23.5 C
Karnataka
April 4, 2025
ಪ್ರಕಟಣೆ

ನವೆಂಬರ್ 23ರಿಂದ ಸತತ 17ನೇ ವರ್ಷದ ಮುಂಬಯಿ ಪ್ರವಾಸದಲ್ಲಿ ಕರಾವಳಿಯ ಪ್ರಸಿದ್ಧ ನಾಟಕ ತಂಡಕಿನ್ನಿಗೋಳಿ



ಭಾವನಾತ್ಮಕ ಸನ್ನಿವೇಶ, ಕಂಬಳ ಕೋಣಗಳ ಯಜಮಾನನ ಬದುಕಿನ ನಡೆಗಳ ಜತೆ ಭರಪೂರ ಹಾಸ್ಯದೌತಣದ ತುಳು ನಾಟಕ ಕಿನ್ನಿಗೋಳಿ ವಿಜಯಾ ಕಲಾವಿದರ ಅಮ್ಮು ಆಮುಂಡರಾ..?

ಕಳೆದ 27 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ಸಕ್ರಿಯರಾಗಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿ ವಿಜಯಾ ಕಲಾವಿದರು ನಾಟಕ ಸಂಸ್ಥೆಯು ನವಂಬರ್ 23ರಿಂದ ಸತತ 17ನೇ ವರ್ಷದ ಮುಂಬ ಪ್ರವಾಸ ನಡೆಸಲಿದ್ದು ಒಟ್ಟು 9 ದಿನಗಳಲ್ಲಿ ತಂಡ ಮುಂಬ, ಪೂನಾ ಸಹಿತ ವಿವಿಧೆಡೆ 11 ಪ್ರದರ್ಶನ ನಡೆಸಲಿದೆ.

