
ಮುಂಬಯಿ ಉಪನಗರ ದಹಿಸರ್ ಪೂರ್ವದ ಅಯ್ಯಪ್ಪ ಸ್ವಾಮಿಯ ಪರಮಭಕ್ತ ಜಯ ಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ ಡಿ.1 ರಂದು 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾ ಪೂಜೆಯು ರಾಧಾಕೃಷ್ಣ ಮಂದಿರ ಹಾಲ್, ಸೈಂಟ್ ಥಾಮಸ್ ಸ್ಕೂಲ್ ಬಳಿ, ರಾವಲ್ಪಾಡ, ದಹಿಸರ್ ಪೂರ್ವ ಇಲ್ಲಿ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ, ಅಂಧೇರಿ ಇವರ ಮುಂದಾಳತ್ವದಲ್ಲಿ ನಡೆಯಿತು



ಅಂದು ಬೆಳಿಗ್ಗೆ ಮಹಾ ಗಣಪತಿ ಹೋಮ, ಪ್ರಾಣಪ್ರತಿಷ್ಟೆ ಪೂಜೆ, ಅರ್ಚನೆ, ನಾರಾಯಣಿಯಂ, ಕೇರಳ ಗ್ರೂಪ್ ದಹಿಸರ್ ಇವರಿಂದ ಭಜನೆ -ಬಳಿಕ ಭಜನ ಭುವಾಜಿ ಪ್ರಕಾಶ್ ಅಮೀನ್ ಮತ್ತು ಶ್ರೀದುರ್ಗಾಪರಮೇಶ್ವರಿ ಶನೀಶ್ವರ ದೇವಸ್ಥಾನ ರಾವಾಲ್ವಾಡ, ದಹಿಸರ್ ಪೂರ್ವ ಸದಸ್ಯರಿಂದ ಭಜನೆ ನಡೆಯಿತು
ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನದಾನದಲ್ಲಿ ಅಪಾರ ಸಂಖ್ಯೆರಯಲ್ಲಿ ಭಕ್ತರು ಪಾಲ್ಗೊಂಡು. ಪ್ರಸಾದವನ್ನು ಸ್ವೀಕರಿಸಿದರು
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನವದುರ್ಗಾ ಶ್ರೀ ಅಯ್ಯಪ್ಪ ಸೇವಾ ಸಂಘ ಶೈಲೇಂದ್ರ ನಗರ ದಹಿಸರ್ ಮೋಹನ್ ಗುರುಸ್ವಾಮಿ, ಅಯ್ಯಪ್ಪ ಭಕ್ತ ಸಮಿತಿ ಭಾರತಿ ಪಾರ್ಕ್ ಮೀರಾ ರೋಡ್ ನ ಜಯಶೀಲ ಗುರುಸ್ವಾಮಿ, ಆರಾಧನಾ ಅಯ್ಯಪ್ಪ ಭಕ್ತ ವೃಂದ ಭಯಂಧರ್ ನ ಸುಧಾಕರ್ ಗುರುಸ್ವಾಮಿ, ವೈಶಾಲಿ ನಗರ್ ದಹಿಸರ್ ಸತೀಶ್ ಗುರುಸ್ವಾಮಿ, ಮತ್ತು ಬಂಟರ ಸಂಘ ಮುಂಬೈಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್,ಪ್ರಕಾಶ್ ಗುರುಸ್ವಾಮಿ ಶಂಕರಪುರ ಇನ್ನಂಜೆ ಅಂಧೇರಿ ಮುಂಬೈ, ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರ ರಾವಲ್ಪಾ ಡ ದಹಿಸರ್ ಪೂರ್ವದ ಅಧ್ಯಕ್ಷರಾದ ಶೇಖರ್ ಪಿ ಶೆಟ್ಟಿ, ಉದ್ಯಮಿಗಳಾದ ಜಯ ಕೆ ಪೂಜಾರಿ, ದಿನೇಶ್ ಡಿ ಪೂಜಾರಿ, ಉದ್ಯಮಿ, ದಹಿಸರ್ ಬಂಟ್ಸ್ ಸಂಘದ ಜೋಗೇಶ್ವರಿ- ದಹಿಸರ್ ಪ್ರಾದೇಶಿಕ ಸಮಿತಿಯ ಸಂಚಾಲಕ ನಿಟ್ಟೆ ಮುದ್ದಣ್ಣ ಜಿ ಶೆಟ್ಟಿ,
ರವೀಂದ್ರ ಶೆಟ್ಟಿ, ಬಿಲ್ಡರ್ ವಿರಾರ್ ಮತ್ತಿತರ ಉದ್ಯಮಿಗಳು ಅಯ್ಯಪ್ಪ ಭಕ್ತರು ಹೋಟೆಲ್ ಮಾಲಕರು, ಚಾಲಕರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿದರು.