
ಮುಂಬೈನ ಮೊದಲ ಭೂಗತ(Undergound )ಮೆಟ್ರೋ ಅಕ್ಟೋಬರ್ ನಲ್ಲಿ ಪ್ರಾರಂಭವಾಗಲಿದ್ದು ಹಂತ ಹಂತವಾಗಿ ಕಾರ್ಯಚರಣಿ ಆರಂಭಿಸಲಿದೆ. ಒಟ್ಟು 37,276 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು 2025 ರಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯರಂಭ ಮಾಡುವ ಸಾಧ್ಯತೆ ಇದೆ.
ಮುಂಬೈ ಮೆಟ್ರೋ ಲೈನ್ 3ರ ಮೊದಲ ಹಂತವು ಆರೆ ಡಿಪೋ (Aarey ) ಮತ್ತು ಬಾಂದ್ರ ಕುರ್ಲಾ ಕಾಂಪ್ಲೆಕ್ಸ್(BKC) ನಡುವೆ 12. 44 ಕಿಲೋ ಮೀಟರ್ ವ್ಯಾಪಿಸಿದ್ದು, ಅಕ್ಟೋಬರ್ ಮೊದಲ ವಾರ ಇದರ ಉದ್ಘಾಟನೆಯಾಗಲಿದೆ, ಎಂದು ಮುಂಬೈ ಮೆಟ್ರೋ ರೈಲು ನಿಗಮದ (MMRCL) ಅಧಿಕಾರಿಗಳು ದೃಢಪಡಿಸಿದ್ದಾರೆ.

ಎಂ ಎಂ ಆರ್ ಸಿ ಎಲ್ ಎರಡು ಹಂತದಲ್ಲಿ ಮುಂಬೈ ಲೈನ್ 3ನ್ನು ಅಭಿವೃದ್ಧಿಗೊಳಿಸುತ್ತಿದೆ. ಮೊದಲನೇ ಹಂತದಲ್ಲಿ ಆರೇ ಡಿಪೋದಿಂದ ಬಿ ಕೆ ಸಿ, ಎರಡನೇ ಹಂತದಲ್ಲಿ ಬಿಕೆಸಿಯಿಂದ ಕೊಲಬಾ (21.06KM)ವರೆಗೆ ವಿಸ್ತರಿಸುತ್ತದೆ.
ಈ ಯೋಜನೆಗೆ ಒಟ್ಟು 37,276 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಇದು ನಗರದ ಅತ್ಯಂತ ದುಬಾರಿ ಮೆಟ್ರೋ ವಿಸ್ತರಣೆಯಾಗಲಿದೆ. ಮುಂಬೈ ಮೆಟ್ರೋ 3ರ ಎರಡನೇ ಹಂತದ ಕಾರ್ಯಾಚರಣೆ 2025ರ ಮಾರ್ಚ್ ಮತ್ತು ಮೇ ನಡುವೆ ಆರಂಭವಾಗಲಿದ್ದು, ಒಮ್ಮೆ ಯೋಜನೆ ಪೂರ್ಣಗೊಂಡರೆ ಲಕ್ಷಾಂತರ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ.
ಎಂಎಂಆರ್‌ಸಿಎಲ್ ಅಧಿಕಾರಿಗಳು ಮೊದಲ ಹಂತದ ಟಿಕೆಟ್ ದರವನ್ನು 10 ರಿಂದ ರೂ.50 ಗಳ ನಡುವೆ ನಿಗದಿಪಡಿಸಿದ್ದು, ಕೊಲಬಾ – ಆರೆ ತನಕದ ಪ್ರಯಾಣಕ್ಕೆ 70 ರೂಪಾಯಿ ದರ ನಿಗದಿ ಪಡಿಸುವ ಸಾಧ್ಯತೆಯಿದೆ.
ಕೊಲಬಾದಿಂದ ಆರೆ ತನಕ 33.5 ಕಿಲೋಮೀಟರ್ ನ ವಿಸ್ತರಣೆಯ ಮೆಟ್ರೋ 3 ಪೂರ್ಣ ಪ್ರಮಾಣದಲ್ಲಿ ಕಾರ್ಯರಂಭಿಸಿದಾಗ ಮುಂಬೈಗರು ತಮ್ಮ ಪ್ರಯಾಣದ ಸಮಯವನ್ನು ಉಳಿಸಬಹುದು.
.