
ಮುಂಬಯಿಯ ಖ್ಯಾತ ದೈವ ಪಾತ್ರಿ ಕಲ್ಯಾ ಪ್ರಸಾದ್ ಸಾಲ್ಯಾನ್ ಕುಟುಂಬಸ್ಥರು – ಶ್ರೀ ಕೃಷ್ಣ ನಿವಾಸ, 208, ರತನ್ ಬಾಯಿ ಕಂಪೌಂಡ್, ಶಿಲ್ಪಾ ಹೋಟೆಲ್ ಹಿಂದುಗಡೆ, ಮುಲುಂಡ್ ಚೆಕ್‌ನಾಕಾ, ಥಾಣೆ ಪಶ್ಚಿಮದಲ್ಲಿರುವ ಶ್ರೀ ಮಹಾದೇವಿ ಮಂತ್ರದೇವತೆ ಸನ್ನಿಧಿ (ರಿ.) ಯಲ್ಲಿ
ಆರಾಧಿಸಿಕೊಂಡು ಬಂದಿರುವ ದೇವಿ ಸ್ವರೂಪಿಣಿ ಶ್ರೀ ಮಹಾದೇವಿ ಮಂತ್ರದೇವತೆಯ 2ನೇ ವರ್ಷದ ಗಗ್ಗರ ಸೇವೆ ಯು ನ. 24 ರ ಭಾನುವಾರದಂದು ಸನ್ನಿಧಿಯ ತಳ ಮಜಲಲ್ಲಿರುವ ಶ್ರೀ ವಿಶ್ವನಾಥ ಮಹಾದೇವ ದೇವಸ್ಥಾನ ಆವರಣ, ರತನ್ ಬಾಯಿ ಕಂಪೌಂಡ್‌ನಲ್ಲಿ ಜರುಗಲಿರುವುದು.
ನ. 24ರ ಆದಿತ್ಯವಾರದಂದು ಬೆಳಿಗ್ಗೆ 10:00 ಗಂಟೆಗೆ ಹರಕೆಯ ಬೆಳ್ಳಿಯ ಪ್ರಭಾವಳಿಯನ್ನು ಶ್ರೀ ವಿಶ್ವನಾಥ ಮಹಾದೇವ ದೇವಸ್ಥಾನದಿಂದ ಸನ್ನಿಧಿಯವರೆಗೆ ಮೆರವಣಿಗೆಯಲ್ಲಿ ತಂದು ಒಪ್ಪಿಸುವಿಕೆ, ಮಧ್ಯಾಹ್ನ 12:00 ಗಂಟೆಗೆ ಶ್ರೀ ಮಂತ್ರದೇವತೆಯ ಭಂಡಾರ ಇಳಿಯುವುದು, ಮಧ್ಯಾಹ್ನ 1:00ಕ್ಕೆ ಅನ್ನ ಸಂತರ್ಪಣೆ, ಸಂಜೆ 6:00ರಿಂದ ಗಗ್ಗರ ಸೇವೆ ಜರಗಲಿದೆ.
ಕಟಪಾಡಿ ಅರವೀಪುರ ಮಠದ ಪುರೋಹಿತರಾದ ಚರಣ್ ಶಾಂತಿಯವರ ಮಾರ್ಗದರ್ಶನದಲ್ಲಿ ಹಾಗೂ ಮಧ್ಯಸ್ಥರಾಗಿ ಅಡ್ವಕೇಟ್ ಗುರುದತ್ತ ಆಚಾರ್ಯ, ವಾದ್ಯ ವಾಲಗದಲ್ಲಿ ಮುಕ್ತ ವಿಖ್ಯಾತ್ ಮತ್ತು ಬಳಗ, ಚೆಂಡೆಯಲ್ಲಿ ಆದಿ ಗುರು ಅಸಲ್ಫಾ ಹಾಗೂ ದೈವ ನರ್ತಕರಾಗಿ ರವಿ ಬೋಳ (ಸಿದ್ದು) ಸಹಕರಿಸಲಿದ್ದಾರೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಸಹಕುಟುಂಬರಾಗಿ ಆಗಮಿಸಿ ಶ್ರೀ ಮಂತ್ರದೇವತೆಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಕ್ಷೇತ್ರದ ಮುಖ್ಯಸ್ಥ ಕಲ್ಯಾ ಪ್ರಸಾದ್ ಸಾಲ್ಯಾನ್, ಕುಟುಂಬಸ್ಥರು ಮತ್ತು ಟ್ರಸ್ಟಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ (99678 81073) ಸಂಪರ್ಕಿಸಬಹುದು.
ಕಲ್ಯಾ ಪ್ರಸಾದ್ ಸಾಲ್ಯಾನ್‌ರ ನಿಷ್ಠೆ, ಶ್ರದ್ಧೆ, ಶಿಸ್ತು, ನಿಯಮ ಪಾಲನೆ ಭಕ್ತಿಯನ್ನು ಮನಗಂಡು ಅವರ ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಮನೆಗೆ ಬಂದ ಕಾರಣಿಕ ಶಕ್ತಿಯಾದ ಶ್ರೀ ಮಂತ್ರದೇವತೆಯು ಅಲ್ಲಿ ಶಾಶ್ವತ ನಿಲ್ಲದೇ, ಅವರನ್ನರಸಿಕೊಂಡು ಮುಂಬಯಿ ವಾಸ ಸ್ಥಳದಲ್ಲೇ ನೆಲೆಗೊಳ್ಳುವೆನೆಂದು, ಸೂಚನೆಯಂತೆ ಮುಲುಂಡಿನಲ್ಲಿ 2019 ರಿಂದ ಪ್ರತಿಷ್ಠೆಗೊಳ್ಳುತ್ತಾಳೆ. ಕಳೆದ ಐದು ವರ್ಷಗಳಿಂದ ಪ್ರತೀ ತಿಂಗಳ ಸಂಕ್ರಮಣ ಪೂಜೆ, ವಾರ್ಷಿಕ ಆಟಿ ಅಗೇಲು ಸೇವೆ, ದರ್ಶನ ಸೇವೆ ಸನ್ನಿಧಾನದಲ್ಲಿ ಪಡೆಯುತ್ತಾ, ಪ್ರಸ್ತುತ ಅನೇಕ ಭಕ್ತರು ತಮ್ಮ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಬರುತ್ತಿದ್ದು, ಮಾತ್ರವಲ್ಲದೆ ವಿವಿಧ ಸೇವೆಗಳನ್ನು ಭಕ್ತರು ಸಲ್ಲಿಸುತ್ತಿದ್ದಾರೆ. ಕಳೆದ ಹದಿನೇಳು ವರ್ಷಗಳಿಂದ ನವರಾತ್ರಿ ಮತ್ತು ದಸರಾ ಪೂಜೆ, ಹನ್ನೆರಡು ವರ್ಷಗಳಿಂದ ಗಣೇಶ ಚತುರ್ಥಿಯಂದು ಸನ್ನಿಧಾನದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಐದು ದಿನಗಳ ಪೂಜೆ ನಡೆಯುತ್ತಾ ಬರುತ್ತಿದೆ