ಗುಜರಾತ್ ರಾಜ್ಯದಲ್ಲಿ ತುಳುವರ ಒಗ್ಗಟ್ಟು, ಭಾಷಾ ಅಭಿಮಾನ ಪ್ರಶಾಂಶನೀಯ: ರತ್ನಾಕರ್ ಶೆಟ್ಟಿ ಮುಂಡ್ಕೂರು
ಕರ್ನಾಟಕ ಸಮಾಜ ಸೂರತ್ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ಸೂರತ್ ನ ಜೀವನ್ ಭಾರತಿ ಸಭಾಂಗಣ, ನಾನ್ಪುರ, ಸೂರತ್ ಇಲ್ಲಿ ನ. 24ರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಂಟರ ಸಂಘ ಮುಂಬಯಿಯ ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ ಸಮಾಜ ಸೇವೆಯು ನಮ್ಮ ಆತ್ಮ ತೃಪ್ತಿಗೆ ಅನುಗುಣವಾಗಿ ಮಾಡಬೇಕು, ಸನ್ಮಾನ ಗೌರವಗಳಿಗಾಗಿ ಮಾಡಬಾರದು,
ಸಮಾಜದ ಜೊತೆ ನಮ್ಮ ವ್ಯವಹಾರವನ್ನು ಕೂಡ ಬಲಿಷ್ಟಗೊಳಿಸಬೇಕು, ಈ ಪರಿಸರದ ತುಳು ಕನ್ನಡಿಗರ ಒಗ್ಗಟ್ಟು ಪ್ರಸಂಶೆನಿಯ, ಈ ದಿನ ಆಯೋಜಿಸಿದ ನೃತ್ಯ ಕಾರ್ಯಕ್ರಮಗಳು, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮವಾಗಿ ಮೂಡಿ ಬಂದಿದೆ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಗುಜರಾತ್ ನ ಈ ರಾಜ್ಯದಲ್ಲೂ ಕೂಡ ಉಳಿಸಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿ ತುಳುಸಂಘ ಬರೋಡ ಇದರ ಅಧ್ಯಕ್ಷರಾದ ಶಶಿಧರ್ ಬಿ ಶೆಟ್ಟಿ, ಮಾತನಾಡುತ್ತಾ ಈ ಸಂಘವು ನಮ್ಮೆಲ್ಲರ ಸಂಘಟನೆಗೆ ಪ್ರೇರಣೆ , ಮತ್ತು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ವರ್ಷ ಯಶಸ್ವಿಯಾಗಿ ನಡೆಯುತ್ತದೆ, ಸದಸ್ಯರ ಒಗ್ಗಟ್ಟು ವಿಭಿನ್ನ ಕಾರ್ಯಕ್ರಮಗಳು ನಡೆಸುತ್ತಾ ತುಳುವರನ್ನು ಕನ್ನಡಿಗರನ್ನು ಒಟ್ಟು ಮಾಡುತ್ತಿದ್ದಾರೆ ಮತ್ತುಮಾತೃಭಾಷೆ ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಭಾರತ್ ಬ್ಯಾಂಕ್ ಮುಂಬಯಿಯ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಮಾತನಾಡಿ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತಂದು ನಮ್ಮ ಸಂಸ್ಕಾರ – ಸಂಸ್ಕೃತಿಯ ಅರಿವು ಮೂಡಿಸಬೇಕು.ನಾವು ಸಮಾಜದ ಜೊತೆಗೂಡಿದಾಗ ನಮ್ಮ ಸಂಸ್ಕಾರದ ಬಗ್ಗೆ, ಘನತೆಯ ಬಗ್ಗೆ ತಿಳಿಯುತ್ತದೆ ಎಂದರು.
ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷರಾದ
ರಾಧಾಕೃಷ್ಣ ಶೆಟ್ಟ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ
ಕನ್ನಡ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ನಮ್ಮ ಸಂಘಟನೆ ಸಕ್ರಿಯವಾಗಿದೆ, ನಮ್ಮ ಬದುಕಿನಲ್ಲಿ ಸಮಯಕ್ಕೆ ಮಹತ್ವ ನೀಡಬೇಕು, ಕನ್ನಡಿಗರು ಯಾವುದೇ ರಾಜ್ಯದಲ್ಲಿದ್ದರೂ ಕೂಡ ಭಾಷೆ ಮತ್ತು ಸಂಸ್ಕಾರವನ್ನು ಉಳಿಸುತ್ತಾರೆ, ಎಂದು ನುಡಿದರು
ವೇದಿಕೆಯಲ್ಲಿ ಕರ್ನಾಟಕ ಸಮಾಜ ಸೂರತ್ ಗೌರವ ಅಧ್ಯಕ್ಷರಾದ ರಾಮಚಂದ್ರ ವಿ ಶೆಟ್ಟಿ, ಶಂಕರ್ ಶೆಟ್ಟಿ(ಅಧ್ಯಕ್ಷರು,ತುಳು ಸಂಘ ಅಂಕಲೇಶ್ವರ) ರವಿನಾಥ್ ಶೆಟ್ಟಿ(ಗೌ.ಅಧ್ಯಕ್ಷರು,ತುಳು ಸಂಘ ಅಂಕಲೇಶ್ವರ) ಬಾಲಕೃಷ್ಣ ಶೆಟ್ಟಿ(ಅಧ್ಯಕ್ಷರು,ಐಸಿರಿ ತುಳು ಸಂಘ,ವಾಪಿ),
ಸದಾಶಿವ ಪೂಜಾರಿ(ಗೌ.ಅಧ್ಯಕ್ಷರು ಐಸಿರಿ ತುಳು ಸಂಘ,ವಾಪಿ) ಅಜಿತ್ ಶೆಟ್ಟಿ(ಅಧ್ಯಕ್ಷರು, ಪಟ್ಲ ಫೌಂಡೇಶನ್ ಗುಜರಾತ್) ಬಾಲಕೃಷ್ಣ ಶೆಟ್ಟಿ(ಗೌ.ಪ್ರ.ಕಾರ್ಯದರ್ಶಿ ತುಳು ಸಂಘ ಬರೋಡ)
ಶ್ರೀ ಮನೋಜ್ ಸಿ ಪೂಜಾರಿ ಸೂರತ್(ನಿಕಟ ಪೂರ್ವಾಧ್ಯಕ್ಷರು ) ಜಯಂತ್ ಶೆಟ್ಟಿ ಸೂರತ್, ಸಾಧು ಪೂಜಾರಿ ಸೂರತ್, ಹರೀಶ್ ಶೆಟ್ಟಿ ಸೂರತ್, ಸುನೀತಾ ಆರ್ ಶೆಟ್ಟಿ, ಸಾಧನಾ ರಾವ್,, ಪ್ರಭಾಕರ್ ಶೆಟ್ಟಿ ಕೊಸಂಬಾ(ಉಪಾಧ್ಯಕ್ಷರು), ವಾಸು ಸುವರ್ಣ (ಗೌ.ಪ್ರ.ಕಾರ್ಯದರ್ಶಿ,ಗುಜರಾತ್ ಬಿಲ್ಲವರ ಸಂಘ)
ನವೀನ್ ಶೆಟ್ಟಿ ವಾಪಿ,
ರಾಧಾಕೃಷ್ಣ ಮೂಲ್ಯ ಕೆ(ಗೌ.ಪ್ರ.ಕಾರ್ಯದರ್ಶಿ) ಮತ್ತಿತರರು ಉಪಸ್ಥರಿದ್ದರು.
ಈ ಸಂದರ್ಭದಲ್ಲಿ ಕೊಡುಗೈ ದಾನಿ, ಹಿರಿಯ ವ್ಯಕ್ತಿ ವಸಂತ್ ಯಸ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು,
ವೇದಿಕೆ ಗಣ್ಯರು ಉಪಸ್ಥಿತಿಯಲ್ಲಿ ಕ್ರೀಡಾಕೂಟದ ಬಹುಮಾನ ವಿತರಣೆ ಮಾಡಲಾಯಿತು, ವಿಜೇತರ ಯಾದಿಯನ್ನು ಶಾಂತಿ ಡಿ ಶೆಟ್ಟಿ ವಾಚಿಸಿದರು,
ಕಾರ್ಯಕ್ರಮವನ್ನು ರಂಜನಿ ಪಿ ಶೆಟ್ಟಿ ಮತ್ತು ಪವಿತ್ರ ಬಿ ಶೆಟ್ಟಿ ನಿರೂಪಿಸಿದರು, ರಾಧಾಕೃಷ್ಣ ಮಲ ಧನ್ಯವಾದ ನೀಡಿದರು. ಮನೋರಂಜನೆ ಕಾರ್ಯಕ್ರಮದ ಅಂಗವಾಗಿ ಅಂಕಲೇಶ್ವರ ಮತ್ತು ಸೂರತ್ ಕಲಾವಿದರಿಂದ ನೃತ್ಯ ಪ್ರದರ್ಶನ, ತ್ರಿರಂಗ ಸಂಗಮ ಮುಂಬಯಿ ಹಾಗೂ ಊರಿನ ಮತ್ತು ಮುಂಬಯಿಯ ಕಲಾವಿದರ ಕೂಡುವಿಕೆಯಿಂದ ’ಪಾಪಣ್ಣ ವಿಜಯ ಗುಣಸುಂದರ” ಯಕ್ಷಗಾನ ಪ್ರದರ್ಶನ ನಡೆಯಿತು.