ, ಸೆ 16: ಶ್ರೀ ವಿಶ್ವಕರ್ಮ ಮಹೋತ್ಸವ.




ಪ್ರತೀವರ್ಷ ಕನ್ಯಾ ಸಂಕ್ರಮಣದಂದು ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಮುಂಬಯಿಯ ಹಿರಿಯ ಸಂಸ್ಥೆಗಳಲ್ಲೊಂದಾದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಆಚರಿಸುತ್ತಾ ಬರುತ್ತಿದ್ದು, ಈ ವರ್ಷವೂ ಸೆಪ್ಟೆಂಬರ್ 16, ಸೋಮವಾರದಂದು ಎಂದಿನ ಸಂಭ್ರಮದೊಂದಿಗೆ ಆಚರಿಸುವ ಸಿದ್ಧತೆಯಲ್ಲಿದೆ.


ಮಲಾಡ್ ಪೂರ್ವದ ದತ್ತ ಮಂದಿರ ರೋಡ್ ಶ್ರೀ ಸ್ವಾಮಿನಾರಾಯಣ ಮಂದಿರದ ಸಭಾಗೃಹದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಬೆಳಿಗ್ಗೆ 5.30 ಘಂಟೆಗೆ ಶ್ರೀ ವಿಶ್ವಕರ್ಮ ಹೋಮದೊಂದಿಗೆ ಪ್ರಾರಂಭವಾಗಿ ಬಳಿಕ ಕಲಶ ಪ್ರತಿಷ್ಠಾಪನೆ, ಪ್ರತೀ ಗಂಟೆಗೊಮ್ಮೆ ಪೂಜಾವಿಧಿಗಳು ನಡೆದು ಸಾಯಂಕಾಲ 5.45 ಘಂಟೆಗೆ ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಳ್ಳಲಿದೆ.
ಬೆಳಿಗ್ಗೆ 8.30 ರಿಂದ: ಭಜನಾ ಮಹೋತ್ಸವ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ,ಯುವ ವಿಭಾಗ,ಮಹಿಳಾ ವಿಭಾಗ,
ಶ್ರೀ ಲಲಿತಾಂಬಾ ಭಜನಾ ಮಂಡಳಿ ಬೋರಿವಲಿ,
ಶ್ರೀ ವಿಶ್ವಕರ್ಮ ಕಾಳಿಕಾಂಬ ಭಜನಾ ವೃಂದ ಗೋರೆಗಾಂವ್,ವಿಶ್ವಕರ್ಮ ಮಹಿಳಾ ಬಳಗ ಡೊಂಬಿವಲಿ ಇವರಿಂದ ಭಜನಾ ಸೇವೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸದಸ್ಯರ ಮಕ್ಕಳಿಂದ ನೃತ್ಯ, ಛದ್ಮವೇಷ ಮುಂತಾದ ಕಾರ್ಯಕ್ರಮಗಳು ಜರಗಲಿದೆ.


ಮುಂಬಯಿಯ ಪ್ರಸಿದ್ಧ ಗಾಯಕರಾದ ಪದ್ಮನಾಭ ಸಸಿಹಿತ್ಲು ಅವರ “ಕಲಾಸೌರಭ ಮುಂಬಯಿ” ತಂಡದಿಂದ “ಸಂಗೀತ ರಸ ಸಂಜೆ” ಕಾರ್ಯಕ್ರಮ ಅಪರಾಹ್ನ 3.00 ರಿಂದ ನಡೆಯಲಿದೆ. ಸಂಜೆ 4.30 ಕ್ಕೆ ಸಭಾ ಕಾರ್ಯಕ್ರಮ
ಅಸೋಸಿಯೇಷನ್ ಅಧ್ಯಕ್ಷರಾದ ರವೀಶ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವ ನಡೆಯಲಿದೆ.
ಮಧ್ಯಾಹ್ನ ಮಹಾಪ್ರಸಾದ ಅನ್ನ ಸಂತರ್ಪಣೆ ನಡೆಯಲಿದೆ. ಈ ವರ್ಷವೂ ವಿಶೇಷ ಸಂಭ್ರಮದೊಂದಿಗೆ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಆಚರಿಸುವ ಸಿದ್ಧತೆಗಳಲ್ಲಿ ಸಂಘದ ಕಾರ್ಯಕಾರಿ ಸಮಿತಿ ಮತ್ತು ಎಲ್ಲ ಉಪಸಮಿತಿಗಳ ಸದಸ್ಯರು ತೊಡಗಿಸಿಕೊಂಡಿದ್ದು, ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು-ಮನ-ಧನಗಳೊಂದಿಗೆ ಸಹಕರಿಸಿ ಮಹೋತ್ಸವವನ್ನು ಯಶಸ್ವಿಗೊಳಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಸೋಸಿಯೇಷನ್ ಕಾರ್ಯದರ್ಶಿಗಳಾದ ಶರತ್ ಜಿ ಆಚಾರ್ಯ ಮತ್ತು ಪ್ರಸಾದ್ ಆಚಾರ್ಯ ಮತ್ತಿತರ ಪದಾಧಿಕಾರಿಗಳು. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಜಾತ ಜಿ ಆಚಾರ್ಯ ಮತ್ತು ಪದಾಧಿಕಾರಿಗಳು, ಯುವ ವಿಭಾಗದ ಕಾರ್ಯಧ್ಯಕ್ಷ ಸಂದೇಶ ಜನಾರ್ಧನ್ ಆಚಾರ್ಯ ಮತ್ತಿತರ ಪದಾಧಿಕಾರಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.

.

Related posts

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ, ಫೆ.10ರಂದು ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಶನಿ ಮಹಾಪೂ ಜೆ.

Mumbai News Desk

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,

Mumbai News Desk

ಜೂನ್ 25 ರಂದು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಿಸಲು ಸ್ವರ್ಣ ಸಂಕಲ್ಪ

Mumbai News Desk

ಆಮ್ಮೀ ರಂಗಕರ್ಮಿ, ಮುಂಬೈ ತಂಡದ- ಅ. 15, 17 ಮತ್ತು 18  ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೊಂಕಣಿ ನಾಟಕ ಪ್ರದರ್ಶನ.

Mumbai News Desk

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಡಿ.30 ಕ್ಕೆ 26ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk