ದಹಿಸರ್, ಡಿ. 4: ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಸಂಸ್ಥೆ ಶ್ರೀ ಭಾಟ್ಲದೇವಿ ಅಯ್ಯಪ್ಪ ಭಕ್ತವೃಂದ ಶ್ರೀ ಬಾಟ್ಲಾದೇವಿ ಮಂದಿರ ಭರೂಚ ರೋಡ್ ದಹಿಸರ್ ಪೂರ್ವ ಇದರ 35ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಯ ಕಾರ್ಯಕ್ರಮಗಳೊಂದಿಗೆ ಡಿಸೆಂಬರ್ 7ರಂದು ದೇವಸ್ಥಾನದ ವಠಾರದಲ್ಲಿ ದಿ. ಸಚ್ಚಿದಾನಂದ ಶೆಟ್ಟಿ ಸ್ಮರಣಾರ್ಥ ವೇದಿಕೆಯಲ್ಲಿ ಶ್ರದ್ಧಾಭಕ್ತಿಯೊಂದಿಗೆ ಜರಗಲಿದೆ.
ಬೆಳಿಗ್ಗೆ ಗಂಟೆ 6:00 ರಿಂದ ಗಣ ಹೋಮ 7ರಿಂದ ಪ್ರತಿಷ್ಠಾಪನೆ ಬೆಳಿಗ್ಗೆ 10 ರಿಂದ ಹನುಮಾನ್ ಭಜನಾ ಮಂಡಳಿ ಅಶೋಕವನ ದಹಿಸರ್ ಪೂರ್ವ ಇವರಿಂದ ಭಜನೆ ಬಳಿಕ ಅಯ್ಯಪ್ಪ ಸ್ವಾಮಿ ವೃತಧಾರಿಯವರಿಂದ ಭಜನೆ ಮಧ್ಯಾಹ್ನ 12 ಗಂಟೆಯಿಂದ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಯ್ಯಪ್ಪ ಮಹಾಪೂಜೆ ಜರಗಿದ ಬಳಿಕ ಮಹಾಪ್ರಸಾದ ಅನ್ನಸಂತರ್ಪಣೆ ನೆರವೇರುವುದು . ದಹಿಸರ್ ನ ವಿನಾಯಕ ಗುರುಸ್ವಾಮಿಯವರ ದಿವ್ಯಸ್ತದಿಂದ ಧಾರ್ಮಿಕ ವಿಧಿವತ್ತವಾಗಿ ಜರಗಲಿರುವ ಅಯ್ಯಪ್ಪ ಮಹಾಪೂಜೆಗೆ ಸರ್ವ ಸದ್ಭಕ್ತರು ಆಗಮಿಸಿ ತೀರ್ಥ ಪ್ರಸಾದ ಅನ್ನ ಸಂತರ್ಪಣೆ ಸ್ವೀಕರಿಸಿಸುವಂತೆ ಗೌರವ ಅಧ್ಯಕ್ಷ ಕೃಷ್ಣ ಎಂ ಶೆಟ್ಟಿ ಅಧ್ಯಕ್ಷೆ ಲತಾ ಸಿ ಪೂಜಾರಿ ಗೌರವ ಪ್ರಧಾನ ಕಾರ್ಯದರ್ಶಿ ಮನ್ಮಥ ಆರ್. ಹೆಗ್ಡೆ ಗೌರವ ಕೋಶಾಧಿಕಾರಿ ಉಷಾ ಸಿ ಪೂಜಾರಿ ಉಪಾಧ್ಯಕ್ಷರಾದ ಶ್ರೀಧರ ಕೆ ಪೂಜಾರಿ ಜೊತೆ ಕಾರ್ಯದರ್ಶಿ ರವೀಂದ್ರ ಎಮ್ ಭಟ್ ಜೊತೆ ಕೋಶಾಧಿಕಾರಿ ಸಪ್ನಾ ಪಿ ಶೆಟ್ಟಿ ಕಾನೂನು ಸಲಹೆಗಾರ ಎಚ್ ಎಂ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸದಸ್ಯೆರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸಾಂಸ್ಕೃತಿಯ ಕಾರ್ಯಕ್ರಮದ ಅಂಗವಾಗಿ ಸಂಜೆ 6:00 ಯಿಂದ ತ್ರಿಶಾ ಸನತ್ ಶೆಟ್ಟಿ ಅವರಿಂದ ಗಣೇಶ ವಂದನ ಕಟೀಲು ದುರ್ಗೆ ದುಂಬಿಯಂತೆ ಓಡಿ ಬಂದಳು ನೃತ್ಯ , ಅಯ್ಯಪ್ಪ ಸ್ತುತಿ ಹರಿವರಸನಂ ಬಳಿಕ ವಿಜಯ ಸಾಲಲ್ಯಾನ್ ತಂಡದವರಿಂದ ಭಜನೆ ಜರಗಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಹೋಟೆಲ್ ಉದ್ಯಮಿ ಸದಾನಂದ ಕೆ ಶೆಟ್ಟಿ ಅವರನ್ನು ಭಕ್ತಾದಿಗಳ ಸಮ್ಮುಖದಲ್ಲಿ ಸನ್ಮಾನಿಸುವ ಕಾರ್ಯ ಜರಗಲಿದೆ.