24.7 C
Karnataka
April 3, 2025
ಪ್ರಕಟಣೆ

ಸಾಂತಾಕ್ರೂಸ್ :  ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ಅ 3 ರಿಂದ 11 ವರೆಗೆ ನವರಾತ್ರಿ ಉತ್ಸವ.



ಮುಂಬಯಿ, ಅ1. ಉಪನಗರ ಸಾಂತಾಕ್ರೂಸ್ (ಪ.), ಮಿಲನ್ ಸಬ್ ವೇ ರೋಡ್, ಆಶಾ ಚಾಳ್‌ನಲ್ಲಿ ಶ್ರೀ  ಮಂತ್ರ ದೇವಿಯ ಆರಾಧಕ, ಧಾರ್ಮಿಕ ಚಿಂತಕ ಕುತ್ಯಾರು ವಾಸುದೇವ ಬಂಜನ್ ಮಾರ್ಗದರ್ಶನದಲ್ಲಿ ಸ್ಥಾಪಿಸಿರುವ ಶ್ರೀಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಆಡಳಿತದ ಶ್ರೀಮಂತ್ರ ದೇವಿ ಕ್ಷೇತ್ರದಲ್ಲಿ ಅ3 ರಿಂದ 11 ವರೆಗೆ ದಸರಾ ಮಹೋತ್ಸವ ದ ಅಂಗವಾಗಿ ಪ್ರತಿದಿನ ಭಜನೆ. ವಿವಿಧ. ಅನ್ನ ಸಂತರ್ಪಣೆ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ ನಿತ್ಯ ಪೂಜೆ ಬಳಿಕ ಭಜನೆ ಅನಂತರ ದೇವಿ ಗ್ರಂಥ ಪಾರಾಯಣ ಮಧ್ಯಾಹ್ನ ಮಹಾಪೂಜೆ, ಆನಂತರ 12 ಗಂಟೆಯಿಂದ 3 ಗಂಟೆವರೆಗೆ ಅನ್ನಸಂಪರ್ಪಣೆ. ರಾತ್ರಿ ಭಜನೆ ಮಂಗಳಾರತಿ ನಡೆಯಲಿದೆ 

ಅ 11 ರಂದು ಶುಕ್ರವಾರ ಬೆಳಿಗ್ಗೆ ನವಮಿ ಹೋಮ. ಭಜನೆ. ಮಂಗಳಾರತಿ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

. ಪ್ರತಿದಿನ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಿ. ತನು, ಮನ, ಧನದೊಂದಿಗೆ ಸಹಕರಿಸಬೇಕಾಗಿ ಮೊತ್ತೇಸರರಾದ ವಾಸುದೇವ ಬಂಜನ್ . ಹಾಗೂ ಅಧ್ಯಕ್ಷರು, ಟ್ರಸ್ಟಿ, ಮಧ್ಯಸ್ಥರು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಭಕ್ತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts

ನ.18 ರಂದು ವಿಕ್ರೋಲಿ ಯಲ್ಲಿ “ಪುದರ್ ದಿದಾಂಡ್!!!!”

Mumbai News Desk

ರಾಜಲಕ್ಷ್ಮೀ ಕೋ – ಆಪರೇಟ್ ಕ್ರಿಡಿಟ್ ಸೊಸೈಟಿಯ 40ನೆಯ ವಾರ್ಷಿಕ ಸಭೆ

Mumbai News Desk

ಜ .7: ಏಕ ವಿಂಶತಿ ವರ್ಷದ ಮಕ್ಕಳ ವಾರ್ಷಿಕ ಪರ್ವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಸಂಭ್ರಮಾಚರಣೆಯಲ್ಲಿ ಚಿಣ್ಣರಬಿಂಬ

Mumbai News Desk

ವಸಾಯಿ ಕರ್ನಾಟಕ ಸಂಘ : ಸ್ವಾತಂತ್ರೋತ್ಸವ ಸಂಭ್ರಮ, ದತ್ತು ಸ್ಪೀಕರ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Mumbai News Desk

ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಕೋಟೆ , ನಾಲಸೋಪರ ಜೂನ್ 19ಕ್ಕೆ ಶ್ರೀ ನಾಗದೇವರ ಪ್ರತಿಷ್ಟಾಪನ ದಿನಾಚರಣೆ

Mumbai News Desk

ಮಲಾಡ್  ಪೂರ್ವ   ಶ್ರೀ ಮೂಕಾಂಬಿಕ ಮಂದಿರ : ಜೂ 9 ರಂದು   ಪ್ರತಿಷ್ಠಾ ಮಹೋತ್ಸವ.

Mumbai News Desk