28.8 C
Karnataka
April 3, 2025
ಮುಂಬಯಿ

ಮುಂಬೈ ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣ : ಗ್ಯಾಂಗ್ ಸ್ಟರ್ ಛೋಟಾ ರಾಜನ್ ಗೆ ಜಾಮೀನು



ಹೋಟೆಲ್​ ಉದ್ಯಮಿ ಜಯ್​ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್​ಸ್ಟರ್ ಛೋಟಾ ರಾಜನ್​ಗೆ ಜಾಮೀನು ಮಂಜೂರು ಮಾಡಲಾಗಿದೆ. 2001ರಲ್ಲಿ ಮುಂಬೈಯ ಹೋಟೆಲ್ ಉದ್ಯಮಿ ಜಯ್​ಶೆಟ್ಟಿ ಕೊಲೆಯಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲವು ಕಳೆದ ಮೇ 30ರಂದು ಛೋಟಾ ರಾಜನ್​ಗೆ ಜೀವಾವಧಿ ಶಿಕ್ಷೆ ಘೋಷಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್​ಗೆ ಛೋಟಾ ರಾಜನ್ ಮೇಲ್ಮನವಿ ಸಲ್ಲಿಸಿದ್ದ, ಜಾಮೀನು ಮಂಜೂರು ಮಾಡಿ ಅಧೀನ ನ್ಯಾಯಾಲಯದ ಶಿಕ್ಷೆಯನ್ನು ರದ್ದುಪಡಿಸುವಂತೆ ಅರ್ಜಿಯಲ್ಲಿ ಛೋಟಾ ರಾಜನ್ ಕೋರಿದ್ದ. ಸಧ್ಯಕ್ಕೆ ಛೋಟಾ ರಾಜನ್​ಗೆ ಬಾಂಬೆ ಹೈಕೋರ್ಟ್​ನ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ. ಜಾಮೀನಿಗಾಗಿ ಒಂದು ಲಕ್ಷ ರೂ. ಭದ್ರತಾ ಬಾಂಡ್ ನೀಡಲು ಆದೇಶಿಸಲಾಗಿದೆ.

ಆದರೆ ಛೋಟಾ ರಾಜನ್ ಜೈಲಿನಿಂದ ಹೊರ ಬರಲು ಸಾಧ್ಯವಿಲ್ಲ. ಏಕೆಂದರೆ ಉಳಿದ ಪ್ರಕರಣಗಳಲ್ಲೂ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಜಯ ಶೆಟ್ಟಿ ಅವರು ಕೇಂದ್ರೀಯ ಮುಂಬೈನ ಗಾಂಧೇವಿಯಲ್ಲಿ ಗೋಲ್ಡನ್​ ಕ್ರೌನ್ ಎನ್ನುವ ಹೋಟೆಲ್​ನ್ನು ನಡೆಸುತ್ತಿದ್ದರು. 2001ರ ಮೇ 4 ರಂದು ಛೋಟಾ ರಾಜನ್ ಗ್ಯಾಂಗ್​ನ ಇಬ್ಬರು ಶೂಟರ್​ಗಳು ಜಯ್​ಶೆಟ್ಟಿಯನ್ನು ಕೊಲೆ ಮಾಡಿದ್ದರು ಎನ್ನುವ ಆರೋಪವಿದೆ. ಇದಕ್ಕೂ ಮುನ್ನ ಛೋಟಾ ರಾಜನ್ ಗ್ಯಾಂಗ್​ಗೆ ಸೇರಿದ ಹೇಮಂತ್ ಪೂಜಾರಿ ಎನ್ನುವ ವ್ಯಕ್ತಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಜಯ್​ಶೆಟ್ಟಿ ಹಣವನ್ನು ನೀಡದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎನ್ನುವುದು ಪೊಲೀಸರ ವಾದವಾಗಿದೆ. ಸಧ್ಯಕ್ಕೆ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ಖ್ಯಾತ ಪತ್ರಕರ್ತ ಜೇ ಡೇ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

Related posts

ಮುಂಬೈಯ ಪತ್ರಕರ್ತರ ಹೆಸರಲ್ಲಿ ನಡೆಸುತ್ತಿರುವ ಸಂಘಟನೆ ಯಲ್ಲಿ ಗೊಂದಲ.

Mumbai News Desk

ತುಳು ಸಂಘ ಬೊರಿವಲಿ ; ವಾರ್ಷಿಕ ವಿಹಾರ ಕೂಟ

Mumbai News Desk

ಸಹಾರ್‌ಗಾಂವ್ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ – 36ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಮಂಡಲ ಪೂಜೆ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀತಮ್ ಮೋಹನ್ ಬಂಗೇರ ಗೆ ಶೇ 88 ಅಂಕ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ, ಡೊಂಬಿವಲಿ ಕಚೇರಿಯ ವತಿಯಿಂದ ವಿಹಾರ ಕೂಟ

Mumbai News Desk

ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗ ದಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk