
ಚಿತ್ರ ವರದಿ : ಸುಭಾಷ್ ಶಿರಿಯ
ಮುಂಬಯಿ:ಅ.20, ಮಹಾನಗರ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಎಸೋಸಿಯೇಶನ್, ಮುಂಬಯಿ ಇದರ 2024-27ನೇ ಸಾಲಿನ ಆಡಳಿತ ಮಂಡಳಿಗೆ ಅಕ್ಟೋಬರ್ 13ರಂದು ನಡೆದ ಚುನಾವಣೆಯಲ್ಲಿ, ಹಾಲಿ ಅಧ್ಯಕ್ಷ ಹರೀಶ್ ಜಿ. ಅಮೀನ್, ನೇತೃತ್ವದ ಸ್ವಾಭಿಮಾನಿ ಬಿಲ್ಲವವರು ತಂಡ 24 ಸ್ಥಾನಗಳನ್ನು ಗೆದ್ದುಕೊಂಡಿದೆ. ಜಯ ಸಿ ಸುವರ್ಣ ಅಭಿಮಾನಿ ತಂಡವು 6 ಸ್ಥಾನಗಳನ್ನು ಪಡೆದಿದೆ. ಎಂದು ಚುನಾವಣಾ ಅಧಿಕಾರಿ ವರದ್ ಉಳ್ಳಾಲ್ ಅವರು ತಿಳಿಸಿದ್ದಾರೆ. ಅವರು ಅಕ್ಟೋಬರ್ 20 ರಂದು ಬೆಳಿಗ್ಗೆ ಬಿಲ್ಲವ ಭವನದಲ್ಲಿ ಜರಗಿದೆ ವಿಶೇಷ ಮಹಾ ಸಭೆಯಲ್ಲಿ 2024-27ನೇ ಸಾಲಿನ ಅಸೋಸಿಯೇಷನ್ ಆಡಳಿತ ಮಂಡಳಿಗೆ ಅಕ್ಟೋಬರ್ 13ರಂದು ಜರಗಿದ ಚುನಾವಣೆಯಲ್ಲಿ ಚುನಾಯಿತರಾದ ಅವರ ಹೆಸರನ್ನು ಘೋಷಿಸಿದರು. ಅದರಂತೆ ಸ್ವಾಭಿಮಾನಿ ಬಿಲ್ಲವ ತಂಡದ ನೇತೃತ್ವ ವಹಿಸಿದ ಹರೀಶ್ ಜಿ ಅಮೀನ್, ಪುರುಷೋತ್ತಮ್ ಎಸ್ ಕೋಟ್ಯಾನ್ ಮೋಹನ್ ಸಿ ಕೋಟ್ಯಾನ್, ಶಕುಂತಲಾ ಕೆ ಕೋಟ್ಯಾನ್, ಸದಾನಂದ ಎಂ ಅಮೀನ್, ಧರ್ಮಪಾಲ್ ಜಿ ಅಂಚನ್, ಸುರೇಶ್ ಆರ್ ಅಂಚನ್, ಲತಾ ವಿ ಬಂಗೇರ, ಸದಾಶಿವ ವೈ ಕೋಟ್ಯಾನ್, ನವೀನ್ ಎಲ್ ಬಂಗೇರ, ಕೇಶವ ಕೆ ಕೋಟ್ಯಾನ್, ಭಾರತಿ ಎ ಅಂಚನ್, ಸುರೇಶ್ ಕುಮಾರ್ ಕದ್ರಿ , ಹರಿಶ್ಚಂದ್ರ ಜಿ ಕುಂದರ್, ನಿಲೇಶ್ ಬಿ. ಪೂಜಾರಿ, ಜನಾರ್ಧನ ಪಿ ಅಮೀನ್, ಜಯರಾಮ್ ಎಂ ಪೂಜಾರಿ, ಶಶಿಕಲಾ ಎಸ್ ಕೋಟ್ಯಾನ್, ಹರೀಶ್ ಜಿ ಪೂಜಾರಿ, ನವೀನ್ ಎಂ ಪೂಜಾರಿ, ಗೋಪಾಲಕೃಷ್ಣ ಆರ್ ಸಾಲಿಯನ್, ರವಿ ಎಸ್ ಸನಿಲ್, ರತ್ನಾಕರ್ ಎಸ್ ಅಂಚನ್, ರಾಜೇಶ್ ಜೆ ಬಂಗೇರ, ಯೋಗೇಶ್ ಎನ್ ಪೂಜಾರಿ, ಶಂಕರ್ ಡಿ ಪೂಜಾರಿ, ಹರೀಶ್ ಜಿ ಸಾಲ್ಯಾನ್, ಬಬಿತಾ ಜೆ ಕೋಟ್ಯಾನ್, ಶಂಕರ್ ಎಸ್ ಪೂಜಾರಿ, ಮಹೇಶ್ ಆರ್ ಕರ್ಕೇರ, ಮೊದಲಾದವರು ವಿಜೇತರ ರಾಗಿರುವರೆಂದು ಘೋಷಿಸಿದರು.

