
ಕುಲಾಲ ಸಂಘ ಮುಂಬೈ ಇದರ ಅಧ್ಯಕ್ಷರಾಗಿ ಮರು ಆಯ್ಕೆಗೊಂಡ ರಘು ಮೂಲ್ಯ ಪಾದೆಬೆಟ್ಟು ರವರನ್ನು. ಮಂಗಳೂರಿನ ಕುಲಾಲ ಭವನ ಮಂಗಳಾದೇವಿ ಕಚೇರಿಯಲ್ಲಿ ಮುಂಬಯಿ ಕುಲಾಲ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷರಾದ,ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಟ್ರಸ್ಟಿ ಪ್ರೇಮಾನಂದ ಕುಲಾಲ್ ಮತ್ತು ಶ್ರೀ ವೀರನಾರಾಯಣ ದೇವಸ್ಥಾನ
ಮೊಕ್ತೇಸರರಾದ ಗಿರಿದರ್ ಜೆ ಮೂಲ್ಯ ಹೂ ಗುಚ್ಛ ನೀಡಿ ಗೌರವಿಸಿದರು.
ಈ ಸಂದರ್ಭ ಗೌರವ ಅಧ್ಯಕ್ಷ ದೇವದಾಸ್ ಕುಲಾಲ್, ಉಪಾಧ್ಯಕ್ಷ ಡಿ ಐ ಮೂಲ್ಯ,
ಕಾರ್ಯದರ್ಶಿ ಕರುಣಾಕರ ಸಾಲಿಯನ್, ಕೋಶಧಿಕಾರಿ ಜಯ ಅಂಚನ್, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಗಿರೀಶ್ ಬಿ ಸಾಲಿಯಾನ್ ಮತ್ತಿತರru ಸದಸ್ಯರು ಉಪಸ್ಥಿರಿದ್ದರು.