ಮಲಾಡ್. ಸೆ. 22: ಮಲಾಡ್ ಕನ್ನಡ ಸಂಘ ರಿ. 4ಬಿ-21, ಯುನಿಟಿ ಅಪಾರ್ಟ್ಮೆಂಟ್ ಬಫ್ಹೀರಾ ನಗರ ಮಾರ್ವೆ ರೋಡ್, ಮಲಾಡ್(ಪ), ಇದರ 23ನೇ ವಾರ್ಷಿಕ ಮಹಾಸಭೆಯು ತಾರೀಕು 29. 09.2024 ರವಿವಾರ ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಸಂಘದ ಕಚೇರಿಯ ರಮಾನಾಥ್ ಪಯ್ಯಡೆ ಸ್ಮಾರಕ ಕಿರು ಸಭಾಗೃಹದಲ್ಲಿ ಸಂಘದ ಅಧ್ಯಕ್ಷರಾದ ಅಡ್ವೊಕೇಟ್ ಜಗದೀಶ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.
ಪದಾಧಿಕಾರಿಗಳು, ಸರ್ವ ಸದಸ್ಯರು ಕ್ಲಪ್ತ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಂಘದ ಬೆಳವಣಿಗೆಯ ಕಾರ್ಯಕಲಾಪದ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಿ ಸಹಕರಿಸಬೇಕಾಗಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಆಶಾಲತ ಎಸ್ ಕೋಟ್ಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಂಘದ ವಾರ್ಷಿಕ ವರದಿಯನ್ನು ಕ್ಲಪ್ತ ಸಮಯದಲ್ಲಿ ಸದಸ್ಯರಿಗೆ ರವಾನಿಸಲಾಗಿದೆ.
.
.