ಈ ಬಾರಿ “ಅಮ್ಮು ಆಮುಂಡರಾ..?”ತಂಡದ ನಿರಂತರ ಬರಹಗಾರ ಹರೀಶ್ ಪಡುಬಿದ್ರಿಯವರ ರಚನೆಯ ವಿಜಯಕುಮಾರ್ ಕೊಡಿಯಾಲ್‌ಬಲ್ ನಿರ್ದೇಶನದ ವಿಜಯಾ ಕಲಾವಿದರ ಈ ಬಾರಿಯ “ಅಮ್ಮು ಆಮುಂಡರಾ” ತುಳು ನಾಟಕ ಈಗಾಗಲೇ ಊರಿನ ಗಣೇಶೋತ್ಸವ ಹಾಗೂ ನವರಾತ್ರಿಯ ಸಮಾರಂಭಗಳ ಸಹಿತ ವಿವಿಧೆಡೆ 7 ಪ್ರದರ್ಶನ ಕಂಡಿದ್ದು ಕಲಾಭಿಮಾನಿಗಳ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.ನಾಟಕದಲ್ಲೇನಿದೆ…?ಖ್ಯಾತ ನಾಟಕಕಾರ ಹರೀಶ್ ಪಡುಬಿದ್ರಿಯವರ ಈ ಹಿಂದಿನ ನಾಟಕಗಳಂತೆ ಈ ನಾಟಕದಲ್ಲಿಯೂ ನಿರಂತರ ಹಾಸ್ಯ ಸನ್ನಿವೇಶಗಳಿದ್ದು ಹಾಸ್ಯದ ಪಂಚ್ ಸಂಭಾಷಣೆಗಳು, ಹಾಡಿನ ಕ್ಲಿಪ್ಪಿಂಗ್‌ಗಳು ಮುದ ನೀಡುತ್ತವೆ. ಹಾಸ್ಯ ನಿರಂತರವಾಗಿದ್ದರೂ ಈ ನಾಟಕದಲ್ಲಿ ಮನ ಕಲಕುವ ಸೆಂಟಿಮೆಂಟ್ ಸನ್ನಿವೇಶಗಳನ್ನು ಸೃಷ್ಠಿಸುವ ಅಮ್ಮುವಿನ ಪಾತ್ರ, ಆಕೆಯ ತಂದೆ ಕಂಬಳ ಕೋಣಗಳ ಯಜಮಾನ ಕಲ್ಲಗುತ್ತು ಜಗಜೀವನದಾಸರ ಪಾತ್ರಗಳು ಈ ನಾಟಕದ ಜೀವನಾಡಿ. ಅಮ್ಮುನ ಪಾತ್ರ ನಿರ್ವಹಿಸುವ ಕಾನೂನು ವಿದ್ಯಾರ್ಥಿನಿಯಾಗಿರುವ ಕೃತಿಕಾ ಉಲ್ಲಂಜೆ ಹಾಗೂ ಆಕೆಯ ತಂದೆ ಕಂಬಳ ಕೋಣಗಳ ಯಜಮಾನನಾಗಿ ದ್ವಂದ್ವದಲ್ಲಿ ಬದುಕುವ ಜಗಜೀವನದಾಸನ ಪಾತ್ರ ನಿರ್ವಹಿಸುವ ಶಶಿ ಗುಜರನ್ ಪಡುಬಿದ್ರೆ ನಾಟಕ ಮುಗಿದ ಬಳಿಕವೂ ಕಲಾಭಿಮಾನಿಗಳ ಮನಸಲ್ಲಿ ಅಚ್ಚಳಿಯದೇ ನಿಲ್ಲುತ್ತಾರೆ. ಅಂತಹ ಸೆಂಟಿಮೆಂಟ್ ಸನ್ನಿವೇಶಗಳು, ಸಂಭಾಷಣೆಗಳು ಈ ನಾಟಕವನ್ನು ಗೆಲ್ಲಿಸಿವೆ.ಜಗಜೀವನದಾಸನ ಪತ್ನಿ ಸುಗುಣನ ಪಾತ್ರ ನಿರ್ವಹಿಸಿದ ಅಚ್ಚುತ ಮಾರ್ನಾಡ್, ಮಗ ಪೃಥ್ವಿರಾಜನ ಪಾತ್ರ ನಿರ್ವಹಿಸಿದ ಭಾಸ್ಕರ ಪಕ್ಷಿಕೆರೆ, ಆತನ ಗರ್ಲ್ ಫ್ರೆಂಡ್ ಅನುನ ಪಾತ್ರ ನಿರ್ವಹಿಸಿದ ದೀಕ್ಷಿತಾ ಕೆರೆಕಾಡು, ಆಕೆಯ ತಂದೆ ಪುಷ್ಪರಾಜನ ಪಾತ್ರದಲ್ಲಿ ಕಾಣಿಸಿಕೊಂಡ ರತ್ನಾಕರ ಶೆಟ್ಟಿ ಮೂಲ್ಕಿ ಗಮನ ಸೆಳೆವ ಆಭಿನಯಗಳೊಂದಿಗೆ ಈ ನಾಟಕದ ಕಥಾಸಾರಾಂಶಕ್ಕೆ ಜೀವ ತುಂಬಿದ್ದಾರೆ. ಜಗಜೀವನದಾಸರ ಅಳಿಯ ಕಂಬಳ ಕೋಣಗಳ ಓಟಗಾರ ಸೂರಜ್‌ನ ಪಾತ್ರ ನಿರ್ವಹಿಸಿದ ನರೇಂದ್ರ ಕೆರೆಕಾಡು ಕಂಬಳ ಕ್ಷೇತ್ರದ ಬಗ್ಗೆ ಮಾರ್ಮಿಕ ಸಂಭಾಷಣೆಗಳ ಮೂಲಕ ಕಂಬಳದ ಉಳಿವಿನ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ಹಾಸ್ಯ ವಿಭಾಗದಲ್ಲಿ ನಾಟಕಕಾರ ಕಾಳಿದಾಸನಾಗಿ ಭಗವಾನ್ ಸುರತ್ಕಲ್ ಹಾಗೂ ಬಾಗಲಕೋಟೆ ಹುಲಿಗವ್ವಳಾಗಿ ಕಾಣಿಸಿಕೊಂಡ ಉದಯಕುಮಾರ್ ಹಳೆಯಂಗಡಿ ಜೋಡಿ ಇಡೀ ನಾಟಕದುದ್ದಕ್ಕೂ ರಂಜನೀಯ ಹಾಸ್ಯಗಳ ಹೊನಲು ಹರಿಸುತ್ತದೆ. ಇವರ ಜತೆ ಜಾನಪದ ನೃತ್ಯ ಕಲಾವಿದ ಶ್ಯಾಮಸುಂದರನಾಗಿ ಹರೀಶ್ ಪಡುಬಿದ್ರಿ ಹಾಗೂ ಶ್ಯಾಮಸುಂದರನ ಪತ್ನಿ ಭರತನಾಟ್ಯ ಕಲಾವಿದೆ ನರ್ತನಳಾಗಿ ಅಭಿನಯಿಸಿದ ಚಿತ್ರಲೇಖ ಭಗವಾನ್ ಜೋಡಿಯೂ ಭರಪೂರ ಹಾಸ್ಯವನ್ನು ಸೃಷ್ಠಿಸಿದೆ. ಮೇಸ್ತ್ರಿ ಕಿಟ್ಟುವಾಗಿ ರಾಜೇಶ್ ಕಡಂದಲೆ, ಫುಟ್‌ಬಾಲ್ ಕೋಚ್ ವೆಂಕಪ್ಪನಾಗಿ ಸತೀಶ್ ಶಿರ್ವ, ಕಂಬಳ ಕ್ಷೇತ್ರದ ಕೊಂಬು ಊದುವ ಶಂಭುವಾಗಿ ತಂಡದ ನಿರ್ವಾಹಕ ಸುಧಾಕರ ಸಾಲ್ಯಾನ್ ಸಂಕಲಕರಿಯ ಕ್ಷಣ ಕ್ಷಣಗಳಲ್ಲಿ ಹಾಸ್ಯ ಸನ್ನಿವೇಶ ಹಾಗೂ ಸಂಭಾಷಣೆಗಳ ಮೂಲಕ ಈ ನಾಟಕವನ್ನು ರಂಜನೀಯವಾಗಿಸಿದ್ದಾರೆ. ಕಣ್ಣಂಚಿನಲ್ಲಿ ನೀರು ಬರಿಸುವ ಭಾವನಾತ್ಮಕ ಟೈಟಲ್ ಹಾಡು “ಅಮ್ಮು ಆಮುಂಡರಾ..?” ಹಾಗೂ ಇತರ ಪ್ಯಾತೋ ಹಾಡುಗಳನ್ನು ಬರೆದು ನೀಡಿದ ತಂಡದ ನಿರಂತರ ಸಾಹಿತಿ ಅಶೋಕ್ ಪಳ್ಳಿಯವರ ಹಾಡುಗಳು ಈ ನಾಟಕದ ಯಶಸ್ಸಿನ ಪ್ಲಸ್ ಪಾಯಿಂಟ್. ತಂಡದ ಪ್ರಬುದ್ಧ ಸಂಗೀತಕಾರ ದಿನೇಶ್ ಪಾಪು ಮುಂಡ್ಕೂರು ಇವರ ಲಯಬದ್ಧ ಸಂಗೀತ ಹಾಗೂ ಸಂಭಾಷಣೆ-ಸನ್ನಿವೇಶಕ್ಕೆ ತಕ್ಕಂತಹ ಹಿನ್ನಲೆ ಸಂಗೀತ ನಾಟಕವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿದೆ ಎನ್ನಲಡ್ಡಿಯಿಲ್ಲ. ಧ್ವನಿ-ಬೆಳಕು, ರಂಗ-ವರ್ಣಾಲಂಕಾರದ ವ್ಯವಸ್ಥೆಯನ್ನು ಸಂಯೋಜಿಸುವ ಪಿಂಗಾರ ಆರ್ಟ್ಸ್ ಸಾಣೂರು ಇದರ ಮಾಲಕ ಸುರೇಶ್ ಸಾಣೂರು ಬಳಗದ ಸಂಯೋಜನೆಯ ಕಲ್ಲಗುತ್ತು ಮನೆಯ ವಠಾರ, ಕಂಬಳ ಕೋಣಗಳ ದೃಶ್ಯ ಈ ನಾಟಕದ ಕಥಾ ಜೀವಂತಿಕೆಯನ್ನು ಹೆಚ್ಚಿಸಿದೆ.ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಾದದೊಂದಿಗೆ, ಯುಗಪುರುಷದ ಭುವನಾಭಿರಾಮ ಉಡುಪರ ಸಹಕಾರದಲ್ಲಿ, ಮುಂಡ್ಕೂರು ಸಾಯಿನಾಥ ಶೆಟ್ಟಿಯವರ ಊರ ಸಂಚಾಲಕತ್ವ ಹಾಗೂ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್‌ರವರ ಮುಂಬ ಸಂಚಾಲಕತ್ವದಲ್ಲಿ ಶರತ್ ಶೆಟ್ಟಿ ನೇತೃತ್ವದ ವಿಜಯಾ ಕಲಾವಿದರು ನಾಟಕ ತಂಡ ಸುಧಾಕರ ಸಾಲ್ಯಾನ್‌ರವರ ಸಮಗ್ರ ನಿರ್ವಹಣೆ, ಲಕ್ಷ್ಮಣ್ ಬಿ.ಬಿ. ಏಳಿಂಜೆಯವರ ನಿರ್ವಹಣೆಯೊಂದಿಗೆ ನವೆಂಬರ್ 23ರಿಂದ ಮುಂಬ ಪ್ರವಾಸ ಕೈಗೊಳ್ಳಲಿದೆ. “ಅಮ್ಮು ಆಮುಂಡರಾ .?” ಜತೆಗೆ ತಂಡದ ಇನ್ನೊಂದು ಯಶಸ್ವಿ ನಾಟಕ “ತೊಟ್ಟಿಲ್” ಕೂಡಾ ವಿವಿಧ ಸಂಘಟಕರ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳಲಿದೆ. ಮುಂಬನ ತುಳು ನಾಟಕ ಅಭಿಮಾನಿಗಳು ಸಹಕರಿಸಬೇಕೆಂದು ಎಂದು ಮುಂಬ ಸಂಚಾಲಕ ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್ ತಿಳಿಸಿದ್ದಾರೆ.

Related posts

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಮಾ. 8 ರಂದು : ಮಹಾ ಶಿವರಾತ್ರಿ ಆಚರಣೆ

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ,  ಎ13 ; ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ,

Mumbai News Desk

ಫೆ. 10ಕ್ಕೆ ಸಚ್ಚೇರಿಪೇಟೆಯಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ – ಸಂತ ಸಮಾಗಮ

Mumbai News Desk

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ.): ಸೆ. 28ಕ್ಕೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಯಕ್ಷಗಾನ.

Mumbai News Desk

ಡಿ.24 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ, ಅನ್ನ ಸಂತರ್ಪಣೆ.

Mumbai News Desk