ಚುನಾವಣೆ ಮುಖ್ಯ ಅಧಿಕಾರಿ ವರದ್ ಉಳ್ಳಾಲ್ ಅವರು ವಿಜೇತ ಸದಸ್ಯರುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಪ್ರಮಾಣ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಅಧಿಕಾರಿ ವರದ್ ಉಳ್ಳಾಲ್ ವರು ಸಂಘ ಸಂಸ್ಥೆಗಳಲ್ಲಿ ಚುನಾವಣೆ ನಡೆಯುವುದು ತಪ್ಪಲ್ಲ. ಇದು ಸದಸ್ಯರನ್ನು ಆಯ್ಕೆ ಮಾಡಲು ಸರಿಯಾದ ಮಾರ್ಗವಾಗಿದೆ. ಆದರೆ ಚುನಾವಣೆಯ ನಂತರ ನಾವೆಲ್ಲರೂ ಒಂದೇ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಸಂಘದ ಬೆಳವಣಿಗೆಗಾಗಿ ಸಂಪೂರ್ಣವಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು. ಸಮಾಜದ ಅಭಿವೃದ್ಧಿ ನಮ್ಮ ಮುಖ್ಯ ಉದ್ದೇಶವಾಗಿರಬೇಕು ಎಂದರು. ಈ ಸಂದರ್ಭದಲ್ಲಿ ಚುನಾವಣಾ ಕಾರ್ಯ ಪ್ರಕ್ರಿಯೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿರುವುದಕ್ಕಾಗಿ ಚುನಾವಣಾಧಿಕಾರಿ ವರದ್ ಉಳ್ಳಾಲ್ ಹಾಗೂ ಜಯ ಪೂಜಾರಿ, ಮತ್ತು ನವೀನ್ ಚಂದ್ರ ಅಮೀನ್ ಅವರನ್ನು ಹರೀಶ್ ಜಿ ಅಮೀನ್ ಅವರು ಅಭಿನಂದಿಸಿದರು. ನಂತರ ಬಿಲ್ಲವರ ಎಸೋಸಿಯೇಶನ್ ಸದಸ್ಯರಿಂದ ಹಾಗೂ ವಿವಿಧ ಸ್ಥಳೀಯ ಸಮಿತಿ ವತಿಯಿಂದ ಮತ್ತು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹರೀಶ್ ಜಿ ಅಮೀನ್ ಅವರು ಅಸೋಸಿಯೇಷನ್ ಚುನಾವಣೆಯು ಉತ್ತಮ ರೀತಿಯಲ್ಲಿ ಜರಗಿತು. ಅನಿವಾರ್ಯ ಕಾರಣಗಳಿಂದಾಗಿ ಚುನಾವಣೆ ನಡೆಸಬೇಕಾಗಿ ಬಂತು. ಆದರೆ ಇಂದು ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಕೂಡಿ ಅಸೋಸಿಯೇಷನ್ ಪ್ರಗತಿಗಾಗಿ, ಸಮಾಜದ ಮಕ್ಕಳ ಭವಿಷ್ಯತ್ಯಾಗಿ ಉತ್ತಮ ಕಾರ್ಯ ಯೋಜನೆಗಳೊಂದಿಗೆ ಸೇರಿ ಕೆಲಸ ಮಾಡುವ. ನಮ್ಮ ಕನಸಿನ ಯೋಜನೆಗಳಾದ ಉತ್ತಮ ಪ್ರತಿಷ್ಠಿತ ವಿದ್ಯಾಸಂಸ್ಥೆಗಳನ್ನು ನಿರ್ಮಾಣ ವಾಗಬೇಕಾಗಿದೆ. ಕೆಲವು ಸ್ಥಳೀಯ ಕಚೇರಿಗಳ ನವೀಕರಣ ಆಗಬೇಕಾಗಿದೆ. ಬಿಲ್ಲವರಲ್ಲಿ ಜನಬಲ ತುಂಬಾ ಇದೆ ಇದರ ಸದುಪಯೋಗವನ್ನು ನಾವು ಮಾಡಬೇಕಾಗಿದೆ. ಮುಂದಿನ ಹಲವಾರು ಕಾರ್ಯಯೋಜನೆಗಳು ಯಶಸ್ವಿಯಾಗಿ ನೆರವೇರಿಸುವುದು ನಮ್ಮ ಉದ್ದೇಶವಾಗಿದೆ ಎಂದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದು.
ಈ ಸಂದರ್ಭದಲ್ಲಿ ಸ್ವಾಭಿಮಾನಿ ತಂಡದ ನೇತೃತ್ವವನ್ನು ವಹಿಸಿದ ಹರೀಶ್ ಜಿ ಅಮೀನ್ ಅವರನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಿದರು.