September 6, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ.





ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯು ಬಹಳ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮದೊಂದಿಗೆ ಜರಗಿತು.


ಪ್ರಾರಂಭದಲ್ಲಿ ಅರ್ಚಕರಾದ ಈಶ್ವರ್ ಕೋಟ್ಯಾನ್ ಅವರಿಂದ ಗುರು ಪೂಜೆ ನೆರವೇರಿತು, ತದ ನಂತರ ರಾಧಾಕೃಷ್ಣ ಶನೀಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀಯುತ ಸೋಮನಾಥ್ ಪೂಜಾರಿ ಇವರು ಮುಖ್ಯ ಅಥಿತಿಯಾಗಿ ಆಗಮಿಸಿ ರಾಷ್ಟ್ರ ಧ್ವಜಾರೋಹಣ ಮಾಡಿ ರಾಷ್ಟ್ರ ಧ್ವಜಕ್ಕೆ ಗೌರವಾರ್ಪಣೆ ಮಾಡಿದರು.
ತದ ನಂತರ ಜರಗಿದ ಸಭಾಕಾರ್ಯಕ್ರದ ಅಧ್ಯಕ್ಷತೆಯನ್ನು ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಶ್ರೀಧರ್ ಬಿ ಅಮೀನ್ ವಹಿಸಿದರು. ಮುಖ್ಯ ಅಥಿತಿಯಾದ ಸೋಮನಾಥ್ ಪೂಜಾರಿ , ಹಿರಿಯರಾದ ದೇವರಾಜ್ ಪೂಜಾರಿ, ರಾಜು ಪೂಜಾರಿ, ಪುರಂದರ ಪೂಜಾರಿ, ಮೋನಪ್ಪ ಕೋಟ್ಯಾನ್, ಮತ್ತು ಜಗನ್ನಾಥ ಸನಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾನ್ವಿ ಕೋಟ್ಯಾನ್ ಮತ್ತು ಲಿಖಿತ ಅಮೀನ್ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಯುವ ವಿಭಾಗ, ಮಹಿಳಾ ವಿಭಾಗ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ದೇಶ ಭಕ್ತಿಗೀತೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಮಾತಾಡಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಸೋಮನಾಥ ಪೂಜಾರಿಯವರು ಮಾತನಾಡುತ್ತಾ ಮಕ್ಕಳ ಮಾತಾಪಿತರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಮತ್ತು ಧರ್ಮ, ದೈವ ದೇವರ ಬಗ್ಗೆ ಮನವರಿಕೆ ಮಾಡಬೇಕು ಇದರಿಂದ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ ಶ್ರೀಧರ್ ಬಿ ಅಮೀನ್ ರವರು ಮಾತನಾಡುತ್ತಾ ನಾವೆಲ್ಲರೂ ಭಾರತಾಂಬೆಯ ಮಕ್ಕಳು ಗುರುಗಳ ತತ್ವವನ್ನು ಅನುಸರಿಸಿ ಬಾಳಬೇಕು ಎಂದು ನೋಡಿದರು.
ಗೌರವ ಕಾರ್ಯದರ್ಶಿ ಜೆ ಜೆ ಕೋಟ್ಯಾನ್ ರವರು ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಜೊತೆ ಕಾರ್ಯದರ್ಶಿ ವಿಠಲ್ ಪಿ ಅಮೀನ್ ರವರು ವಂದಿಸಿದರು.



Related posts

ಬಿಲ್ಲವರ ಅಸೋಸಿಯೇಶನ್, ಮುಂಬಯಿ ವತಿಯಿಂದ ಡಾ. ಹರಿಶ್ಚಂದ್ರ ಸಾಲ್ಯಾನರಿಗೆ ಗೌರವಾರ್ಪಣೆ.

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ 4 ಯ ಆರಾಧನ ಮಹೋತ್ಸವ.

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ

Mumbai News Desk

ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲು(ರಿ) ಪುನರ್ ನಿರ್ಮಾಣ ಮನವಿಪತ್ರ ಬಿಡುಗಡೆ.

Mumbai News Desk

ಮೊಗವೀರ ಬ್ಯಾಂಕಿನ ಆಡಳಿತ ಮಂಡಳಿ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಭೇಟಿ

Mumbai News Desk

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಜ್ರಂಭಣೆಯ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk